ಅಮ್ಮನ ಜೊತೆ ಸಖತ್ ಸ್ಟೆಪ್ ಹಾಕಿದ ವಂಶಿಕಾ: ವೈರಲ್ ಆದ ವೀಡಿಯೋಗೆ ಹರಿದು ಬಂತು ಅಭಿಮಾನಿಗಳ ಮೆಚ್ಚುಗೆ

Entertainment Featured-Articles Movies News

ನಮ್ಮಮ್ಮ ಸೂಪರ್ ಸ್ಟಾರ್ ಹೆಸರಿನ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪ್ರವೇಶ ನೀಡಿ, ತನ್ನ ಮಾತಿನ ಮೋಡಿಯಿಂದ ಅಸಂಖ್ಯಾತ ಪ್ರೇಕ್ಷಕರ ಮನಸ್ಸನ್ನು ಗೆದ್ದ ನಂತರ, ನಮ್ಮಮ್ಮ ಸೂಪರ್ ಸ್ಟಾರ್ ಮೊದಲ ಸೀಸನ್ ವಿನ್ನರ್ ಕೂಡಾ ಆದಂತಹ ವಂಶಿಕ ಇಂದು ಎಲ್ಲರಿಗೂ ಚಿರಪರಿಚಿತ. ನಮ್ಮಮ್ಮ ಸೂಪರ್ ಸ್ಟಾರ್ ನಂತರ ಗಿಚ್ಚಿ ಗಿಲಿ ಗಿಲಿ ಎನ್ನುವ ಕಾಮಿಡಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಅಲ್ಲಿಯೂ ಸಹಾ ನಾನ್ ಆ್ಯಕ್ಟರ್ ವಿಭಾಗದಲ್ಲಿ ವಿಜೇತಳಾಗುವ ಮೂಲಕ ವಂಶಿಕ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ವಂಶಿಕಾ ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಮಾಸ್ಟರ್ ಆನಂದ್ ಅವರ ಮಗಳು ಎನ್ನುವ ವಿಷಯ ಎಲ್ಲರಿಗೂ ತಿಳಿದಿದೆ.

ತಂದೆಯಂತೆಯೇ ಈಗ ಚಿಕ್ಕವಯಸ್ಸಿನಲ್ಲಿಯೇ ವಂಶಿಕಾ ಕೂಡಾ ಜನರ ಅಪಾರವಾದ ಅಭಿಮಾನವನ್ನು ಪಡೆದುಕೊಂಡು, ಸಾಕಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡು ಮುಂದೆ ಸಾಗುತ್ತಿದ್ದು, ಶೀಘ್ರದಲ್ಲೇ ಪ್ರಸಾರ ಆರಂಭಿಸಲಿರುವ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ಕ್ಕೆ ನಿರೂಪಕಿಯಾಗಿ ವಂಶಿಕಾ ಬರುತ್ತಿರುವ ವಿಷಯ ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದು ಬಂದಿದೆ. ವಂಶಿಕಾ ಕಿರುತೆರೆಯಲ್ಲಿ ಮಾತ್ರವೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿಯೂ ಭರ್ಜರಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ವಂಶಿಕಾ ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದುಕೊಂಡಿದ್ದು, ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ವಿಡಿಯೋಗಳ ಮೂಲಕ ಸಖತ್ ಸದ್ದನ್ನು ಮಾಡುವ ಮೂಲಕ ಅಲ್ಲಿಯೂ ಸಹಾ ದೊಡ್ಡಮಟ್ಟದ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾಳೆ. ತಮ್ಮ ತಂದೆ ತಾಯಿಯ ಜೊತೆ ಸೇರಿ ರೀಲ್ಸ್ ವಿಡಿಯೋಗಳನ್ನು ಮಾಡಿ, ಶೇರ್ ಮಾಡಿಕೊಳ್ಳುವ ವಂಶಿಕಾ ವಿಡಿಯೋಗಳಿಗೆ ಅಪಾರ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದುಬರುತ್ತವೆ. ಅಲ್ಲದೇ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ಬೇಗ ವೈರಲ್ ಆಗುತ್ತದೆ.

ವಂಶಿಕಾ ಜನಪ್ರಿಯತೆ ಹೆಚ್ಚಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಟೀಕೆಗಳು ಕೂಡಾ ವ್ಯಕ್ತವಾಗುವುದು ಸಾಮಾನ್ಯವಾಗಿದೆ. ಪುಟ್ಟ ಹುಡುಗಿಯನ್ನು ಶಾಲೆಗೆ ಕಳುಹಿಸುವ ಬದಲಾಗಿ ಹೀಗೆ ಕಾರ್ಯಕ್ರಮಗಳಲ್ಲಿ ಹಣ ಸಂಪಾದನೆ ಮಾಡಲು ಬಿಟ್ಟಿರುವುದು ತಪ್ಪು, ಚಿಕ್ಕ ವಯಸ್ಸಿಗೆ ಸೆಲೆಬ್ರಿಟಿ ಎನ್ನುವ ಭಾವನೆ ಮೂಡಬಾರದು ಎಂದೆಲ್ಲಾ ಕೆಲವರು ಟೀಕಿಸಿದ್ದಾರೆ. ಆದರೆ ಇಂತಹ ಯಾವುದೇ ಟೀಕೆಗಳು ವಂಶಿಕ ಪ್ರತಿಭೆಯನ್ನು ತಡೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತೆ ದಿನದಿಂದ ದಿನಕ್ಕೆ ವಂಶಿಕಾ ಜನಪ್ರಿಯತೆ ದೊಡ್ಡದಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ವಂಶಿಕಾ ಅವರ ತಾಯಿ ಯಶಸ್ವಿನಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಮಗಳು ವಂಶಿಕಾ ಜೊತೆಗೆ ಸೂಪರ್ ಹಿಟ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಅಮ್ಮ, ಮಗಳು ಇಬ್ಬರೂ ಬಹಳ ಖುಷಿಯಿಂದ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ವೀಡಿಯೋ ನೋಡಿದ ನೆಟ್ಟಿಗರು ವಂಶಿಕಾ ಡ್ಯಾನ್ಸ್ ಗೆ ಮನಸೋತಿದ್ದಾರೆ ಕಾಮೆಂಟ್ ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ನೆಟ್ಟಿಗರು ಈಗಾಗಲೇ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದು, ಅಮ್ಮ-ಮಗಳ ನೃತ್ಯವನ್ನು ಹಾಡಿ ಹೊಗಳಿದ್ದಾರೆ.

Leave a Reply

Your email address will not be published.