ಅಮೆರಿಕಾದಲ್ಲಿ ಪುಟಿನ್ ಗೆ ಅಚಾನಕ್ ಹೃದಯಾಘಾತ: ಚಿಕಿತ್ಸೆ ನಂತರ ಕೂಡಾ ಸಂಭವಿಸಿತು ಸಾವು!!

Entertainment Featured-Articles News

ಅಮೆರಿಕಾದಲ್ಲಿ ಪುಟಿನ್ ಗೆ ಇದ್ದಕ್ಕಿದ್ದ ಹಾಗೆ ಹೃದಯಾಘಾತ ಸಂಭವಿಸಿದ್ದು, ವಿಷಯ ತಿಳಿದ ಕೂಡಲೇ ವೈದ್ಯರುಗಳು ಪುಟಿನ್ ನ ಪ್ರಾಣವನ್ನು ಉಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ವೈದ್ಯರ ಸರ್ವ ಪ್ರಯತ್ನಗಳ ಹೊರತಾಗಿಯೂ ಸಹಾ ಪುಟಿನ್ ನ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಪುಟಿನ್ ಎನ್ನುವ ಹೆಸರನ್ನು ಕೇಳಿದ ಕೂಡಲೇ ಬಹುಶಃ ನಿಮಗೆಲ್ಲರಿಗೂ ಸಹಾ ಸಿಕ್ಕಾಪಟ್ಟೆ ಅಚ್ಚರಿಯಾಗಿರಬಹುದಲ್ಲವೇ?? ಹಾಗಾದರೆ ಯಾರು ಈ ಪುಟಿನ್, ಏನಿದು ಕಥೆ ಎನ್ನುವ ಕುತೂಹಲ ನಿಮ್ಮದಾದರೆ ಅದೇನೆಂದು ತಿಳಿಯೋಣ ಬನ್ನಿ. ಈ ಆಸಕ್ತಿಕರವಾದ ವಿಚಾರದ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂಡಿಪೆಂಡೆಂಟ್ ನಲ್ಲಿ ವರದಿಯಾಗಿರುವ ಮಾಹಿತಿಯ ಪ್ರಕಾರ, ಮಿನೆಸೊಟಾದ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದ ಘಟನೆ ಇದಾಗಿದೆ. ವರದಿಗಳ ಪ್ರಕಾರ ಈ ಪ್ರಾಣಿ ಸಂಗ್ರಹಾಲಯದಲ್ಲಿನ ಒಂದು ಹುಲಿಗೆ ಪುಟಿನ್ ಎನ್ನುವ ಹೆಸರನ್ನು ಇಡಲಾಗಿತ್ತು. ಈ ಹುಲಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಈ ಹುಲಿಯನ್ನು 2015 ರಲ್ಲಿ ಮಿನೆಸೊಟಾದ ಪ್ರಾಣಿ ಸಂಗ್ರಹಾಲಯಕ್ಕೆ ತರಲಾಗಿತ್ತು. ಈ ಹುಲಿಯ ಜನ್ಮ‌ ಜೆಕ್ ಗಣರಾಜ್ಯದಲ್ಲಿ ಆಗಿತ್ತು. ಅಲ್ಲೇ ಅದಕ್ಕೆ ಪುಟಿನ್ ಎನ್ನುವ ಹೆಸರನ್ನು ಇಡಲಾಗಿತ್ತು.

ಜೆಕ್ ಗಣರಾಜ್ಯ ದಿಂದ ಪುಟಿನ್ ಅನ್ನು ಮೊದಲು ಡೆನ್ಮಾರ್ಕ್ ನ ಒಂದು ಪ್ರಾಣಿ ಸಂಗ್ರಹಾಲಯದಲ್ಲಿ ಇಡಲಾಗಿತ್ತು. ಇಲ್ಲಿ ಅದನ್ನು ಆರು ವರ್ಷಗಳ ಕಾಲ ಇಡಲಾಗಿತ್ತು. ಅನಂತರ ಪುಟಿನ್ ಅನ್ನು ಮಿನೆಸೋಟಾ ಪ್ರಾಣಿ ಸಂಗ್ರಹಾಲಯಕ್ಕೆ ತರಲಾಗಿತ್ತು.
ಇಲ್ಲಿನ ಪ್ರಾಣಿ ಸಂಗ್ರಹಾಲಯದಲ್ಲಿ ಕಳೆದ 40 ವರ್ಷಗಳಿಂದಲೂ ಹುಲಿಗಳ ಆರೈಕೆಯನ್ನು ಬಹಳ ಚೆನ್ನಾಗಿ ಮಾಡಲಾಗುತ್ತಿದೆ ಎನ್ನಲಾಗಿದ್ದು, ಈ ಪರಿಸರದಲ್ಲಿ ಒಟ್ಟು 44 ಹುಲಿಗಳು ಇದುವರೆಗೂ ಜನ್ಮ ತಾಳಿವೆ ಎನ್ನಲಾಗಿದೆ. ಪುಟಿನ್ ಸಾವಿನಿಂದ ಪ್ರಾಣಿ ಸಂಗ್ರಹಾಲಯದಲ್ಲಿ ಶೋಕಾಚರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published.