ಅಮಿತಾಬ್ ಬಚ್ಚನ್ ಮನೆಗೆ ಬಾಡಿಗೆದಾರಳಾದ ಈ ನಟಿ, ತಿಂಗಳಿಗೆ ನೀಡುತ್ತಾರೆ ಲಕ್ಷ ಲಕ್ಷ ಬಾಡಿಗೆ!!!
ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಅತಿ ಹೆಚ್ಚು ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಹೆಸರು ಸದಾ ಇದ್ದೇ ಇರುತ್ತದೆ. ಮುಂಬೈ ಮಹಾನಗರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಅಮಿತಾ ಬಚ್ಚನ್ ರವರ ಆಸ್ತಿಗಳು ಇದೆ. ಇತ್ತೀಚೆಗೆ ಅಮಿತಾ ಬಚ್ಚನ್ ಅವರು ತಮ್ಮ ಒಂದು ಆಸ್ತಿಯ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಮಾದ್ಯಮ ವರದಿಗಳ ಪ್ರಕಾರ ಅಮಿತಾ ಬಚ್ಚನ್ ಅವರು ತಮ್ಮ ಪ್ರಾಪರ್ಟಿ ಒಂದನ್ನು ಬ್ಯಾಂಕ್ ಒಂದಕ್ಕೆ ಬಾಡಿಗೆಗೆ ನೀಡಿದ್ದರು, ಈ ಪ್ರಾಪರ್ಟಿ ಮೂಲಕ ಅವರು ತಿಂಗಳೊಂದಕ್ಕೆ ಲಕ್ಷಗಳ ಮೊತ್ತದಲ್ಲಿ ಬಾಡಿಗೆಯನ್ನು ಪಡೆಯುತ್ತಿದ್ದರು.
ಈಗ ಇದರ ಬೆನ್ನಲ್ಲೇ ಮತ್ತೊಂದು ಪ್ರಾಪರ್ಟಿ ವಿಚಾರವಾಗಿ ಅಮಿತಾಬ್ ಬಚ್ಚನ್ ಹಾಗೂ ಬಾಲಿವುಡ್ ಯುವ ನಟಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಈ ಯುವ ನಟಿಯು ಈಗ ಅಮಿತಾಬ್ ಅವರ ಬಾಡಿಗೆದಾರಳಾಗಿದ್ದಾರೆ. ಹೌದು ಅಮಿತಾಬ್ ಬಚ್ಚನ್ ಅವರ ಮುಂಬೈನ ಅಂದೇರಿ ಪ್ರದೇಶದಲ್ಲಿ ಇರುವಂತಹ ಡ್ಯೂಪ್ಲೆಕ್ಸ್ ಫ್ಲ್ಯಾಟನ್ನು ಬಾಲಿವುಡ್ ನ ನಟಿ ಕೃತಿ ಸೆನನ್ ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದೆ. ನಟಿಯ ಅಮಿತಾ ಬಚ್ಚನ್ ಅವರ ಜೊತೆಗೆ ಎರಡು ವರ್ಷದ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ ಈ ಡ್ಯೂಪ್ಲೆಕ್ಸ್ ಫ್ಲ್ಯಾಟನ್ನು ಬಾಡಿಗೆಗೆ ಪಡೆದಿರುವ ನಟಿ ಕೃತಿ ಸೆನನ್ ಪ್ರತಿ ತಿಂಗಳು ದೊಡ್ಡ ಮೊತ್ತದ ಬಾಡಿಗೆಯನ್ನು ಪಾವತಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. 2020ರಲ್ಲಿ ಅಮಿತಾ ಬಚ್ಚನ್ ಅವರು ನಿರ್ಮಾಣ ಹಂತದಲ್ಲಿದ್ದ ಪ್ರಾಪರ್ಟಿ ಒಂದನ್ನು ಖರೀದಿ ಮಾಡಿದ್ದರು, 2021ರ ವೇಳೆಗೆ ಅದರ ನಿರ್ಮಾಣ ಕಾರ್ಯವನ್ನು ಅವರು ಪೂರ್ತಿಗೊಳಿಸಿದರು. ಅದಕ್ಕಾಗಿ ಅಮಿತಾಬ್ ಬಚ್ಚನ್ ಅವರು ಒಂದಲ್ಲಾ ಎರಡಲ್ಲಾ ಬರೋಬ್ಬರಿ 31 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಅವರ ಒಡೆತನದಲ್ಲಿರುವ ಪ್ಲ್ಯಾಟ್ ನಲ್ಲಿ ಈಗ ಕೃತಿ ಸೆನನ್ ಅಮಿತಾಬ್ ಅವರಿಗೆ ಬಾಡಿಗೆದಾರಳಾಗಿದ್ದು, ಕೃತಿ ತಿಂಗಳೊಂದಕ್ಕೆ ನಟಿ ಬರೋಬ್ಬರಿ ಹತ್ತು ಲಕ್ಷ ರೂಪಾಯಿಗಳು ಬಾಡಿಗೆ ಪಾವತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಭದ್ರತೆಯ ದೃಷ್ಟಿಯಿಂದ 60 ಲಕ್ಷ ರೂಪಾಯಿಗಳ ಅಡ್ವಾನ್ಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಎರಡು ವರ್ಷಗಳಿಗೆ ಅಗ್ರಿಮೆಂಟ್ ಆಗಿದ್ದು, ಕೃತಿ ಈಗಾಗಲೇ ಈ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ.