ಅಮಿತಾಬ್ ಬಚ್ಚನ್ ಆಡಿದ ಎರಡು ಮಾತು, ಮುಖೇಶ್ ಖನ್ನಾ ವೃತ್ತಿ ಜೀವನವನ್ನೇ ನಿರ್ನಾಮ ಮಾಡಿತ್ತಾ??

Entertainment Featured-Articles News

ಭಾರತದ ಪರದೆಯ ಮೇಲೆ ಮೊಟ್ಟ ಮೊದಲ ಸೂಪರ್ ಹೀರೋ ಎನಿಸಿಕೊಂಡವರು ನಟ ಮುಖೇಶ್ ಖನ್ನಾ. ಮಕ್ಕಳ ಜೊತೆಗೆ ಎಲ್ಲಾ ವಯಸ್ಸಿನವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದಿದ್ದ ಮುಖೇಶ್ ಖನ್ನಾ ಅವರ ಶಕ್ತಿಮಾನ್ ಸೀರಿಯಲ್ ಅನ್ನು ಎಲ್ಲಾ ವಯಸ್ಸಿನವರೂ ಸಹಾ ನೋಡಿ ಆನಂದಿಸುತ್ತಿದ್ದರು. ನಟ ಮುಖೇಶ್ ಖನ್ನಾ ಅವರು ಟಿವಿ ಲೋಕದಲ್ಲಿ ಮಾತ್ರವೇ ಅಲ್ಲದೇ ಸಿನಿಮಾ ಲೋಕದ ಒಬ್ಬ ಜನಪ್ರಿಯ ತಾರೆ ಸಹಾ ಆಗಿದ್ದರು ಎನ್ನುವುದು ವಾಸ್ತವದ ವಿಷಯವಾಗಿದೆ. ಅವರ ಹೆಸರಿನಿಂದಲೇ ಅವರು ನಟಿಸಿದ ಪಾತ್ರಗಳು ಮುನ್ನೆಲೆಗೆ ಬಂದಿವೆ.

ಅಭಿಮಾನಿಗಳನ್ನು ತಮ್ಮ ಪಾತ್ರಗಳ ಮೂಲಕ ರಂಜಿಸಿದ್ದರು ಮುಖೇಶ್ ಖನ್ನಾ ಅವರು. ಅವರು ನಿಭಾಯಿಸಿದ ಪಾತ್ರಗಳ ಬಗ್ಗೆ ಹೇಳುವುದಾದರೆ ಮಹಾಭಾರತದಲ್ಲಿ ಭೀಷ್ಮ ಪಿತಾಮಹ, ಶಕ್ತಿಮಾನ್ ಪಾತ್ರಗಳು ಜನರ ಮನಸ್ಸಿನಲ್ಲಿ ಇಂದಿಗೂ ನೆನಪಾಗಿ ಉಳಿದುಕೊಂಡಿದೆ. ಟಿವಿ ಜಗತ್ತಿನ ಅತ್ಯಂತ ಯಶಸ್ವಿ ಕಲಾವಿದನಾಗಿ ಮುಖೇಶ್ ಖನ್ನಾ ಅವರನ್ನು ಗುರ್ತಿಸಲಾಗಿದೆ. ಟಿವಿ ಜಗತ್ತಿನಲ್ಲಿ ಹೆಸರು ಮಾಡಿದ ಅವರು ಅನಂತರ ಸಿನಿಮಾ ಮತ್ತು ಜಾಹೀರಾತು ಗಳ ಕಡೆಗೆ ಸಹಾ ಗಮನವನ್ನು ನೀಡಿದರು.

ನಿಧಾನವಾಗಿ ಅವರಿಗೆ ಸಫಲತೆ ಎನ್ನುವುದು ದೊರೆಯಲು ಆರಂಭಿಸಿತು. ಅವರು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು‌. ಸಿನಿಮಾ ಥಿಯೇಟರ್‌ ಗಳಲ್ಲೂ ಅವರು ನಟಿಸಿದ್ದ ಜಾಹೀರಾತು ಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಹೀಗೆ ಯಶಸ್ಸಿನ ಕಡೆಗೆ ಮುಖೇಶ್ ಖನ್ನಾ ಅವರು ಸಾಗುವಾಗಲೇ, ಒಮ್ಮೆ ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಸಿನಿಮಾವೊಂದನ್ನು ವೀಕ್ಷಣೆ ಮಾಡಲು ಥಿಯೇಟರ್ ಗೆ ಬಂದರು.

ಈ ವೇಳೆ ಸಿ‌ನಿಮಾ ನಡುವೆ ಮುಖೇಶ್ ಖನ್ನಾ ಅವರ ಜಾಹೀರಾತು ಪ್ರಸಾರವಾಯಿತು, ಇದನ್ನು ನೋಡಿದ ಅಮಿತಾಬ್ ಅವರು “ಕಾಪಿ ಮಾಡ್ತಾನೆ” ಎನ್ನುವ ಮಾತನ್ನು ಹೇಳಿ ಬಿಟ್ಟರು. ಇದಾದ ನಂತರ ಅಮಿತಾಬ್ ಅವರ ಒಂದು ಕಾಮೆಂಟ್ ನಿಂದಾಗಿ ಮುಖೇಶ್ ಖನ್ನಾ ಅವರ ನಾಲ್ಕು ಸಿನಿಮಾಗಳು ಸೋಲಿನ ರುಚಿಯನ್ನು ಕಂಡವು. ದಿನಗಳೆದಂತೆ ಅಮಿತಾಬ್ ಅವರು ಹೇಳಿದ್ದ ಅದೇ ಮಾತನ್ನು ಬೇರೆಯವರು ಹೇಳಲು ಆರಂಭಿಸಿದರು.

ಅನೇಕರು ಅಮಿತಾಬ್ ಅವರ ಮಾತನ್ನೇ ಅನುಸರಿಸಿದ ಮಂದಿ, ಮುಖೇಶ್ ಖನ್ನಾ ಅವರನ್ನು ಕಾಪಿ ಮಾಡುವ ವ್ಯಕ್ತಿ ಎಂದು ಟೀಕೆ ಮಾಡಿದರು. ಅವರ ಕೆಲವು ಜಾಹೀರಾತುಗಳ ಸಹಾ ವಿ ವಾ ದಕ್ಕೆ ಗುರಿಯಾದವು. ಸತತ ಸೋಲಿನಿಂದ ಕಂಗೆಟ್ಟ ಮುಖೇಶ್ ಅವರು ಸಿನಿಮಾ ಲೋಕ ತೊರೆದು ಮತ್ತೆ ಕಿರುತೆರೆಗೆ ಮರಳಿದರು. ಅಮಿತಾಬ್ ಅವರ ಆ ಎರಡು ಪದಗಳು ಮುಖೇಶ್ ಖನ್ನಾ ಅವರ ಸಿನಿಮಾ ಪಯಣವನ್ನೇ ಅವನತಿಯತ್ತ ಕೊಂಡೊಯ್ಯುವಂತೆ ಮಾಡಿತ್ತು.

Leave a Reply

Your email address will not be published. Required fields are marked *