ಅಭಿಮಾನಿ ನೀಡಿದ ಕೇಕ್ ತಿರಸ್ಕರಿಸಿದ ನಟಿ ಕಾಜೋಲ್: ನಟಿಗೆ ದುರಹಂಕಾರ ಎಂದ ನೆಟ್ಟಿಗರು

0
200

ಬಾಲಿವುಡ್ ನಲ್ಲೇ ಆಗಲೀ, ಸ್ಯಾಂಡಲ್ವುಡ್ ನಲ್ಲೇ ಆಗಲೀ ಅಥವಾ ಇನ್ನಾವುದೇ ಸಿನಿಮಾ ಇಂಡಸ್ಟ್ರಿ ಆಗಿರಬಹುದು, ಪ್ರತಿಯೊಂದು ಕಡೆಯಲ್ಲೂ ಅಭಿಮಾನಿಗಳು ತಮ್ಮ ಅಭಿಮಾನ ನಟರೆಂದರೆ ಒಂದು ವಿಶೇಷವಾದ ಪ್ರೀತಿ ಹಾಗೂ ಆದರ ವನ್ನು ತೋರಿಸುವುದು ಸಹಜವಾಗಿದೆ. ತಮ್ಮ ಅಭಿಮಾನ ನಟರ ಹುಟ್ಟು ಹಬ್ಬ, ಹೊಸ ಸಿನಿಮಾ ಬಿಡುಗಡೆ, ಅವರ ಸಿನಿಮಾ ಕ್ಕೆ ಬರುವ ಪ್ರಶಸ್ತಿ ಹೀಗೆ ಪ್ರತಿಯೊಂದನ್ನು ಸಹಾ ಸಂಭ್ರಮಿಸುವಲ್ಲಿ ಅಭಿಮಾನಿಗಳು ಸದಾ ಮುಂದೆ ಇರುತ್ತಾರೆ. ತಮ್ಮದೇ ಸಂಭ್ರಮ ಎನ್ನುವಂತೆ ಸಂತಸ ಪಡುತ್ತಾರೆ, ಕುಣಿಯುತ್ತಾರೆ, ಹಬ್ಬದಂತೆ ಖುಷಿ ಪಡುತ್ತಾರೆ. ದಕ್ಷಿಣ ಸಿನಿಮಾ ರಂಗದ ವಿಷಯಕ್ಕೆ ಬಂದರೆ ಅದು ಸ್ವಲ್ಪ ಹೆಚ್ಚಾಗಿಯೇ ಇದೆ ಎನ್ನುವುದನ್ನು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಬಾಲಿವುಡ್ ಸ್ಟಾರ್ ನಟಿಯಾಗಿ ತನ್ನದೇ ಆದ ಸ್ಥಾನವನ್ನು ಹಾಗೂ ಹೆಸರನ್ನು ಪಡೆದಿರುವ ನಟಿಯರಲ್ಲಿ ನಟಿ ಕಾಜೋಲ್ ಕೂಡಾ ಒಬ್ಬರು. ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ನಟಿ ಸ್ಟಾರ್ ನಟ ಅಜಯ್ ದೇವಗನ್ ಅವರ ಪತ್ನಿ. ಇನ್ನು ಬಾಲಿವುಡ್ ನ ಎಲ್ಲಾ ಸ್ಟಾರ್ ನಟರ ಜೊತೆಗೆ ನಟಿಸಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿರುವ ಈ ನಟಿಗೆ ಅಭಿಮಾನಿಗಳ ಸಂಖ್ಯೆ ಸಹಾ ಕಡಿಮೆಯೇನಿಲ್ಲ. ಆದ್ದರಿಂದಲೇ ಕಾಜೊಲ್ ಅವರ ಜನ್ಮದಿನ ಬಂತು ಎಂದರೆ ಅವರ ಮನೆಯ ಮುಂದೆ ಅವರ ಅಭಿಮಾನಿಗಳು ಕೇಕ್ ಹಿಡಿದು ನಿಲ್ಲುತ್ತಾರೆ. ಕಾಜೋಲ್ ಅದನ್ನು ಕತ್ತರಿಸುವುದು ವಾಡಿಕೆ. ಆದರೆ ಈ ಬಾರಿ ಅದೇ ಒಂದು ದೊಡ್ಡ ಸುದ್ದಿಯಾಗಿದೆ.

ಹೌದು ನಟಿ ಕಾಜೋಲ್ ಅವರು ಆಗಸ್ಟ್ 5 ಗುರುವಾರದಂದು ತಮ್ಮ 47 ನೇ ವಸಂತಕ್ಕೆ ಕಾಲಿರಿಸಿದ್ದು, ಬಹಳ ಸರಳವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಎಂದಿನಂತೆ ಮನೆಯ ಮುಂದೆ ಅಭಿಮಾನಿಗಳು ಬಂದಿದ್ದು, ಬಾಡಿಗಾರ್ಡ್ಸ್ ಜೊತೆ ಹೊರ ಬಂದ ಕಾಜೋಲ್ ಅಭಿಮಾನಿ ತಂದಿದ್ದ ಕೇಕ್ ಕತ್ತರಿಸಿದ್ದು, ಅದರ ಒಂದು ಪೀಸ್ ತಿನ್ನಲು ನಿರಾಕರಣೆ ಮಾಡಿ ಹೋದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವೀಡಿಯೋ ನೋಡಿ ವೈವಿದ್ಯಮಯ ವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಕಾಜೋಲ್ ಅವರ ವರ್ತನೆ‌ ಅನೇಕರಿಗೆ ಬೇಸರ ಮೂಡಿಸಿದೆ.

ಹೌದು ಅಭಿಮಾನಿಯೊಬ್ಬರು ಕಾಜೋಲ್ ಅವರಿಗಾಗಿ ಕೇಕ್ ತಂದು, ಹುಟ್ಟು ಹಬ್ಬದ ವಿಶ್ ಮಾಡುವ ಹಾಡನ್ನು ಹಾಡಿದ್ದಾರೆ, ಅನಂತರ ಕಾಜೋಲ್ ಅವರು ಕೇಕ್ ಕತ್ತರಿಸಿದ್ದಾರೆ. ಅಭಿಮಾನಿಗಳಲ್ಲಿ ಒಬ್ಬರು ಕೇಕ್ ನ ಒಂದು ಪೀಸ್ ನೀಡಲು ಹೋದಾಗ ಕಾಜೋಲ್ ಬೇಡ ಎಂದು ನಿರಾಕರಿಸುತ್ತಾರೆ. ಕೇಕ್ ಕತ್ತರಿಸಿ ಅವರು ಮನೆಯೊಳಗೆ ಹೋಗಿ ಬಿಡುತ್ತಾರೆ. ಕಾಜೋಲ್ ಅವರ ಈ ವರ್ತನೆಯನ್ನು ನೋಡಿ ನೆಟ್ಟಿಗರು ಬಹಳ ಸಿಟ್ಟಾಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ನಟಿಗೆ ದು ರ ಹಂಕಾರ ಎಂದರೆ,‌ಇನ್ನೂ ಕೆಲವರು ಇದೇ ಕೇಕನ್ನು ಬಡವರಿಗೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು, ಹೀಗೇಕೆ ಹಣ,‌ಶ್ರಮ ಹಾಗೂ ಸಮಯ ವ್ಯರ್ಥ ಮಾಡುವಿರಿ ಎಂದಿದ್ದಾರೆ.‌

LEAVE A REPLY

Please enter your comment!
Please enter your name here