ಅಭಿಮಾನಿಯ ಖುಷಿಗಾಗಿ ಆತನ ಎದೆ ಮೇಲೆ ಆಟೋಗ್ರಾಫ್ ಹಾಕಿದ ರಶ್ಮಿಕಾ: ವೀಡಿಯೋ ಸಖತ್ ವೈರಲ್

Featured-Articles Entertainment Movies News

ರಶ್ಮಿಕಾ ಮಂದಣ್ಣ ಪ್ರಸ್ತುತ ದಕ್ಷಿಣ ಸಿನಿಮಾಗಳು ಮಾತ್ರವೇ ಅಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಸಹಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.‌ ಕೆಲವೇ ದಿನಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ‌ ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಜೊತೆಗೆ ನಟಿಸಿರುವ ಗುಡ್ ಬೈ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಅದಕ್ಕೆ ಮೆಚ್ಚುಗೆಯ ಮಹಾಮಳೆಯೇ ಸುರಿದಿದೆ. ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ‌ ಒಂದು ಕಡೆ ಟ್ರೋಲ್ ಆಗುತ್ತಿದ್ದರೂ ಸಹಾ ಮತ್ತೊಂದು ಕಡೆ ದಿನ ಕಳೆದಂತೆ ನಟಿಯ ಬೇಡಿಕೆಯ ಜೊತೆಗೆ, ಅಭಿಮಾನಿಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ.

ರಶ್ಮಿಕಾ ಅಭಿನಯದ ಮಿಷನ್ ಮಜ್ನು ಸಿನಿಮಾ ಸಹಾ ಬಿಡುಗಡೆಯಾಗಬೇಕಿದೆ. ಬಾಲಿವುಡ್ ನಲ್ಲಿ ಮೊದಲ ಎರಡು ಸಿನಿಮಾಗಳು ಬಿಡುಗಡೆಗೆ ಮುನ್ನವೇ ಬಾಲಿವುಡ್ ನ ಸ್ಟಾರ್ ನಟ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ, ತಮಿಳಿನಲ್ಲಿ ದಳಪತಿ ವಿಜಯ್ ಅವರ ಮುಂದಿನ ಸಿನಿಮಾ ವಾರಿಸುದಲ್ಲಿ ಸಹಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ತೆಲುಗಿನಲ್ಲಿ ಸದ್ಯಕ್ಕೆ ರಶ್ಮಿಕಾ ಯಾವುದೇ ಹೊಸ ಸಿನಿಮಾ ಮಾಡುತ್ತಿರುವ ವಿಚಾರವಾಗಿ ಯಾವುದೇ ಹೊಸ ಅಪ್ಡೇಟ್ ಗಳು ಇಲ್ಲ. ಆದರೆ ರಶ್ಮಿಕಾ ಇದ್ದ ಕಡೆ ಸುದ್ದಿಯಂತೂ ಖಂಡಿತ.

ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ನಟಿ ರಶ್ಮಿಕಾಗೆ ದಕ್ಷಿಣದ ಸ್ಟಾರ್ ನಟರನ್ನು ಸಹಾ ಮೀರಿಸುವಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಸಹಾ ಹೆಚ್ಚಾಗುತ್ತಲೇ ಇದೆ. ಸೋಶಿಯಲ್ ಮೀಡಿಯಾಗಳಲ್ಲಿ ರಶ್ಮಿಕಾ ಅಭಿಮಾನಿಯೊಬ್ಬರ ಅಭಿಮಾನಿ ಹಾಗೂ ನಟಿಯು ಅಭಿಮಾನಿಯ ಜೊತೆ ನಡೆದುಕೊಂಡ ರೀತಿ ಹೇಗಿತ್ತು ಎನ್ನುವುದನ್ನು ತೋರಿಸುವ ವೀಡಿಯೋ ಭರ್ಜರಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ನಟಿಯ ಅಭಿಮಾನಿಗಳು ಮೆಚ್ಚುಗೆಗಳನ್ನು ಸೂಚಿಸುತ್ತಿದ್ದು, ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದೆ.

ನಟಿ ರಶ್ಮಿಕಾ ಮಂದಣ್ಣ ಯಾವುದೋ ಕಾರ್ಯಕ್ರಮ ಅಥವಾ ಫೋಟೋ ಶೂಟ್ ಮುಗಿಸಿಕೊಂಡು ಹೊರ ಬರುವ ವೇಳೆಯಲ್ಲಿ ಅಲ್ಲೇ ಕಾದಿದ್ದ ಅಭಿಮಾನಿಯೊಬ್ಬರು ನಟಿಯ ಬಳಿ ಆಟೋಗ್ರಾಫ್ ಪಡೆಯಲು ಬಂದಿದ್ದಾರೆ. ನಟಿ ಸಹಾ ಆಟೋಗ್ರಾಫ್ ನೀಡಲು ಮುಂದಾಗಿದ್ದಾರೆ. ಆದರೆ ಆ ಯುವಕ ತನ್ನ ಎದೆಯ ಮೇಲೆ ಆಟೋಗ್ರಾಫ್ ಹಾಕುವಂತೆ ನಟಿಯನ್ನು ಕೇಳಿದ್ದಾನೆ. ಮೊದಲಿಗೆ ಸ್ವಲ್ಪ ಹಿಂಜರಿದ ನಟಿ, ಅನಂತರ ಯಾವುದೇ ಮುಜುಗರ ಪಡದೇ ಖುಷಿಯಿಂದಲೇ ಅಭಿಮಾನಿಯು ಧರಿಸಿದ್ದ ಟೀ ಶರ್ಟ್ ಮೇಲೆ ಎದೆಯ ಭಾಗದಲ್ಲಿ ಆಟೋಗ್ರಾಫ್ ಹಾಕಿದ್ದಾರೆ. ಆ ಯುವಕ ಬಹಳ ಸಂತೋಷದಿಂದ ನಟಿಯ ಕೈಗಳನ್ನು ಹಿಡಿದು ಧನ್ಯವಾದಗಳನ್ನು ಹೇಳಿದ್ದಾನೆ.

ಅಭಿಮಾನಿಯ ಇಂತಹುದೊಂದು ವಿಚಿತ್ರವಾದ ಬೇಡಿಕೆಯನ್ನು ನಟಿ ರಶ್ಮಿಕಾ ಬಹಳ ಸಂತೋಷದಿಂದಲೇ ಒಪ್ಪಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಸಹಾ ಖುಷಿಯಾಗಿದ್ದಾರೆ‌. ನಟಿಯು ಅಭಿಮಾನಿಯ ಕಡೆ ತೋರಿದ ಆಪ್ಯಾಯತೆಯನ್ನು ಕಂಡು ವೀಡಿಯೋಗೆ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡುತ್ತಾ ತಮ್ಮ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ಈ ವೀಡಿಯೊ ಈಗಾಗಲೇ ಅಸಂಖ್ಯಾತ ಮಂದಿ ನೆಟ್ಟಿಗರಿಂದ ವೀಕ್ಷಿಸಲ್ಪಟ್ಟಿದೆ. ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಮತ್ತೊಮ್ಮೆ ರಶ್ಮಿಕಾ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ.

Leave a Reply

Your email address will not be published.