ಬಿಗ್ ಬಾಸ್ ಸೀಸನ್ ಎಂಟರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದವರು ನಟಿ ಪ್ರಿಯಾಂಕ ತಿಮ್ಮೇಶ್ ಅವರು. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಮನೆಯೊಳಗೆ ಬಂದಿದ್ದ ಪ್ರಿಯಾಂಕ ತಿಮ್ಮೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕ ತಿಮ್ಮೇಶ್ ಅವರು ಇದೀಗ ಬಹಳ ಖುಷಿ ಪಡುವ ಘಟನೆಯೊಂದು ನಡೆದಿದ್ದು, ಪ್ರಿಯಾಂಕ ತಿಮ್ಮೇಶ್ ಅವರು ಆ ಒಂದು ಮಧುರವಾದ ಅನುಭವದ ಬಗ್ಗೆ ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ. ಪ್ರಿಯಾಂಕ ಅವರಿಗೆ ತಮ್ಮ ಅಭಿಮಾನಿಗಳು ತೋರಿಸುತ್ತಿರುವ ಅಪಾರವಾದ ಅಭಿಮಾನದಿಂದ ಸಂತೋಷಗೊಂಡಿದ್ದಾರೆ. ಅಭಿಮಾನಿಗಳ ಅನನ್ಯ ಪ್ರೀತಿಗೆ ಮನ ಸೋತಿದ್ದಾರೆ ಪ್ರಿಯಾಂಕ ತಿಮ್ಮೇಶ್ ಅವರು.
ಅಭಿಮಾನಿಯೊಬ್ಬರ ಪತ್ರವನ್ನು ಓದಿರುವ ಪ್ರಿಯಾಂಕ ಅವರು ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರು ಆ ಪತ್ರದಲ್ಲಿನ ಸಾರವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಪತ್ರ ಬರೆದವರು, “ಅಚ್ಚುಮೆಚ್ಚಿನ ಪಿಂಕಿ ಅಕ್ಕ, ನೀವು ಒಬ್ಬ ಹೃದಯವಂತ ವ್ಯಕ್ತಿ. ನೀವು ನನಗೆ ಎಷ್ಟು ಮುಖ್ಯ ಎನ್ನುವುದನ್ನು ಹೇಳುವುದಕ್ಕೆ ನನಗೆ ಸರಿಯಾದ ಪದಗಳು ಸಿಗುತ್ತಿಲ್ಲ, ನಿಮ್ಮಂತಹ ಸುಂದರ, ಮೃದು ಹಾಗೂ ಮಧುರವಾದ ವ್ಯಕ್ತಿ ಇನ್ನೊಬ್ಬರಿಲ್ಲ. ನಿಮಗೆ ಈ ಪತ್ರ ಬರೆಯುವಾಗ ನೀವೊಬ್ಬ ಸೆಲೆಬ್ರಿಟಿ ಎನ್ನುವ ಭಾವನೆ ಬದಲು, ನಾನು ಒಬ್ಬ ಉತ್ತಮ ಸ್ನೇಹಿತನ ಜೊತೆ ಮಾತನಾಡುತ್ತಿದ್ದೇನೆ ಎನಿಸಿತ್ತು” ಎಂದು ಬರೆದಿದ್ದಾರೆ.
ಬಿಗ್ ಬಾಸ್ ನಂತರ ಪ್ರಿಯಾಂಕ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ತಮ್ಮ ಈ ಜನಪ್ರಿಯತೆಯನ್ನು ಹಾಗೂ ಅಭಿಮಾನಿಗಳ ಅಭಿಮಾನವನ್ನು ಎಂಜಾಯ್ ಮಾಡುತ್ತಿರುವಂತೆ ಕಂಡಿದೆ. ಪ್ರಿಯಾಂಕ ಅವರು ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ಚಕ್ರವರ್ತಿ ಚಂದ್ರಚೂಡ್ ಮನೆ ಪ್ರವೇಶಿಸಿದಾಗ ತಾವು ಪ್ರವೇಶ ನೀಡಿದ್ದರು. ಇತ್ತೀಚಿಗೆ ಅವರು ದೂರದರ್ಶನದಲ್ಲಿ ಒಂದು ಪ್ರಶಸ್ತಿ ಸಮಾರಂಭದಲ್ಲಿ ಸಹಾ ಭಾಗವಹಿಸಿದ್ದರು. ವೃತ್ತಿ ಪರವಾಗಿ ಅವರು ಅರ್ಜುನ್ ಗೌಡ ಮತ್ತು ಪ್ರಜ್ವಲ್ ದೇವರಾಜ್ ಲೀಡ್ ರೋಲ್ ನಲ್ಲಿರುವ ಶುಗರ್ ಲೆಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.