ಅಭಿಮಾನಿಗಳ ಖುಷಿಗಾಗಿ ಹೊಸ ಹೆಜ್ಜೆ ಇಟ್ಟ ರಶ್ಮಿಕಾ ಮಂದಣ್ಣ‌: ನ್ಯಾಷನಲ್ ಕ್ರಶ್ ಬಗ್ಗೆ ಅಭಿಮಾನಿಗಳು ಸಖತ್ ಖುಷಿ

Entertainment Featured-Articles News Viral Video

ತನ್ನ ಕ್ಯೂಟ್ ಎಕ್ಸ್ಪ್ರೆಷನ್ ಗಳು, ತುಂಟಾಟಗಳು, ಆಡುವ ಮಾತುಗಳ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಸದ್ಯ ದಕ್ಷಿಣ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿ ಇರುವ ಸ್ಟಾರ್ ನಟಿ ಹಾಗೂ ಅಭಿಮಾನಿಗಳ ಪಾಲಿಗೆ ಸಿಕ್ಕಾಪಟ್ಟೆ ಕ್ರೇಜ್ ಪಡೆದಿರುವ ನಟಿಯೂ ಹೌದು. ರಶ್ಮಿಕಾ ಎಂದರೆ ಸುದ್ದಿ, ರಶ್ಮಿಕಾ ಎಂದರೆ ಗಾಸಿಪ್, ರಶ್ಮಿಕಾ ಎಂದರೆ ಟ್ರೋಲ್ ಎನ್ನುವುದು ಸಾಮಾನ್ಯ. ರಶ್ಮಿಕಾ ಜನಪ್ರಿಯತೆಗೆ ಇದೆಲ್ಲವು ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಭಾರೀ ಹಿಂಬಾಲಕರ ಸಂಖ್ಯೆಯೇ ಇದೆ ಈ ನಟಿಗೆ.

ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದ ಹಿಂಬಾಲಕರು ಇರುವ ಕಾರಣದಿಂದಲೇ ರಶ್ಮಿಕಾ ಆಗಾಗ ಶೇರ್ ಮಾಡುವ ಫ್ಯಾಶನಬಲ್ ಫೋಟೋಗಳಿಗೆ ಲಕ್ಷಗಳ ಸಂಖ್ಯೆಯಲ್ಲಿ ಮೆಚ್ಚುಗೆಗಳು, ಕಾಮೆಂಟ್ ಗಳು ಹರಿದು ಬರುತ್ತವೆ. ಇದೀಗ ಈ ಹಿನ್ನೆಲೆಯಲ್ಲಿ ರಶ್ಮಿಕಾ ತಾನು ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುವ ಸಲುವಾಗಿ ಒಂದು ಹೊಸ ಹೆಜ್ಜೆಯನ್ನು ಇಡಲು ಮುಂದಾಗಿದ್ದಾರೆ ರಶ್ಮಿಕಾ ಮಂದಣ್ಣ. ಹಾಗಾದ್ರೆ ಏನದು ಹೊಸ ಹೆಜ್ಜೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.

ನಟಿ ರಶ್ಮಿಕಾ ಬಗ್ಗೆ ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿಯಲು, ಅವರ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಮಾಹಿತಿ ಪಡೆಯಲು ಅವರ ಅಭಿಮಾನಿಗಳು ಸದಾ ಕಾತರತೆಯಿಂದ ಇರುತ್ತಾರೆ. ಇದನ್ನು ಅರಿತಿರುವ ರಶ್ಮಿಕಾ ಈಗ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡಲು ಸಜ್ಜಾಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಸಂತೋಷವನ್ನು ನೀಡಲು ಪುಷ್ಪ ಶ್ರೀವಲ್ಲಿ ಖ್ಯಾತಿಯ ರಶ್ಮಿಕಾ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭ ಮಾಡಿದ್ದಾರೆ. ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಒಂದು ವೀಡಿಯೋ ಸಹಾ ಶೇರ್ ಮಾಡಿದ್ದಾರೆ.

ರಶ್ಮಿಕಾ ಶೇರ್ ಮಾಡಿದ ವೀಡಿಯೋದಲ್ಲಿ ತನ್ನ ವೃತ್ತಿಪರ, ವೈಯಕ್ತಿಕ ಜೀವನಕ್ಕೆ ಸಂಬಂದಿಸಿದ ಕೆಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ ರಶ್ಮಿಕಾ. ಟ್ರಾವೆಲಿಂಗ್, ಆ್ಯಕ್ಟಿಂಗ್ ಮತ್ತು ಡ್ಯಾನ್ಸಿಂಗ್ ಎಂದರೆ ತನಗೆ ಬಹಳ ಇಷ್ಟವೆಂದು ರಶ್ಮಿಕಾ ಹೇಳಿ ಕೊಂಡಿದ್ದಾರೆ. ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ತನ್ನ ಮಾಜಿ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ.

Leave a Reply

Your email address will not be published.