ಅಭಿಮಾನಿಗಳ ಕನಸಾಯ್ತು ನನಸು: ಎಲ್ಲಾ ಮರೆತು ಒಂದಾಗಲು ಸಜ್ಜಾದ ಸಮಂತಾ, ನಾಗಚೈತನ್ಯ!!

Entertainment Featured-Articles Movies News

ದಕ್ಷಿಣ ಸಿನಿಮಾ ರಂಗದಲ್ಲಿ ಸದ್ಯಕ್ಕೆ ಟಾಕ್ ಆಫ್ ದಿ ಟೌನ್ ಆಗಿರುವ ನಟಿ ಯಾರು ಅನ್ನೋದಾದ್ರೆ ಅನುಮಾನವೇ ಇಲ್ಲದೇ, ಯಾವುದೇ ಗೊಂದಲ ಇಲ್ಲದೇ ಸಮಂತಾ ಎಂದು ಹೇಳಿದರೆ ಖಂಡಿತ ತಪ್ಪಾಗಲ್ಲ. ಒಂದಲ್ಲಾ ಒಂದು ವಿಚಾರಕ್ಕೆ ಸಮಂತಾ ಸುದ್ದಿಯಾಗಿತ್ತಲೇ ಇರುತ್ತಾರೆ. ಕೆಲವು ದಿನಗಳ ಕಾಲ ತಮ್ಮ ಖಾಸಗಿ ಜೀವನದ ವಿಚಾರವಾಗಿ ಸಾಕಷ್ಟು ಸುದ್ದಿಯಾದ, ಟ್ರೋಲ್ ಆದ , ಟೀಕೆಗಳಿಗೆ ಗುರಿಯಾದ ಸಮಂತಾ, ಅನಂತರ ತಮ್ಮ ವೃತ್ತಿ ಜೀವನದ ವಿಚಾರವಾಗಿ ಸುದ್ದಿಯಾಗಲು ಆರಂಭಿಸಿದರು. ಪುಷ್ಪ ಸಿನಿಮಾದ ಒಂದು ಹಾಡಿನ ನಂತರ ಸಮಂತಾ ಕ್ರೇಜ್ ಯಾವ ರೀತಿ ಚೇಂಜ್ ಆಗಿದೆ ಎನ್ನುವುದನ್ನು ಊಹೆ ಮಾಡುವುದು ಸಹಾ ಸಾಧ್ಯವಿಲ್ಲ ಎನ್ನುವಂತಿದೆ.

ಒಂದು ಕಡೆ ಸಮಂತಾ ದಕ್ಷಿಣ ಸಿನಿಮಾಗಳು ಮಾತ್ರವೇ ಅಲ್ಲದೇ ಬಾಲಿವುಡ್ ಗೂ ಎಂಟ್ರಿ ನೀಡಿದ್ದಾರೆ‌. ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದಾರೆ‌. ಸಮಂತಾ ಹಾಲಿವುಡ್ ಗೆ ಎಂಟ್ರಿ ನೀಡಲಿದ್ದಾರೆ ಎನ್ನುವುದು ಸಹಾ ಸುದ್ದಿಯಾಗಿದೆ. ಮುಂಬೈನಲ್ಲಿ ಮನೆ ಖರೀದಿ ಮಾಡುತ್ತಿರುವ ಸಮಂತಾ ಅಲ್ಲಿಗೆ ಶಿಫ್ಟ್ ಆಗುತ್ತಾರೆ ಎನ್ನುವ ವಿಚಾರಗಳು ಸಹಾ ಹರಿದಾಡಿದೆ.‌ ಇನ್ನು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಸಮಂತಾ ಅವರ ಬಹು ನಿರೀಕ್ಷಿತ ಸಿನಿಮಾಗಳ ಬಿಡುಗಡೆಗೆ ಅವರ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ.

ಈಗ ಇವೆಲ್ಲವುಗಳ ನಡುವೆ ಟಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿಯೊಂದು ಇನ್ನಷ್ಟು ಕುತೂಹಲವನ್ನು ಮೂಡಿಸಿದೆ. ಹೌದು, ಸಮಂತಾ ಹಾಗೂ ನಾಗಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ವಿಚ್ಚೇದನದ ಮೂಲಕ ವಿದಾಯ ಹೇಳಿದ ನಂತರ ಎಲ್ಲೂ ಸಹಾ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಅಂತಹುದೊಂದು ಸಂದರ್ಭ ಸಹಾ ಒದಗಿ ಬಂದಿಲ್ಲ ಎಂದರೂ ಅದು ಸುಳ್ಳಲ್ಲ. ಆದರೆ ಈಗ ಟಾಲಿವುಡ್ ನಲ್ಲಿ ಮತ್ತೊಮ್ಮೆ ನಾಗಚೈತನ್ಯ ಮತ್ತು ಸಮಂತಾ ಒಂದಾಗಲಿದ್ದಾರೆ ಎನ್ನುವ ವಿಚಾರವೊಂದು ಹರಿದಾಡಿದ್ದು, ಈ ಸುದ್ದಿ ಈಗ ಸಖತ್ ಸೌಂಡ್ ಮಾಡ್ತಾ ಇದೆ. ಹಾಗಾದ್ರೆ ಏನು ಈ ವಿಷಯದ ಹಿಂದಿನ ಸತ್ಯ ಅನ್ನೋದಕ್ಕೆ ಇಲ್ಲಿದೆ ಮಾಹಿತಿ.

ನಾಲ್ಕು ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ ಸಮಂತಾ ಮತ್ತು ನಾಗಚೈತನ್ಯ ಅವರು ಬೇರೆಯಾದಾಗ ಇದು ಅವರ ಅಭಿಮಾನಿಗಳಿಗೆ ಬಹಳ ಬೇಸರವನ್ನು ಉಂಟು ಮಾಡಿತ್ತು. ಅಲ್ಲದೇ ಅವರಿಬ್ಬರು ಮತ್ತೆ ಒಂದಾಗಲೆಂದು ಆಶಿಸಿದ್ದರು. ಈಗ ಅಭಿಮಾನಿಗಳ ಆಸೆ ನೆರವೇರಲಿದೆ ಎನ್ನಲಾಗಿದ್ದು, ಆದರೆ ಅದು ಅವರ ನಿಜ ಜೀವನದಲ್ಲಿ ಅಲ್ಲ, ಬದಲಾಗಿ ತೆರೆಯ ಮೇಲೆ ಈ ಜೋಡಿ ಮತ್ತೆ ಒಂದಾಗಲಿದ್ದಾರೆ ಎನ್ನಲಾಗಿದೆ‌. ಟಾಲಿವುಡ್ ನಲ್ಲಿ ನಾಗಚೈತನ್ಯ ಮತ್ತು ಸಮಂತಾ ಜೋಡಿಯಾಗಿ ಹೊಸ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಬಹು ದಿನಗಳ ನಂತರ ಅಭಿಮಾನಿಗಳಿಗೆ ಈ ಜೋಡಿಯನ್ನು ಒಟ್ಟಿಗೆ ನೋಡುವ ಖುಷಿ ಸಿಗಲಿದೆ ಎನ್ನಲಾಗುತ್ತಿದೆ.

Leave a Reply

Your email address will not be published.