ಅಭಿಮಾನಿಗಳ ಒಳಿತಿಗಾಗಿ ದೊಡ್ಡ ಮೊತ್ತ ತಿರಸ್ಕರಿಸಿ, ಅಂತ ಜಾಹೀರಾತು ಮಾಡಲ್ಲ ಎಂದ ಅಲ್ಲು ಅರ್ಜುನ್!!

Entertainment Featured-Articles News

ಸಿನಿಮಾ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಜನಪ್ರಿಯತೆ ಪಡೆದ ನಂತರ ಹಲವು ಸುಪ್ರಸಿದ್ಧ ಬ್ರಾಂಡ್ ಗಳ ಅಂಬಾಸಿಡರ್ ಗಳಾಗಿ, ಆ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು, ಅವುಗಳನ್ನು ಪ್ರಮೋಟ್ ಮಾಡುತ್ತಾರೆ. ಅಲ್ಲದೇ ಈ ವಿಚಾರವಾಗಿ ಒಂದಷ್ಟು ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಅನೇಕರಲ್ಲಿ ಅಸಮಾಧಾನ ಸಹಾ ಇದೆ. ಏಕೆಂದರೆ ಕೆಲವು ನಟರು ತಂಬಾಕು ಉತ್ಪನ್ನಗಳಿಗೂ ಜಾಹೀರಾತು ನೀಡುವ ಮೂಲಕ ಜನರನ್ನು ಕೆಟ್ಟ ಚಟಗಳ ಕಡೆಗೆ ದೂಡಲು ಪ್ರೇರೇಪಣೆ ನೀಡುತ್ತಿದ್ದಾರೆ ಎನ್ನುವ ಅಸಮಾಧಾನ ಸಹಜವಾಗಿಯೇ ಇದೆ.

ಈಗಾಗಲೇ ಕೆಲವು ಬಾಲಿವುಡ್ ಸ್ಟಾರ್ ಗಳು ತಂಬಾಕು ಉತ್ಪನ್ನಗಳ ಜಾಹೀರಾತು ನೀಡುತ್ತಿದ್ದು, ಅವುಗಳನ್ನು ನೋಡಿದ್ದೇವೆ. ಆದರೆ ಇದೇ ವೇಳೆ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಕಂಗನಾ ರಣಾವತ್, ನಟಿ ಸಾಯಿ ಪಲ್ಲವಿ ತಾವು ಜನರ ಗುರಿ ತಪ್ಪಿಸುವ ಜಾಹೀರಾತುಗಳನ್ನು ಮಾಡುವುದಿಲ್ಲ ಎನ್ನುವ ಮೂಲಕ ಜನ ಮೆಚ್ಚುಗೆಯನ್ನು ಗಳಸಿಕೊಂಡಿದ್ದಾರೆ. ಈಗ ಅದೇ ಸಾಲಿಗೆ ದಕ್ಷಿಣ ಸಿನಿಮಾ ರಂಗದ ಮತ್ತೊಬ್ಬ ಸ್ಟಾರ್ ನಟ ಸಹಾ ಸೇರ್ಪಡೆಯಾಗಿದ್ದಾರೆ.

ಪುಷ್ಪ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಖ್ಯಾತಿಯನ್ನು ಪಡೆದುಕೊಂಡಿರುವ ನಟ ಅಲ್ಲು ಅರ್ಜುನ್ ಅವರು ಈಗ ಒಂದು ಮಹತ್ವದ ನಿರ್ಧಾರವನ್ನು ಮಾಡಿದ್ದಾರೆ. ನಟ ಅಲ್ಲು ಅರ್ಜುನ್ ಅವರಿಗೆ ತಂಬಾಕು ಉತ್ಪನ್ನವೊಂದರ ಜಾಹೀರಾತಿನ ಆಫರ್ ನೀಡಿಲಾಗಿದ್ದು, ಅದರ ಜಾಹೀರಾತಿಗಾಗಿ ನಟನಿಗೆ ದೊಡ್ಡ ಮೊತ್ತದ ಹಣವನ್ನು ಸಹಾ ಆಫರ್ ನೀಡಲಾಗಿದೆ ಎಂದು ತಿಳಿದು ಬಂದಿದ್ದು, ಆದರೆ ನಟ ಅಲ್ಲು ಅರ್ಜುನ್ ಅದನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಹೌದು, ನಟ ಅಲ್ಲು ಅರ್ಜುನ್ ಅವರು ತಾನು ಇಂತಹುದೊಂದು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಅದರಿಂದ ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡಿದಂತಾಗುವುದು, ಅಲ್ಲದೇ ಅಭಿಮಾನಿಗಳು ಸಹಾ ತಂಬಾಕು ಉತ್ಪನ್ನಗಳನ್ನು ಬಳಸಲು ಮುಂದಾಗಿ ಬಿಡುವರು. ಆದ್ದರಿಂದ ಅಭಿಮಾನಿಗಳ ಯೋಗ ಕ್ಷೇಮವನ್ನು ಗಮನದಲ್ಲಿ ಇರಿಸಿಕೊಂಡು ತಾನು ಜಾಹೀರಾತನ್ನು ತಿರಸ್ಕರಿಸುವುದಾಗಿ ಹೇಳುವ ಮೂಲಕ ಮಾದರಿಯಾಗಿ, ಎಲ್ಲರ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *