ರಶ್ಮಿಕಾ ನಾಯಕಿ ಅಗಿರೋ ಸಿನಿಮಾಕ್ಕೆ ಸಮಂತಾ‌ ಎಂಟ್ರಿ!! ಯಾರ ಚಾರ್ಮ್ ಅಭಿಮಾನಿಗಳಿಗೆ ಥ್ರಿಲ್ ನೀಡಲಿದೆ??

Written by Soma Shekar

Updated on:

---Join Our Channel---

ನಾಗ ಚೈತನ್ಯ ಜೊತೆಗೆ ವಿಚ್ಚೇದನ ಪಡೆದ ಮೇಲೆ ನಟಿ ಸಮಂತಾ ತಮ್ಮ ಹೆಚ್ಚು ಗಮನವನ್ನು ಸಿನಿಮಾಗಳ ಕಡೆಗೆ ವಹಿಸಿದ್ದಾರೆ. ಹೊಸ ಹೊಸ ಸಿನಿಮಾಗಳ ಆಫರ್ ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೆಲವೇ ಸಮಯದ ಹಿಂದೆ ಸಮಂತಾ ಶಾಕುಂತಲಂ ಸಿನಿಮಾವನ್ನು ಮುಗಿಸಿದ್ದಾರೆ. ಬಾಲಿವುಡ್ ನಿಂದ ಸಹಾ ಹೊಸ ಹೊಸ ಆಫರ್ ಗಳು ಸಮಂತಾ ಅವರನ್ನು ಅರಸಿ ಬರುತ್ತಿವೆ ಎನ್ನಲಾಗಿದೆ. ಈಗ ಇವೆಲ್ಲವುಗಳ ನಡುವೆ ಹೊಸದೊಂದು ಸುದ್ದಿ ಸದ್ದು ಮಾಡಿದ್ದು, ಸಮಂತಾ ಅಭಿಮಾನಿಗಳು ಈ ಸುದ್ದಿ ಕೇಳಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.‌

ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಹೊಸ ಸುದ್ದಿಯೊಂದರ ಪ್ರಕಾರ ನಟಿ ಸಮಂತಾ ಸಿನಿಮಾವೊಂದರಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಹೌದು ಸಮಂತಾ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಸಿನಿಮಾದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಸಮಂತಾ ಈ ಹಾಡಿಗೆ ಹೆಜ್ಜೆ ಹಾಕಲು ಒಪ್ಪಿಗೆ ನೀಡಿರುವುದು ಮಾತ್ರ ನಿಜ ಎನ್ನುವ ಸುದ್ದಿ ಮಾತ್ರ ಟಾಲಿವುಡ್ ನಲ್ಲಿ ಬಹಳ ಗಮನ ಸೆಳೆದಿದೆ.

ಪುಷ್ಪ ಸಿನಿಮಾ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಇದೊಂದು ಹಾಡು ಬಾಕಿಯಿದೆ. ಈ ಹಾಡಿಗೆ ಮೊದಲು ಬಾಲಿವುಡ್ ಬೆಡಗಿಯರಾದ ದಿಶಾ ಪಾಟ್ನಿ, ಸನ್ನಿ ಲಿಯೋನಿ, ಪೂಜಾ ಹೆಗ್ಡೆ ಹೆಸರುಗಳು ಕೇಳಿ ಬಂದಿದ್ದವು. ಅನಂತರ ಮತ್ತೋರ್ವ ಜನಪ್ರಿಯ ಡಾನ್ಸರ್ ನೋರಾ ಫತೇಹಿ ಹೆಸರು ಕೂಡಾ‌ ಕೇಳಿ ಬಂದಿತ್ತು. ಅಲ್ಲದೇ ನೋರಾ‌ ಒಂದು ಹಾಡಿಗೆ 2 ಕೋಟಿ ಸಂಭಾವನೆ ಬೇಡಿಕೆ ಇಟ್ಟ ಕಾರಣ ಚಿತ್ರತಂಡವು ನೋರಾ ಫತೇಹಿ ಹೆಸರನ್ನು ಕೂಡಾ ಕೈ ಬಿಟ್ಟಿತ್ತು ಎನ್ನಲಾಗಿದೆ.‌

ಈಗ ಕೊನೆಗೆ ಸಮಂತಾ ಈ ಹಾಡಿಗೆ ಫಿಕ್ಸ್ ಎನ್ನಲಾಗಿದೆ. ಸುಕುಮಾರ್ ನಿರ್ದೇಶನದ ರಂಗಸ್ಥಲಂ ಸಿನಿಮಾದಲ್ಲಿ ಪೂಜಾ ಹೆಗ್ಡೆ ಐಟಂ‌ ಸಾಂಗ್ ಗೆ ಹೆಜ್ಜೆ ಹಾಕಿದ್ದರು. ಆ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿದ್ದರು. ಇನ್ನು ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕಲಿರುವುದು ಬಹಳ ವಿಶೇಷವಾಗಿದೆ. ರಶ್ಮಿಕಾ ನಾಯಕಿಯಾಗಿರುವ ಸಿನಿಮಾದಲ್ಲಿ ಸಮಂತಾ ಡಾನ್ಸ್ ಅಭಿಮಾನಿಗಳ ಆಸಕ್ತಿ ಕೆರಳಿಸಿದೆ.

Leave a Comment