ಅಭಿಮಾನಿಗಳನ್ನು ರಂಜಿಸಲು, ಡಾಕ್ಟರ್ ಆಗಿ ಬರಲಿದ್ದಾರೆ ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್!!
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಕನ್ನಡತಿ. ಈ ಧಾರಾವಾಹಿಯ ಭುವಿ ಪಾತ್ರದ ಮೂಲಕ ಮನೆ ಮನೆ ಮಾತಾಗಿದ್ದಾರೆ ನಟಿ ರಂಜನಿ ರಾಘವನ್ ಅವರು. ಭುವಿ ಪಾತ್ರದ ಮೂಲಕ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸುತ್ತಾ, ಅವರ ಅಚ್ಚು ಮೆಚ್ಚಿನ ನಟಿಯಾಗಿ, ಅಪಾರ ಪ್ರೇಕ್ಷಕ ಆಚರಣೆಯನ್ನು ಪಡೆದುಕೊಂಡು, ದಿನದಿಂದ ದಿನಕ್ಕೆ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿರುವ ನಟಿ ರಂಜನಿ ರಾಘವನ್ ಅವರು ಈಗಾಗಲೇ ಸ್ಯಾಂಡಲ್ವುಡ್ ನಲ್ಲೂ ತಮ್ಮ ಮೋಡಿ ಮಾಡಲು ಸಿನಿಮಾ ರಂಗಕ್ಕೆ ಸಹಾ ಎಂಟ್ರಿ ನೀಡಿದ್ದಾರೆ.
ರಾಜ ಸಿಂಹ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದ ನಟಿ ರಂಜನಿ ರಾಘವನ್ ಇದೀಗ ಹೊಸ ಸಿನಿಮಾ ಟಕ್ಕರ್ ನಲ್ಲಿ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ಹೊಸ ಸಿನಿಮಾ ಸೈಬರ್ ಕ್ರೈಂ ಕಥಾಹಂದರವನ್ನು ಒಳಗೊಂಡಿದೆ ಎನ್ನಲಾಗಿದ್ದು ಈ ಸಿನಿಮಾದ ಮೂಲಕ ಹೊಸ ಪ್ರತಿಭೆ ಮನೋಜ್ ಕುಮಾರ್ ನಾಯಕನಟನಾಗಿ ಚಂದನವನಕ್ಕೆ ಅಡಿಯಿಡಲು ಸಜ್ಜಾಗುತ್ತಿದ್ದಾರೆ. ಇನ್ನು ಈ ಹೊಸ ಸಿನಿಮಾದಲ್ಲಿ ನಟಿ ರಂಜನಿ ರಾಘವನ್ ಅವರ ಪಾತ್ರವು ಕೂಡಾ ಬಹಳ ವಿಶೇಷವಾಗಿದೆ ಎನ್ನಲಾಗಿದ್ದು, ಅವರು ಈ ಸಿನಿಮಾದಲ್ಲಿ ಡಾಕ್ಟರ್ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಹೌದು, ಎಲ್ಲರೊಂದಿಗೆ ಬೆಸೆಯುವ ಡಾಕ್ಟರ್ ಪಾತ್ರದ ಮೂಲಕ ರಂಜನಿ ರಾಘವನ್ ಟಕ್ಕರ್ ಸಿನಿಮಾದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ಅವರ ಪಾತ್ರ ಸುಮ್ಮನೆ ಬಂದು ಹೋಗುವ ಪಾತ್ರ ಖಂಡಿತ ಅಲ್ಲ ಎನ್ನಲಾಗಿದ್ದು, ಅವರ ಪಾತ್ರವೂ ಕಥೆಯ ಪ್ರಮುಖ ಜೀವಾಳವೂ ಹೌದು ಎಂದು ಹೇಳಲಾಗಿದೆ. ರನ್ ಆಂಟನಿ ಸಿನಿಮಾ ಮೂಲಕ ಹೆಸರು ಮಾಡಿದ ರಘು ಶಾಸ್ತ್ರಿ ಅವರು ಈ ಬಾರಿ ಸೈಬರ್ ಕ್ರೈಂ ಕಥಾ ಹಂದರದೊಂದಿಗೆ ಸಿನಿಮಾ ಪ್ರೇಮಿಗಳ ಮುಂದೆ ಬರುವ ತಯಾರಿಯನ್ನು ನಡೆಸಿದ್ದಾರೆ.