ಅಭಿಮಾನದ ಹೆಸರಲ್ಲಿ ಸಲ್ಮಾನ್ ಖಾನ್ ಫ್ಯಾನ್ಸ್ ಹುಚ್ಚಾಟ: ಥಿಯೇಟರ್ ನಲ್ಲಿ ಮಾಡಿದ ಕೆಲಸ ನೋಡಿ ಬೇಸರ ಹೊರಹಾಕಿದ ನಟ

0 4

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಅಂತಿಮ್ – ದಿ ಫೈನಲ್ ಟ್ರೂತ್ ಸಿನಿಮಾ ಕೆಲವೇ ದಿನಗಳ ಹಿಂದೆಯಷ್ಟೇ ಅಂದರೆ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆ ನಂತರ ಸಿನಿಮಾ ಕುರಿತಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಅಭಿಮಾನಿಗಳು ಮಾತ್ರ ಸಲ್ಮಾನ್ ಖಾನ್ ಇರುವ ಸಿನಿಮಾ ಆಗಿರುವ ಕಾರಣದಿಂದ ಸಿನಿಮಾವನ್ನು ಭರ್ಜರಿಯಿಂದ ಸಂಭ್ರಮಿಸುತ್ತಿದ್ದಾರೆ. ಆದರೆ ಈ ಸಂಭ್ರಮವೇ ಈಗ ಒಂದು ಎಡವಟ್ಟಿಗೆ ಕಾರಣವಾಗಿ, ನಟ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

ಅಂತಿಮ್ ಬಿಡುಗಡೆ ಆದ ದಿನದಂದು ಥಿಯೇಟರ್ ಒಂದರಲ್ಲಿ ತೆರೆಯ ಮೇಲೆ ಸಲ್ಮಾನ್ ಖಾನ್ ಎಂಟ್ರಿ ಆಗುವ ದೃಶ್ಯ ಬಂದೊಡನೆ, ಅದನ್ನು ಸಂಭ್ರಮಿಸಲು ಥಿಯೇಟರ್ ಒಳಗೆ ಪಟಾಕಿ ಗಳನ್ನು ಸಿಡಿಸಿದ್ದಾರೆ. ಹೀಗೆ ಥಿಯೇಟರ್ ನಲ್ಲಿ ಪಟಾಕಿ ಸಿಡಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿವರು ಇದೆಂತಹ ಹುಚ್ಚಾಟ, ಅತಿರೇಕ, ಅಗ್ನಿ ಅ ವ ಘ ಡ ಸಂಭವಿಸಿದರೆ ಏನು ಗತಿ ಎಂದೆಲ್ಲಾ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ವೀಡಿಯೋ ವೈರಲ್ ಆಗಿ ಸುದ್ದಿಗಳಾದ ಕೂಡಲೇ ನಟ ಸಲ್ಮಾನ್ ಖಾನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು, ಅಭಿಮಾನಿಗಳಿಗೆ ಇಂತಹ ಅತಿರೇಕದ ವರ್ತನೆ ಬೇಡವೆಂದೂ, ಇಂತಹ ಕೆಲಸಗಳನ್ನು ಮತ್ತೆ ಮಾಡಬೇಡಿ ಎನ್ನುವ ಮನವಿಯೊಂದನ್ನು ಮಾಡುತ್ತಾ, ಥಿಯೇಟರ್ ಗಳ ಮಾಲೀಕರಿಗೂ ಸಂದೇಶವನ್ನು ನೀಡಿ, ಎಚ್ಚರ ವಹಿಸಿ ಎಂದಿದ್ದಾರೆ. ಅವರೇ ವೀಡಿಯೋವನ್ನು ಸಹಾ ಶೇರ್ ಮಾಡಿಕೊಂಡಿದ್ದಾರೆ.

https://www.instagram.com/tv/CWyH7ttomwV/?utm_medium=copy_link

ಸಲ್ಮಾನ್ ತಮ್ಮ ಪೋಸ್ಟ್ ನಲ್ಲಿ, ನನ್ನೆಲ್ಲಾ ಅಭಿಮಾನಿಗಳಲ್ಲಿ ಪಟಾಕಿ ಗಳನ್ನು ಥಿಯೇಟರ್ ಒಳಗೆ ತೆಗೆದುಕೊಂಡು ಹೋಗಬೇಡಿ ಎಂದು ಮನವಿಯನ್ನು ಮಾಡುತ್ತಿದ್ದೇನೆ. ಏಕೆಂದರೆ ಇದರಿಂದ ಭಾರೀ ಬೆಂಕಿ ಅ ವ ಘ ಡಗಳು ಸಹಾ ಸಂಭವಿಸಬಹುದು. ಇದರಿಂದ ನಿಮಗೂ ಮತ್ತು ಇತರರಿಗೂ ಸಹಾ ಅಪಾಯವಾಗುವ ಸಾಧ್ಯತೆ ಇದೆ. ಸೆಕ್ಯುರಿಟಿ ಅವರು ಪಟಾಕಿ ತೆಗೆದುಕೊಂಡು ಹೋಗುವವರನ್ನು ಪರೀಕ್ಷಿಸಿ ತಡೆಯುವಂತೆ ಎಚ್ಚರ ವಹಿಸಲು ನಾನು ಸಿನಿಮಾ ಥಿಯೇಟರ್ ಮಾಲೀಕರಲ್ಲಿ ಮನವಿ ಯನ್ನು ಮಾಡುತ್ತಿದ್ದೇನೆ.

ಸಿನಿಮಾವನ್ನು ನೋಡಿ ಆನಂದಿಸಿ, ಆದರೆ ದಯವಿಟ್ಟು ಇಂತಹ ಕೆಲಸವನ್ನು ಮಾಡಬೇಡಿ ಎಂದು ಸಲ್ಮಾನ್ ಖಾನ್ ಅವರು ತಮ್ಮ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಅಂತಿಮ್ ಸಿನಿಮಾದಲ್ಲಿ ಸಲ್ಮಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರ ಪತಿ ಆಯುಷ್ ಶರ್ಮಾ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷವಾಗಿದೆ.

Leave A Reply

Your email address will not be published.