ಅಬ್ಬಾ!!ಮಿಸ್ ಯೂನಿವರ್ಸ್ ಗೆ ಸಿಗೋ ಸವಲತ್ತುಗಳ ಬಗ್ಗೆ ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ!!

Written by Soma Shekar

Updated on:

---Join Our Channel---

ಮಿಸ್ ಯೂನಿವರ್ಸ್ ವಿಶ್ವದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದೆ. ಬೇರೆ ಬೇರೆ ದೇಶಗಳಿಂದ ಸುಂದರಿಯರು ತಮ್ಮ ದೇಶಗಳನ್ನು ಈ ಸ್ಪರ್ಧೆಯಲ್ಲಿ ಪ್ರತಿನಿಧಿಸುವ ಮೂಲಕ ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ. 1994 ರಲ್ಲಿ ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಗೆಲ್ಲುವ ಮೂಲಕ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯ ಮಹಿಳೆಯಾದರು. ಅದಾದನಂತರ 2000 ರಲ್ಲಿ ಲಾರಾ ದತ್ತಾ ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದು ಭಾರತಕ್ಕೆ ಕೀರ್ತಿಯನ್ನು ತಂದರು.

ಇದಾದ ನಂತರ 21 ವರ್ಷಗಳ ಬಳಿಕ ಇದೇ ಡಿಸೆಂಬರ್ 13, 2021 ರಂದು ಪಂಜಾಬಿನ ಹರ್ನಾಜ್ ಸಂಧು ಅವರು ವಿಶ್ವ ಸುಂದರಿ ಕಿರೀಟವನ್ನು ಧರಿಸಿ ಭಾರತಕ್ಕೆ ಮತ್ತೊಮ್ಮೆ ವಿಶ್ವ ಸುಂದರಿ ಕಿರೀಟವು ದಕ್ಕುವಂತೆ ಮಾಡಿದ್ದಾರೆ. ಇಸ್ರೇಲ್ ನಲ್ಲಿ ನಡೆದಂತಹ 70ನೇ ವಿಶ್ವಸುಂದರಿಯ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ವಿಶ್ವ ಸುಂದರಿ ಪಟ್ಟವನ್ನು ಗೆದ್ದ ನಂತರ ದೇಶದೆಲ್ಲೆಡೆಯಿಂದ ಅವರಿಗೆ ಶುಭಾಶಯಗಳು ಹರಿದು ಬರುತ್ತಿವೆ.

ಇಂತಹ ಪ್ರತಿಷ್ಠಿತ ಸೌಂದರ್ಯ ಕಿರೀಟವನ್ನು ಧರಿಸಿದ ನಂತರ, ವಿಶ್ವ ಸುಂದರಿ ಪಟ್ಟವನ್ನು ಗೆಲ್ಲುವ ಸುಂದರಿಗೆ ಸಿಗುವ ವಿಶೇಷ ಬಹುಮಾನಗಳು ಹಾಗೂ ವಿಶೇಷವಾದ ಸೌಲಭ್ಯಗಳ ಬಗ್ಗೆ ನಾವಿಂದು ತಿಳಿಯೋಣ. ವರದಿಗಳ ಪ್ರಕಾರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದ ಸುಂದರಿಗೆ USD 250,000 ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ ಇದು 1.89 ಕೋಟಿ ರೂಪಾಯಿಗಳಾಗಿದೆ ಎಂದು ಹೇಳಲಾಗುತ್ತದೆ.

ಆದರೆ ಮಿಸ್ ಯೂನಿವರ್ಸ್ ಸಂಸ್ಥೆಯು ಬಹುಮಾನವಾಗಿ ನೀಡುವ ಹಣದ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿಯನ್ನು ನೀಡುವುದಿಲ್ಲ. ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಸುಂದರಿಗೆ ನ್ಯೂಯಾರ್ಕ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಒಂದು ವರ್ಷ ಕಾಲ ನೆಲೆಸುವ ಅವಕಾಶವನ್ನು ನೀಡಲಾಗುತ್ತದೆ. ಆಕೆ ಮಿಸ್ ಯುಎಸ್ಎ ಜೊತೆಗೆ ಈ ಅಪಾರ್ಟ್ಮೆಂಟ್ ಶೇರ್ ಮಾಡಿಕೊಳ್ಳಬೇಕಾಗಿರುತ್ತದೆ.

ಈ ಒಂದು ವರ್ಷದ ಅವಧಿಯಲ್ಲಿ ಅವರಿಗೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಸಹಾ ಸಂಸ್ಥೆಯ ಕಡೆಯಿಂದ ಉಚಿತವಾಗಿ ಪೂರೈಸಲಾಗುತ್ತದೆ. ಮಿಸ್ ಯೂನಿವರ್ಸ್ ಗೆ ಒಂದು ಮೇಕಪ್ ಆರ್ಟಿಸ್ಟ್ ಗಳ ತಂಡವನ್ನು ನೀಡಲಾಗುತ್ತದೆ.
ಮಿಸ್ ಯುನಿವರ್ಸ್ ಗೆ ಬೇಕಾದ ಒಂದು ವರ್ಷದ ಮೇಕಪ್ ಹೇರ್ ಪ್ರಾಡಕ್ಟ್ಸ್, ಶೂ ಗಳು, ಬಟ್ಟೆಗಳು ಆಭರಣಗಳು ಎಲ್ಲದಕ್ಕೂ ಕೂಡಾ ವಿಶ್ವಸುಂದರಿ ಸಂಸ್ಥೆಯ ಹಣವನ್ನು ಪಾವತಿ ಮಾಡುತ್ತದೆ.

ವಿಶ್ವದ ಅತ್ಯುತ್ತಮ ದರ್ಜೆಯ ಫೋಟೋಗ್ರಾಫರ್ ಗಳನ್ನು ಆಕೆಯ ಫೋಟೋಶೂಟ್ ಮಾಡಲು ನೇಮಕ ಮಾಡಲಾಗುತ್ತದೆ. ಈ ಮೂಲಕ ವಿಶ್ವ ಮಟ್ಟದ ಬ್ರಾಂಡ್ ಗಳ ಗಮನವನ್ನು ಸೆಳೆದು, ಮಿಸ್ ಯೂನಿವರ್ಸ್ ಆದ ಸುಂದರಿಯು ಮಾಡಲಿಂಗ್ ಮಾಡಲು ಅಗತ್ಯವಿರುವ ಚಿತ್ರಣ ರೂಪಿಸಲಾಗುತ್ತದೆ. ವಿಜೇತರಿಗೆ ವೃತ್ತಿಪರ ಸ್ಟೈಲಿಸ್ಟ್‌ಗಳು, ಪೌಷ್ಟಿಕತಜ್ಞರು, ಚರ್ಮರೋಗ ತಜ್ಞರು ಮತ್ತು ದಂತ ಸೇವೆಗಳನ್ನು ನೀಡಲಾಗುತ್ತದೆ.

ಮಿಸ್ ಯೂನಿವರ್ಸ್ ವಿಜೇತೆಯಾದ ಸುಂದರಿಗೆ ವಿಶೇಷ ಕಾರ್ಯಕ್ರಮಗಳು, ಪಾರ್ಟಿಗಳು, ಪ್ರೀಮಿಯರ್‌ಗಳು, ಸ್ಕ್ರೀನಿಂಗ್, ಕಾಸ್ಟಿಂಗ್‌ಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಆಕೆಗೆ ವಿಶ್ವದ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಲು ಅಗತ್ಯವಿರುವ ಪ್ರಯಾಣದ ಸವಲತ್ತನ್ನು ಒದಗಿಸಲಾಗುವುದು. ಅಲ್ಲದೇ ವಿದೇಶಗಳಲ್ಲಿ ಅವರಿಗೆ ವಸತಿ ಸೌಲಭ್ಯಗಳನ್ನು ಸಹಾ ಸಂಸ್ಥೆಯೇ ಒದಗಿಸುತ್ತದೆ. ‌

Leave a Comment