ಅಬ್ಬಾ!! ಅಲ್ಲು ಅರ್ಜುನ್ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕಲು ಸಮಂತಾ ಸಂಭಾವನೆ ಇಷ್ಟೊಂದಾ?
ದಕ್ಷಿಣ ಸಿನಿ ರಂಗದ ಜನಪ್ರಿಯ ಹಾಗೂ ಟಾಲಿವುಡ್ ನ ಸ್ಟಾರ್ ನಟಿಯೂ ಆಗಿರುವ ಸಮಂತಾ ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳ ಪ್ರಮುಖ ಸುದ್ದಿಯಾಗಿದ್ದಾರೆ. ವಿಚ್ಚೇದನದ ನಂತರ ಸಮಂತಾ ತಮ್ಮ ಬಹುತೇಕ ಗಮನವನ್ನು ಈಗ ತಮ್ಮ ಹೊಸ ಸಿನಿಮಾಗಳ ಕಡೆಗೆ ಹರಿಸಿದ್ದಾರೆ. ಮೊದಲಿಗಿಂತ ಹೆಚ್ಚು ಸಿನಿಮಾಗಳ ಕಡೆಗೆ ತಮ್ಮ ಆಸಕ್ತಿಯನ್ನು ತೋರಿದ್ದಾರೆ. ವಿಶೇಷ ಎಂದರೆ ವಿಚ್ಛೇದನದ ನಂತರ ಸಮಂತಾ ಗೆ ಅವಕಾಶಗಳ ಕೊರತೆ ಖಂಡಿತ ಆಗಿಲ್ಲ. ದಕ್ಷಿಣ ಮಾತ್ರವೇ ಅಲ್ಲದೇ ಬಾಲಿವುಡ್ ರಂಗದಲ್ಲಿ ಕೂಡಾ ಮಿಂಚಲು ಸಮಂತಾ ಸಿದ್ಧವಾಗುತ್ತಿರುವ ವಿಷಯ ಈಗಾಗಲೇ ಸದ್ದು ಮಾಡಿದೆ.
ಇದೀಗ ಟಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿಯೊಂದು ಸಮಂತಾ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದೆ. ಸಮಂತಾ ಇದೇ ಮೊದಲ ಬಾರಿಗೆ ಸಿನಿನಾವೊಂದರಲ್ಲಿ ವಿಶೇಷ ಹಾಡು ಅಥವಾ ಸರಳವಾಗಿ ಹೇಳುವುದಾದರೆ ಐಟಂ ಹಾಡಿಗೆ ಹೆಜ್ಜೆಯನ್ನು ಹಾಕಲು ಸಜ್ಜಾಗಿದ್ದಾರೆ. ಹೌದು, ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಈ ಸಿನಿಮಾದ ವಿಶೇಷ ಹಾಡಿಗೆ ಈಗ ಸಮಂತಾ ಹೆಜ್ಜೆ ಹಾಕುವುದು ಬಹುತೇಖ ಖಚಿತವಾಗಿದೆ.
ಈಗ ಸಮಂತಾ ಈ ಸಿನಿಮಾದ ಐದು ನಿಮಿಷಗಳ ಈ ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಪಡೆಯಲಿರುವ ಸಂಭಾವನೆ ವಿಷಯವು ಈಗ ಸಖತ್ ಸುದ್ದಿ ಮಾಡಿದೆ. ಇನ್ನೊಂದೆಡೆ ಬಹಳಷ್ಟು ಜನರು ಸಮಂತಾ ಅವರಿಗೆ ಈ ಮಟ್ಟದ ಬೇಡಿಕೆ ಇದೆಯೇನು?? ಎಂದು ಅನೇಕರು ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸಮಂತಾ ಅಲ್ಲು ಅರ್ಜುನ್ ಜೊತೆ ಸ್ಟೆಪ್ ಹಾಕಲು ಪಡೆಯುತ್ತಿರುವ ಸಂಭಾವನೆ ಆದರೂ ಎಷ್ಟು?? ಈ ವಿಷಯವಾಗಿ ಇಷ್ಟೊಂದು ಸದ್ದಾಗಲು ಕಾರಣವಾದ ಸಂಭಾವನೆಯಾದರೂ ಎಷ್ಟು ? ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಸಮಂತಾ ಪುಷ್ಪ ಸಿನಿಮಾದಲ್ಲಿನ ವಿಶೇಷ ಹಾಡಿಗೆ ಹೆಜ್ಜೆಯನ್ನು ಹಾಕಲು ಬರೋಬ್ಬರಿ 1.5 ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವ ವಿಷಯ ಈಗಾಗಲೇ ಸುದ್ದಿಯಾಗಿದೆ. ಈ ಹಿಂದೆ ಇದೇ ಹಾಡಿಗೆ ಹೆಜ್ಜೆ ಹಾಕಲು ಬಾಲಿವುಡ್ ಬೆಡಗಿ ನೋರಾ ಫತೇಹಿ ಎರಡು ಕೋಟಿ ರೂ ಕೇಳಿದ್ದರು ಎನ್ನಲಾಗಿತ್ತು. ಆದರೆ ಈಗ ಅದೇ ಹಾಡಿಗೆ ಹೆಜ್ಜೆ ಹಾಕಲು ಸಮಂತಾ ಭರ್ಜರಿ ಒಂದೂವರೆ ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಸಮಂತಾ,ಅಲ್ಲು ಅರ್ಜುನ್ ಡಾನ್ಸ್ ಹೇಗಿರಬಹುದೆಂಬುದು ಈಗ ಕುತೂಹಲವನ್ನು ಮೂಡಿಸಿದೆ.