ಶಾರೂಖ್ ಭೇಟಿಗಾಗಿ ಅವರ ಮನೆ ಮುಂದೆ ಸಾಮಾನ್ಯನಂತೆ ಫ್ಯಾನ್ಸ್ ಜೊತೆ ಕಾದು ಕುಳಿತ ಬಿಗ್ ಬಾಸ್ ಸ್ಪರ್ಧಿ ಅಬ್ದು

Written by Soma Shekar

Published on:

---Join Our Channel---

ಹಿಂದಿ ಬಿಗ್ ಬಾಸ್ ನ(Big Boss Hindi) ಈ ಸೀಸನ್ ಅಂದರೆ ಸೀಸನ್ 16 ರಲ್ಲಿ ಪ್ರೇಕ್ಷಕರ ಮನಸ್ಸನ್ನು, ಮನೆ ಮಂದಿಯ ಮನಸ್ಸನ್ನು ಹಾಗೂ ಸೆಲೆಬ್ರಿಟಿಗಳ ಮನಸ್ಸನ್ನು ಗೆದ್ದಿರುವ ಏಕೈಕ ಸ್ಪರ್ಧಿ ಎಂದರೆ ಅಬ್ದು ರೋಜಿಕ್(Abdu Rozik). ಅಬ್ದು ರೋಜಿಕ್ ಭಾರತದವರಲ್ಲ. ಅವರು ತಜಿಕಿಸ್ತಾನದ (Tazakisthan) ಸಿಂಗರ್. ಸಣ್ಣ ವಯಸ್ಸಿನಲ್ಲೇ ಉಂಟಾದ ಹಾರ್ಮೋನ್ ಸಮಸ್ಯೆಗಳಿಂದಾಗಿ ಕುಬ್ಜರಾಗಿ ಉಳಿದ ಅಬ್ದು ಈಗ ವಯಸ್ಸು ಇಪ್ಪತ್ತರ ಹತ್ತಿರಕ್ಕೆ ಬರುತ್ತಿದ್ದರೂ ಸಹಾ ಮುದ್ದಾದ ಪುಟ್ಟ ಬಾಲಕನಂತೆ ಕಾಣುತ್ತಾರೆ. ಈ ಬಾರಿ ಹಿಂದಿ ಬಿಗ್ ಬಾಸ್ ನ ಪ್ರಮುಖ ಆಕರ್ಷಣೆ ಸಹಾ ಅಬ್ದು ರೋಜಿಕ್ ಆಗಿದ್ದರು ಎನ್ನುವುದು ವಾಸ್ತವ.

ಬಿಗ್ ಬಾಸ್ (Big Boss Hindi) ಮನೆಯಲ್ಲಿ ಹಲವು ತಿಂಗಳುಗಳ ಕಾಲ ಯಶಸ್ವಿ ಜರ್ನಿ ಮಾಡಿದ್ದ ಅಬ್ದು ಫಿನಾಲೆ ವಾರ ಹತ್ತಿರವಾಗುವಾಗಲೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅಬ್ದು(Abdu Elimination) ಎಲಿಮಿನೇಟ್ ಆಗಿದ್ದನ್ನು ಕಂಡು ಸೋಶಿಯಲ್ ಮೀಡಿಯಾಗಳಲ್ಲಿ ಬಿಗ್ ಬಾಸ್ ಪ್ರೇಕ್ಷಕರು ತಮ್ಮ ಬೇಸರ ಮತ್ತು ಅಸಮಾಧಾನವನ್ನು ಹೊರ ಹಾಕುತ್ತಾ, ಅಬ್ದು ಫಿನಾಲೆಯಲ್ಲಿ ಇರಬೇಕಿತ್ತು ಎಂದು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಅಬ್ದು ಬಿಗ್ ಬಾಸ್ ಮೂಲಕ ಅಸಂಖ್ಯಾತ ಭಾರತೀಯರ ಮನಸ್ಸನ್ನು ಗೆದ್ದಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಅಬ್ದು ಇದೀಗ ಬಾಲಿವುಡ್ ನಟ, ಕಿಂಗ್ ಖಾನ್ ಶಾರೂಖ್ ಖಾನ್(Shah Rukh Khan) ಅವರನ್ನು ನೋಡಬೇಕು ಎನ್ನುವ ಆಸೆಯಿಂದ ನಟ ಶಾರೂಖ್ ಖಾನ್ ಅವರ ಮನೆ ಮುಂದೆ ನಿಂತು ಕಾಯುವ ದೊಡ್ಡ ಸಂಖ್ಯೆಯ ಅಭಿಮಾನಿಗಳ ನಡುವೆ ತಾನು ಕೂಡಾ ಶಾರೂಖ್ ಖಾನ್ ಅವರ ಭೇಟಿಗಾಗಿ ಕಾದು ನಿಂತಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಬ್ದು ತಜಕಿಸ್ತಾನದವರೇ ಆಗಿದ್ದರೂ ಭಾರತದಲ್ಲೂ ಅವರಿಗೆ ಅನೇಕ ಮಂದಿ ಪರಿಚಿತರು ಇದ್ದಾರೆ.

ದೇಹ ಕುಬ್ಜವಾಗಿದ್ದರೂ ಮನರಂಜನೆ ವಿಚಾರದಲ್ಲಿ ಮಾತ್ರ ಅಬ್ದು ಮುಂದೆ ಇದ್ದಾರೆ. ಅಬ್ದು(Abdu Rozik) ಸನ್ ರೂಫ್ ಇರುವ ಕಾರಿನಲ್ಲಿ ನಟ ಶಾರೂಖ್(Shahrukh) ಅವರ ಐಶಾರಾಮೀ ಬಂಗಲೆ ಮನ್ನತ್ ಬಳಿಗೆ ತಲುಪಿದ್ದು, ಕಾರಿನ ಸನ್ ರೂಫ್ ಸರಿಸಿ, ಹೊರಗೆ ನೋಡುತ್ತಾ, “ಶಾರೂಖ್ ಖಾನ್ ಐ ಲವ್ ಯೂ, ನಿಮ್ಮ ಫ್ಯಾನ್ ಗಳ ಜೊತೆ ಕೂರಲು ಖುಷಿಯಾಗುತ್ತಿದೆ. ನನ್ನ ಒಂದೇ ಒಂದು ಕನಸು ಉಳಿದುಕೊಂಡಿದೆ, ನಾನು ನಿಮ್ಮನ್ನು ಭೇಟಿ ಮಾಡಬೇಕು” ಎಂದು ಹೇಳಿದ್ದಾರೆ. ಅಬ್ದು ಕೋರಿಕೆಯನ್ನು ಶಾರೂಖ್ ಪೂರ್ತಿ ಮಾಡುವರಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.

ಇನ್ನು ಬಿಗ್ ಬಾಸ್ ನಂತರ ಅಬ್ದು ಅವರ ಜನಪ್ರಿಯತೆ ಕೂಡಾ ಸಿಕ್ಕಾಪಟ್ಟೆ ಹೆಚ್ಚಿದೆ. ಇದೇ ಕಾರಣದಿಂದ ಅಬ್ದು ಶಾರೂಖ್ ಮನೆ ಮುಂದೆ ಬಂದ ಸಂದರ್ಭದಲ್ಲಿ ಅಬ್ದು ಅವರನ್ನು ನೋಡಲು ಮತ್ತು ಅವರಿಂದ ಆಟೋಗ್ರಾಫ್ ಪಡೆಯಲು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಅಬ್ದು ಕೂಡಾ ಇದೀಗ ಭಾರತದಲ್ಲೂ (India) ದೊಡ್ಡ ಸೆಲೆಬ್ರಿಟಿ ಆಗಿದ್ದು, ಶಾರೂಖ್ ಖಾನ್ ಅವರ ಭೇಟಿ ಮಾಡುವುದು ಅವರಿಗೆ ಕಷ್ಟವೇನಿಲ್ಲವಾದರೂ, ಅಭಿಮಾನಿಗಳ ನಡುವೆ ಅವರು ಶಾರೂಖ್ ಖಾನ್ ಗಾಗಿ(Shah Rukh Khan) ಕಾದು ಕುಳಿತಿದ್ದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

Leave a Comment