ಅಪ್ರಯೋಜಕ (useless) ಗೆಳೆಯನ ಜೊತೆ ಡೇಟಿಂಗ್: ನೇರ ಉತ್ತರ ನೀಡಿದ ನಟಿ ತಾಪ್ಸಿ ಪನ್ನು!

0 1

ದಕ್ಷಿಣ ಚಿತ್ರರಂಗದಲ್ಲಿ ಜನಪ್ರಿಯತೆ ಹಾಗೂ ಹೆಸರನ್ನು ಪಡೆದ ನಂತರ ಅನೇಕ ನಟಿಯರು ಬಾಲಿವುಡ್ ಗೆ ಎಂಟ್ರಿ ನೀಡುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಬಾಲಿವುಡ್ ನಲ್ಲಿ ಉಳಿದುಕೊಳ್ಳುತ್ತಾರೆ, ಕೆಲವರು ಸ್ಟಾರ್ ನಟಿಯರಾಗಿ ಮರೆಯುತ್ತಾರೆ. ಇದೇ ರೀತಿಯಲ್ಲಿ ದಕ್ಷಿಣ ಸಿನಿಮಾರಂಗದಿಂದ ನಟನೆಗೆ ಎಂಟ್ರಿ ನೀಡಿದ್ದ ನಟಿ ತಾಪ್ಸಿ ಪನ್ನು ಪ್ರಸ್ತುತ ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೇ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ತಾಪ್ಸಿ ಯಶಸ್ಸನ್ನು ಪಡೆದುಕೊಂಡಿದ್ದಾರೆ.‌

ನಟಿ ತಾಪ್ಸಿ ತಮ್ಮ ನೇರ ನಡೆ ಹಾಗೂ ನುಡಿಯಿಂದ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರಾಗಿದ್ದಾರೆ. ಆಗಾಗ ತಾಪ್ಸಿ ಮತ್ತು ಕಂಗನಾ ನಡುವೆ ನಡೆಯುವ ಸಾಮಾಜಿಕ ಜಾಲತಾಣಗಳ ವಾ ಗ್ವಾ ದಗಳು ಕೂಡಾ ಹೆಚ್ಚು ಸದ್ದು ಮಾಡುತ್ತದೆ. ನೇರವಾಗಿ ಮಾತನಾಡುವುದಕ್ಕೆ ಹೆಸರುವಾಸಿಯಾಗಿರುವ ಈ ನಟಿಯು ಈಗ ಸಂದರ್ಶಕ ರೊಬ್ಬರು ಕೇಳಿದ ಪ್ರಶ್ನೆಗೆ ನೇರವಾದ ಉತ್ತರವನ್ನು ನೀಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದು ಸುದ್ದಿಯಾಗಿದ್ದಾರೆ.

ನಟಿ ತಾಪ್ಸಿ ಪನ್ನು ಹಾಗೂ ತಾಹಿರ್ ಬಸಿನ್ ಜೊತೆಯಾಗಿ ನಟಿಸಿರುವ ಸಿನಿಮಾ ಲೂಪ್ ಲಪೇಟಾ ಸಿನಿಮಾ ಓಟಿಟಿ ಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಪ್ರಮೋಷನ್ ವೇಳೆಯಲ್ಲಿ ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ನಟಿ ನೇರವಾಗಿ ಉತ್ತರ ನೀಡಿದ್ದಾರೆ. ಸಿನಿಮಾ ಪ್ರಮೋಷನ್ ವೇಳೆ ಸಂದರ್ಶಕರು, ನಟಿ ತಾಪ್ಸಿ ಪನ್ನು ಅವರನ್ನು ನೀವು ಯೂಸ್ ಲೆಸ್ ಅಂದರೆ ಅಪ್ರಯೋಜಕ ಬಾಯ್ ಫ್ರೆಂಡ್ ಜೊತೆಗೆ ಡೇಟ್ ಮಾಡಿದ್ದೀರಾ ಎಂದು ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿದ ತಾಪ್ಸಿ ಹೌದು, ನಾನು ಯೂಸ್ಲೆಸ್ ಬಾಯ್ ಫ್ರೆಂಡ್ ಜೊತೆ ಡೇಟಿಂಗ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆಗ ಅಲ್ಲೇ ಇದ್ದ ಸಹ ನಟ ತಾಹಿರ್ ಅವರು ಅವರು ಡೇಟ್ ಮಾಡಿದವರು ದೆಹಲಿಯಿಂದ ಬಂದವರು ಎಂದು ಹೇಳಿದ್ದಾರೆ. ತಾಹಿರ್ ಹೇಳಿದ ಮಾತಿಗೆ ತಾಪ್ಸಿ ಹೌದು ಎನ್ನುವಂತೆ ತಲೆಯಾಡಿಸಿದ್ದಾರೆ. ಇನ್ನು ಈ ಹಿಂದೆ ತಾಪ್ಸಿ ಅವರ ಬಾಯ್ ಫ್ರೆಂಡ್ ಬಗ್ಗೆ ಕೇಳಿದಾಗ ಅವರು ತಾನು ರಿಲೇಶನ್ ಶಿಪ್ ನಲ್ಲಿ ಇರುವುದಾಗಿ ಹೇಳಿದ್ದರು.

ಆದರೆ ಸದ್ಯಕ್ಕಂತೂ ತನಗೆ ಮದುವೆಯ ಯಾವುದೇ ಯೋಚನೆಯಿಲ್ಲ, ಅಲ್ಲದೇ ತನಗೆ ಮಕ್ಕಳು ಬೇಕೆನಿಸಿದಾಗ ಮದುವೆಯಾಗುತ್ತೇನೆ ಎನ್ನುತ್ತಾ, ಪ್ರಸ್ತುತ ನನ್ನ ಗಮನವೆಲ್ಲ ವೃತ್ತಿಯ ಕಡೆಗೆ, ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ನಾನು ಪ್ರತ್ಯೇಕವಾಗಿ ನೋಡುತ್ತೇನೆ ಎನ್ನುವ ಮಾತನ್ನು ಹೇಳಿದ್ದರು. ಪ್ರಸ್ತುತ ತಾಪ್ಸಿ ಲೂಪ್ ಲಪೇಟಾ ಸಿ‌ನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ತಾಪ್ಸಿ ತಮ್ಮದೇ ಸಿನಿಮಾಗಳ ನಿರ್ಮಾಣಕ್ಕೂ ಸಹಾ ಕೈ ಹಾಕಿದ್ದಾರೆ.

Leave A Reply

Your email address will not be published.