ಅಪ್ಪ ಮಗನ ಕೌಶಲ್ಯ ಕಂಡು ಬೆರಗಾದ ನೆಟ್ಟಿಗರು: ಗುಜರಿ ವಸ್ತುಗಳಲ್ಲಿ ಅರಳಿತು ಪ್ರಧಾನಿ ಮೋದಿ ಪ್ರತಿಮೆ

Written by Soma Shekar

Published on:

---Join Our Channel---

ಆಂಧ್ರ ಪ್ರದೇಶದ ಮೂಲದವರಾದ ಇಬ್ಬರು ನಿರ್ಮಾಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಒಂದು ವಿಶೇಷವಾದ ಪ್ರತಿಮೆಯೊಂದರ ವಿಚಾರವು ಇದೀಗ ದೊಡ್ಡ ಸುದ್ದಿಯಾಗಿದ್ದು, ಈ ಪ್ರತಿಮೆಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ನೆಟ್ವಿಗರ ಗಮನವನ್ನು ಸೆಳೆಯುವುದು ಮಾತ್ರವೇ ಅಲ್ಲದೇ, ಎಲ್ಲೆಡೆ ಈ ಹೊಸ ಪ್ರತಿಮೆಯ ಬಗ್ಗೆ ಜನರು ವೈವಿದ್ಯಮಯವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹೌದು ಮೋದಿಯವರ ಈ ಹೊಸ ಪ್ರತಿಮೆ ಇಷ್ಟೊಂದು ಸುದ್ದಿ ಮಾಡಲು ಕಾರಣವಾಗಿರುವುದು ಅದನ್ನು ನಿರ್ಮಾಣ ಮಾಡಲು ಬಳಸಿರುವಂತಹ ವಸ್ತುಗಳಾಗಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ಕೆ‌.ವೆಂಕಟೇಶ್ವರ ರಾವ್ ಹಾಗೂ ಅವರ ಮಗ ರವಿಚಂದ್ರ ಇಬ್ಬರೂ ಸೇರಿ ಗುಜರಿಯ ವಸ್ತುಗಳನ್ನು ಬಳಸಿಕೊಂಡು ಸುಮಾರು 14 ಅಡಿ ಎತ್ತರದ ಮೋದಿಯವರ ಪ್ರತಿಮೆಯನ್ನು ಸಿದ್ಧಪಡಿಸಿದ್ದು, ಈಗ ಈ ಅಪ್ಪ ಮಗನ ಕೌಶಲ್ಯ ನೋಡಿ ಜನರು ಬೆರಗಾಗಿದ್ದಾರೆ. ಅಲ್ಲದೇ ಈ ವಿಶೇಷ ಮೂರ್ತಿಯನ್ನು ನೋಡಿ ಜನರು ಆಶ್ಚರ್ಯವನ್ನು ಸಹಾ ವ್ಯಕ್ತಪಡಿಸಿದ್ದಾರೆ.

ಈ ವಿಶೇಷವಾದ ಪ್ರತಿಮೆಯನ್ನು ನಿರ್ಮಾಣ ಮಾಡಲು ಈ ತಂದೆ ಮಗ ಎರಡು ಟನ್ ಆಟೋಮೊಬೈಲ್ ಸ್ಕ್ರಾಪ್ ಅನ್ನು ಬಳಸಿಕೊಂಡಿದ್ದಾರೆ. ಇನ್ನು ಈ ವಿಶೇಷವಾದ ಪ್ರತಿಮೆಯನ್ನು ಇದೇ ಸೆಪ್ಟೆಂಬರ್ 16 ರಂದು ಬಿಜೆಪಿ ಕಾರ್ಪೊರೇಟರ್ ಆಗಿರುವ ಮೋಹನ್ ರಾಜು ಅವರು ಪ್ರತಿಷ್ಠಾಪನೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಪ್ರತಿಮೆಯ ನಿರ್ಮಾಣಕ್ಕೆ ವೆಂಕಟೇಶ್ವರ ರಾವ್ ಮತ್ತು ರವಿಚಂದ್ರ ಅವರು ಎರಡು ತಿಂಗಳು ಶ್ರಮ ವಹಿಸಿದ್ದಾರೆ.

ಈ ವಿಶೇಷವಾದ ಮೋದಿ ಪ್ರತಿಮೆಯ ನಿರ್ಮಾಣಕ್ಕಾಗಿ ಅಗತ್ಯವಿದ್ದ ಆಟೋಮೊಬೈಲ್ ತ್ಯಾಜ್ಯಗಳನ್ನು ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ ಮತ್ತು ಗುಂಟೂರಿನಿಂದ ಸಂಗ್ರಹ ಮಾಡಲಾಗಿದೆ. ಮೂರ್ತಿ ನಿರ್ಮಾಣಕ್ಕೆ ಬೈಕ್ ಚೈನ್, ಗೇರ್ ವೀಲ್, ಕಬ್ಬಿಣದ ರಾಡ್ ಗಳು, ಸ್ಕ್ರೂ, ನಟ್, ಬೋಲ್ಟ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಸಿದ್ಧವಾಗಿರುವ ಪ್ರಧಾನಿ ಮೋದಿಯವರ ಈ ಆಕರ್ಷಕ ಪ್ರತಿಮೆಯನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ ಹಾಗೂ ಕಾಮೆಂಟ್ ಗಳನ್ನು ಮಾಡುವ ಮೂಲಕ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ ಮಾತ್ರವೇ ಅಲ್ಲದೇ ಮೋದಿ ವಿ ರೋ ಧಿ ಗಳು ಮಾತ್ರ ವ್ಯಂಗ್ಯ ಮಾಡುತ್ತಾ ಸಾಗುತ್ತಿದ್ದಾರೆ.

Leave a Comment