ಅಪ್ಪ ತಂದ ಸೆಕೆಂಡ್ ಹ್ಯಾಂಡ್ ಸೈಕಲ್ ಕಂಡ ಮಗನ ಖುಷಿ ನೋಡಿ!! ಬೆಲೆ ಕಟ್ಟಲಾಗದ ಸಂತೋಷದ ಕ್ಷಣವಿದು

Entertainment Featured-Articles News Viral Video

ಜೀವನದಲ್ಲಿ ಕಷ್ಟ ಪಟ್ಟು ದುಡಿದು ಬಂದು ಹಣದಿಂದ ಏನಾದರೂ ಕೊಂಡಾಗ ಆ ವಸ್ತುವಿನ ಖರೀದಿಯಿಂದ ನಮಗೆ ಸಿಗುವ ಆನಂದವನ್ನು ವರ್ಣಿಸುವುದಕ್ಕೆ ಖಂಡಿತ ಪದಗಳು ಸಿಗುವುದಿಲ್ಲ.‌ ಕಷ್ಟ ಪಟ್ಟು ಸಂಪಾದಿಸಿ ಪಡೆದ ಪ್ರತಿ ವಸ್ತುವಿನ ಬೆಲೆಯೂ ಸಹಾ ನಮಗೆ ವಿಶೇಷವಾಗಿರುತ್ತದೆ. ಅಲ್ಲದೇ ನಮ್ಮ ಜೀವನದಲ್ಲಿ ಅವುಗಳ ಮೌಲ್ಯ ಸಹಾ ಬೇರೆಲ್ಲಾ ವಸ್ತುಗಳಿಗಿಂತ ಹೆಚ್ಚಾಗಿರುತ್ತದೆ. ಅವು ನಮ್ಮ‌ ಮನಸ್ಸಿಗೆ ನೀಡುವ ಖುಷಿಯ ಬಗ್ಗೆಯಂತೂ ಮಾತಿನಲ್ಲಿ ಹೇಳುವುದು ಸಾಧ್ಯವಿಲ್ಲ. ಅದೊಂದು ಅನುಭೂತಿಯಾಗಿದ್ದು ಅದನ್ನು ಅನುಭವಿಸಿದಾಗ ಮಾತ್ರವೇ ಅದರ ಸವಿ ತಿಳಿಯುತ್ತದೆ. ‌

ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದು ನೋಡುಗರ ಮಸನ್ಸನ್ನು ಮುಟ್ಟುವಲ್ಲಿ ಯಶಸ್ಸು ಪಡೆದಿವೆ. ವೈರಲ್ ವೀಡಿಯೋದಲ್ಲಿ ತಂದೆಯೊಬ್ಬರು ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿ ಮಾಡಿದ್ದು, ತಂದೆ ಮಗ ಇಬ್ಬರೂ ಆ ಖುಷಿಯನ್ನು ಸಂಭ್ರಮಿಸಿದ ಮನೋಜ್ಞವಾದ ವೀಡಿಯೋ ಇದಾಗಿದ್ದು, ನೋಡುಗರು ಇದಕ್ಕೆ ಮೆಚ್ಚುಗೆ ನೀಡದೇ ಮುಂದೆ ಸಾಗುವುದು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಹಾಗಾದರೆ ಏನೀ ವಿಶೇಷ ತಿಳಿಯೋಣ ಬನ್ನಿ.

ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸುಂದರವಾದ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಪುಟ್ಟ ಹುಡುಗನೊಬ್ಬ ತನ್ನ ತಂದೆ ಮನೆಗೆ ಸೆಕೆಂಡ್ ಹ್ಯಾಂಡ್ ಸೈಕಲ್‌ ತಂದಾಗ ಅದನ್ನು ನೋಡಿ ಸಂಭ್ರಮದಿಂದ ಕುಣಿಯುತ್ತಿರುವುದನ್ನು ನಾವು ನೋಡಬಹುದು. ಆ ವ್ಯಕ್ತಿಯು ತಮ್ಮ ಸೈಕಲ್ ಗೆ ಹೂವಿನ ಹಾರ ಹಾಕಿ ಅಲಂಕರಿಸುವಾಗ ಪುಟ್ಟ ಬಾಲಕ ಅದನ್ನು ನೋಡಿ ಖುಷಿಯಿಂದ ಕುಣಿಯುತ್ತಿದ್ದು, ಆತನ ಖುಷಿ ಕಂಡಾಗ ನಮ್ಮ ಮನಸ್ಸಿನಲ್ಲೊಂದು ಸಂತೋಷದ ಅನುಭೂತಿ ಉಂಟಾಗುತ್ತದೆ.

ಅವನೀಶ್ ಶರಣ್ ಅವರು ವೀಡಿಯೊ ಶೇರ್ ಮಾಡಿಕೊಂಡು, ಅದೊಂದು ಸೆಕೆಂಡ್ ಹ್ಯಾಂಡ್ ಸೈಕಲ್ ಅಷ್ಟೇ. ಆದರೆ ಆ ತಂದೆ ಮಗನ ಮುಖದಲ್ಲಿನ ಖುಷಿಯನ್ನು ನೋಡಿ. ಅವರ ಭಾವನೆಗಳು ಮನೆಗೆ ಮರ್ಸಿಡಿಸ್ ಬೆನ್ಜ್ ಕಾರನ್ನು ತಂದಷ್ಟೇ ಖುಷಿಯನ್ನು ಹೇಳುತ್ತಿವೆ ಎಂದು ಬರೆದುಕೊಂಡಿದ್ದಾರೆ. ಈ ಸುಂದರವಾದ ವೀಡಿಯೋ ಈಗಾಗಲೇ ಮೂರು ಲಕ್ಷಕ್ಕಿಂತಲೂ ಅಧಿಕ ಜನರಿಂದ ವೀಕ್ಷಿಸಲ್ಪಟ್ಟಿದ್ದು, ಅನೇಕರು ಕಾಮೆಂಟ್ ಮಾಡಿ ಮನ ಮುಟ್ಟುವ ಸನ್ನಿವೇಶವನ್ನು ಹಾಡಿ ಹೊಗಳಿದ್ದಾರೆ.

Leave a Reply

Your email address will not be published.