ಅಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಕ್ಕಳು ಪಾರ್ಟಿ, ಹಂಗಾಮ ಮೂಡ್ ನಲ್ಲಿ

Written by Soma Shekar

Published on:

---Join Our Channel---

ಭಾರತೀಯ ಸಿನಿಮಾ ರಂಗದಲ್ಲಿ ತಮ್ಮ ನಟನೆಯ ಸಾಮರ್ಥ್ಯದಿಂದ ಹೆಸರನ್ನು ಪಡೆದುಕೊಂಡ ದಿಗ್ಗಜ ನಟರಲ್ಲಿ ಕಮಲ ಹಾಸನ್ ಕೂಡಾ ಒಬ್ಬರು. ಸಿನಿ ರಂಗ ಕಂಡಂತಹ ಪ್ರತಿಭಾವಂತ ನಟರ ಸಾಲಿನಲ್ಲಿ ಕಮಲ ಹಾಸನ್ ಹೆಸರು ತಪ್ಪದೇ ಇರುತ್ತದೆ. ಬಹುಭಾಷಾ ನಟನಾಗಿ ವೈವಿದ್ಯಮಯ ಹಾಗೂ ವಿಲಕ್ಷಣ ಪಾತ್ರಗಳಿಗೂ ಜೀವ ತುಂಬಿ ಅಸಂಖ್ಯಾತ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಅದ್ಭುತ ಕಲಾಗಿದ ಕಮಲ ಹಾಸನ್ ಅವರು. ನಟನೆ ಮಾತ್ರವೇ ಅಲ್ಲದೇ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ನಟ ಕಮಲ ಹಾಸನ್ ಅವರು ಅಮೆರಿಕಾ ಪ್ರವಾಸ ಮುಗಿಸಿಕೊಂಡು ಬಂದಿದ್ದರು. ಆದರೆ ಅಲ್ಲಿಂದ ಬಂದ ಮೇಲೆ ಅವರಿಗೆ ಕೊರೊನಾ ಪಾಸಿಟಿವ್ ಎನ್ನುವ ವರದಿ ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಕಮಲ ಹಾಸನ್ ಅವರ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ಚಿಂತೆಗೀಡಾಗಿದ್ದಾರೆ. ತಂದೆಯ ಆರೋಗ್ಯದ ಬಗ್ಗೆ ನಟಿ ಶೃತಿ ಹಾಸನ್ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ್ದಾರೆ.

ಶೃತಿ ಹಾಸನ್ ತಮ್ಮ ಟ್ವೀಟ್ ನಲ್ಲಿ, ತಂದೆಯವರು ಆರೋಗ್ಯವಾಗಿದ್ದಾರೆ. ಅಭಿಮಾನಿಗಳು ಚಿಂತಿಸುವ ಅಗತ್ಯವಿಲ್ಲ. ಶೀಘ್ರದಲ್ಲೇ ಗುಣಮುಖರಾಗಿ ಬರುವರು ಎಂದು ಹೇಳಿದ್ದರು. ಇನ್ನು ಇಲ್ಲಿ ಕಮಲ ಹಾಸನ್ ಅವರು ಚೆನ್ನೈನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ, ಇನ್ನೊಂದು ಕಡೆ ಅವರ ಇಬ್ಬರು ಮಕ್ಕಳು ಅಕ್ಷರ ಹಾಸನ್ ಹಾಗೂ ಶೃತಿ ಹಾಸನ್ ಮತ್ತು ಶೃತಿ ಹಾಸನ್ ಬಾಯ್ ಫ್ರೆಂಡ್ ಮುಂಬೈನಲ್ಲಿ ಪಾರ್ಟಿ ಮೂಡ್ ನಲ್ಲಿದ್ದು ಬಹಳ ಖುಷಿಯಿಂದ ಸಂತೋಷದ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

ಶೃತಿ ಹಾಸನ್ ಮುಂಬೈನಲ್ಲಿ ತಮ್ಮ ಗೆಳೆಯ ಶಾಂತನು ಹಜಾರಿಕ ಜೊತೆಗೆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದಾರೆ.‌ ಇನ್ನು ಶೃತಿ ಅವರ ತಂಗಿ ಅಕ್ಷರಾ ಕೂಡಾ ಈಗ ಮುಂಬೈ ಗೆ ಹಾರಿದ್ದು, ಅಕ್ಕನ ಜೊತೆಗೂಡಿದ್ದಾರೆ. ತಂಗಿಯ ಆಗಮನದಿಂದ ಶೃತಿ ಬಹಳ ಖುಷಿಯಾಗಿದ್ದಾರೆ. ಮನೆಯಲ್ಲಿ ಶೃತಿ, ಅಕ್ಷರಾ ಹಾಗೂ ಶಾಂತನು ಫುಲ್ ಹ್ಯಾಪಿ ಮೂಡ್ ನಲ್ಲಿ ಖುಷಿಯ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Leave a Comment