ಅದೊಂದು ಕಾರಣಕ್ಕಾಗಿ ಅಪ್ಪ ಅಮ್ಮನಿಗೆ ವೀಡಿಯೋ ಕಾಲ್ ಮಾಡಬೇಕೆಂತ ಜೈಲಧಿಕಾರಿಗಳ ಮುಂದೆ ಗೋಳಾಡಿದ ಆರ್ಯನ್ ಖಾನ್

Entertainment Featured-Articles News

ಬಾಲಿವುಡ್ ನಟ ಶಾರೂಖ್ ಪುತ್ರ ಆರ್ಯನ್ ಖಾನ್ ಗೆ ಇನ್ನೂ ಬಿಡುಗಡೆ ಭಾಗ್ಯ ದಕ್ಕಿಲ್ಲ. ಅಕ್ಟೋಬರ್ 2 ರಂದು ಐಶಾರಾಮೀ ಕ್ರೂಸ್ ಶಿಪ್ ನಲ್ಲಿ ಡ್ರ ಗ್ಸ್ ಪಾರ್ಟಿಯಲ್ಲಿ ಎನ್ ಸಿ ಬಿ ಕೈಗೆ ಸಿಕ್ಕ ಬಿದ್ದ ಆರ್ಯನ್ ನ್ಯಾಯಾಂಗ ಬಂ ಧ ನದಲ್ಲಿ ದಿನಗಳನ್ನು ಕಳೆಯುತ್ತಿದ್ದಾ‌ನೆ‌. ಪದೇ ಪದೇ ಜಾಮೀನು ಅರ್ಜಿಯನ್ನು ಕೂಡಾ ನ್ಯಾಯಾಲಯ ತಿರಸ್ಕಾರ ಮಾಡುತ್ತಲೇ ಬರುತ್ತಿದೆ‌. ನಿನ್ನೆ ಕೂಡಾ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಹೈ ಕೋರ್ಟ್ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿದ್ದು, ಇಂದು ಸಹಾ ವಿಚಾರಣೆ ಮುಂದುವರೆಯಲಿದೆ ಎನ್ನಲಾಗಿದೆ.

ಇನ್ನು ಇವೆಲ್ಲವುಗಳ ಮಧ್ಯೆ ಹೊಸದೊಂದು ವಿಷಯ ಹೊರ ಬಂದಿದೆ. ಪ್ರಸ್ತುತ ಆರ್ಯನ್ ಖಾನ್ ನನ್ನು ಮುಂಬೈನ ಆರ್ಥರ್ ರೋಡ್ ನಲ್ಲಿ ಇರುವ ಜೈಲಿನಲ್ಲಿ ವಿಚಾರಣಾಧೀನ ಖೈದಿಯನ್ನಾಗಿ ಇರಿಸಲಾಗಿದ್ದು, ಮಾನಸಿಕವಾಗಿ ಕುಗ್ಗಿ ಹೋಗಿರುವ ಆರ್ಯನ್ ರಾಮ, ಸೀತೆಯರ ಕುರಿತಾದ ಧಾರ್ಮಿಕ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದಾನೆ ಎನ್ನಲಾಗಿದೆ. ಇನ್ನು ಜೈಲಿನಲ್ಲಿ ಇರುವ ಕಾರಣ ಈ ವರ್ಷ ಕೆಲವು ವಿಶೇಷ ಕ್ಷಣಗಳಿಂದ ಕೂಡಾ ಆರ್ಯನ್ ದೂರಾಗಿದ್ದಾನೆ. ಇದೇ ತಿಂಗಳಲ್ಲಿ ಇದ್ದ ತಾಯಿಯ ಜನ್ಮದಿನವನ್ನು ಆರ್ಯನ್ ಮಿಸ್ ಮಾಡಿಕೊಂಡಿದ್ದನು.

ಇದಲ್ಲದೇ ಅಕ್ಟೋಬರ್ 25 ರಂದು ಶಾರೂಖ್ ಹಾಗೂ ಗೌರಿ ಖಾನ್ ಮದುವೆಯ 30 ನೇ ವರ್ಷದ ಆ್ಯನಿವರ್ಸರಿ ಇತ್ತು‌. ಈ ವೇಳೆ ತನ್ನ ಅಪ್ಪ ಅಮ್ಮನಿಗೆ ಜನ್ಮದಿನದ ಶುಭಾಶಯವನ್ನು ಕೋರಲು, ಜೈಲು ಅಧಿಕಾರಿಗಳ ಬಳಿ ಅಪ್ಪ, ಅಮ್ಮನಿಗೆ ಆ್ಯನಿವರ್ಸರಿ ವಿಶ್ ಮಾಡಲು ವೀಡಿಯೋ ಕಾಲ್ ಮಾಡಲು ಅವಕಾಶ ಮಾಡಿಕೊಡಿ ಎಂದು ಗೋಗರೆದಿದ್ದಾನೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ. ಇನ್ನು ಇಂದು ಹೈಕೋರ್ಟ್ ನಲ್ಲಿ ನಡೆಯಲಿರುವ ಜಾಮೀನು ಅರ್ಜಿ ವಿಚಾರಣೆಯ ನಂತರ ಆರ್ಯನ್ ಗೆ ಇಂದು ಜಾಮೀನು ಸಿಗುವುದೋ ಅಥವಾ ನ್ಯಾಯಾಂಗ ಬಂಧನವೇ ಮುಂದುವರೆಯುವುದೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *