ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ತಂಡವು ದೊಡ್ಡದೊಂದು ಪ್ರಮಾದವನ್ನು ಮಾಡುವ ಮೂಲಕ ವಿ ವಾ ದವೊಂದನ್ನು ಹುಟ್ಟು ಹಾಕಿದ್ದು, ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಏಕ್ ಲವ್ ಯಾ ಸಿನಿಮಾ ತಂಡದ ಬಗ್ಗೆ ಅಪ್ಪು ಅಭಿಮಾನಿಗಳು ಅಸಮಾಧಾನವನ್ನು ಹಾಗೂ ಆ ಕ್ರೋ ಶವನ್ನು ಹೊರಹಾಕಿದ್ದು, ಇಡೀ ಚಿತ್ರ ತಂಡ ಬಹಿರಂಗವಾಗಿ ಕ್ಷಮಾಪಣೆಯನ್ನು ಕೋರಬೇಕೆಂದು ಆಗ್ರಹಿಸಿದ್ದಾರೆ. ಅಪ್ಪು ಅಭಿಮಾನಿಗಳು ಮಾತ್ರವೇ ಅಲ್ಲದೇ ಅನೇಕರು ಚಿತ್ರ ತಂಡದ ವರ್ತನೆಯನ್ನು ಖಂ ಡಿ ಸಿ ದ್ದಾರೆ.
ದೀಪಾವಳಿ ಹಬ್ಬಕ್ಕೆ ಏಕ್ ಲವ್ ಯಾ ಸಿನಿಮಾ ತಂಡ ಮೂರನೇ ಹಾಡು ಬಿಡುಗಡೆ ಮಾಡಬೇಕಿತ್ತು. ಆದರೆ ಪುನೀತ್ ಅವರ ನಿಧನದಿಂದ ಆ ನೋವಿನಲ್ಲಿರುವಾಗ ಹಾಡಿನ ಬಿಡುಗಡೆ ಬೇಡವೆಂದು ಮುಂದಕ್ಕೆ ಹಾಕಲಾಗಿತ್ತು. ನಿನ್ನೆ ಈ ಹಾಡನ್ನು ಭವ್ಯವಾದ ವೇದಿಕೆಯ ಮೇಲೆ ಬಹಳ ಅದ್ದೂರಿಯಾಗಿ ಅಕುಲ್ ಬಾಲಾಜಿ ನಿರೂಪಣೆಯ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿತ್ತು. ಕಾರ್ಯಕ್ರಮ ಆರಂಭದಲ್ಲಿ ವೇದಿಕೆ ಮೇಲೆ ಅಪ್ಪು ಅವರ ಫೋಟೋಗೆ ಇಡೀ ಚಿತ್ರ ತಂಡ ಪೂಜೆ ಸಲ್ಲಿಸಿತ್ತು.
ಅನಂತರ ಅದೇ ವೇದಿಕೆಯ ಮೇಲೆ ನಿರ್ಮಾಪಕಿ ರಕ್ಷಿತಾ, ನಟಿ ರಚಿತಾ ರಾಮ್, ಎಣ್ಣೆ ಹಾಡು ಹಾಡಿದ ಗಾಯಕಿ ಮಂಗ್ಲಿ, ಮುಂತಾದವರು ಸೇರಿ ಶ್ಯಾಂಪೇನ್ ಗ್ಲಾಸ್ ಹಿಡಿದು ಮೋಜು ಮಸ್ತಿ ಮಾಡಿದ್ದಾರೆ. ಈ ವೀಡಿಯೊ ವೈರಲ್ ಆದ ಕೂಡಲೇ ಅಪ್ಪು ಅಭಿಮಾನಿಗಳು ಸಿಟ್ಟಾಗಿದ್ದಾರೆ, ಅಪ್ಪು ಅವರ ಕುಟುಂಬ ನೋವಿನಲ್ಲಿರುವಾಗ, ಚಿತ್ರ ತಂಡ ಹೀಗೆ ಮಾಡಿದ್ದು ಸರಿಯಲ್ಲ, ಅವರು ಬಹಿರಂಗ ಕ್ಷಮೆ ಯಾಚಿಸಬೇಕು. ಸಿನಿಮಾ ರಿಲೀಸ್ ಆಗಲು ಬಿಡಬಾರದು ಎಂದು ಆ ಕ್ರೋ ಶ ಹೊರಹಾಕಿದ್ದಾರೆ.
ಅಭಿಮಾನಿಗಳು ಸಿಟ್ಟಾದ ಕೂಡಲೇ ಎಚ್ಚೆತ್ತುಕೊಂಡ ಸಿನಿಮಾ ನಿರ್ಮಾಪಕಿ ರಕ್ಷಿತಾ ಅವರು ಕ್ಷಮೆ ಕೇಳಿದ್ದಾರೆ. ರಕ್ಷಿತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, ಅಪ್ಪು ಅಗಲಿಕೆಯ ನೋವಿಂದ ನಾನಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ , ಹಲವಾರು ವಿಷಯಗಳು ನನ್ನನ್ನು ಇನ್ನೂ ಕಾಡುತ್ತಿದೆ . ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಮಾಡುವುದೂ ಇಲ್ಲ . ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿದ್ದು ಅಪ್ಪು ಅಭಿಮಾನಿಗಳಲ್ಲಿ ಅಸಮಧಾನ ಉಂಟಾಗಿದ್ದರೆ ನನ್ನ ಮತ್ತು ನನ್ನ ತಂಡದ ಕಡೆಯಿಂದ ಕ್ಷಮೆಯಾಚಿಸುತ್ತೇವೆ.
ಇದು ಯಾವುದೂ ಉದ್ದೇಶಪೂರ್ವಕವಲ್ಲ . ಅಪ್ಪು ಇಂದಿಗೂ ಎಂದಿಗೂ ನಮ್ಮ ಮನಸಲ್ಲಿದ್ದಾರೆ . Appu lives on – ರಕ್ಷಿತ ಎಂದು ಬರೆದುಕೊಂಡು ಅಪ್ಪು ಅಭಿಮಾನಿಗಳ ಬಳಿ ಕ್ಷಮೆಯನ್ನು ಕೋರಿದ್ದಾರೆ. ಒಟ್ಟಾರೆ ಏಕ್ ಲವ್ ಯಾ ಚಿತ್ರ ತಂಡವು ಮಾಡಿದ ಎಡವಟ್ಟು ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಗೆ ಬಹಳ ಬೇಸರವನ್ನು ಉಂಟು ಮಾಡಿ, ಅಸಮಾಧಾನಕ್ಕೆ ಕಾರಣವಾಗಿದೆ.