ಅಪ್ಪು ನೆನಪಿಗಾಗಿ ನಟ ರಾಣಾ ಮಾಡಿದ ಕೆಲಸ ನೋಡಿ ಖುಷಿಯ ಜೊತೆ ಭಾವುಕರಾದ ಅಪ್ಪು ಅಭಿಮಾನಿಗಳು

Entertainment Featured-Articles Movies News

ನಟ ಪುನೀತ್ ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗ ಮಾತ್ರವೇ ಅಲ್ಲ ಇಡೀ ಕನ್ನಡ ನಾಡು ಕಂಡಂತಹ ಅಮೂಲ್ಯವಾದ ರತ್ನ. ಅವರು ಅಗಲಿ ತಿಂಗಳುಗಳೇ ಕಳೆದರೂ ಸಹಾ ಪ್ರತಿ ದಿನವೂ ಅವರ ಸ್ಮರಣೆ ಗಳು ಒಂದಲ್ಲಾ ಒಂದು ರೀತಿಯಲ್ಲಿ ಮಾದ್ಯಮ ಸುದ್ದಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ.‌ ಪುನೀತ್ ಅವರು ಒಬ್ಬ ಸಿನಿಮಾ ನಟನಾಗಿ ಮಾತ್ರವಲ್ಲದೇ ಒಬ್ಬ ಅಪ್ರತಿಮ ಮಾನವತಾವಾದಿಯಾಗಿ ಜನ ಮಾನಸದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದು, ಅವರು ತಾವು ಮಾಡಿರುವ ಕೆಲಸಗಳಿಂದಲೇ ಅಸಂಖ್ಯಾತ ಜನರಿಂದ ಆರಾಧಿಸಲ್ಪಡುತ್ತಿದ್ದಾರೆ.

ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಕನ್ನಡ ಮಾತ್ರವೇ ಅಲ್ಲ, ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಸಹಾ ಅವರಿಗೆ ಸ್ನೇಹಿತರಿದ್ದಾರೆ. ಅವರು ಎಲ್ಲರ ಜೊತೆಗೂ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದರು. ಆದ್ದರಿಂದಲೇ ಬೇರೆ ಬೇರೆ ಭಾಷೆಯ ಕಲಾವಿದರು ತಾವು ಯಾವುದೇ ವೇದಿಕೆಗಳಿಗೆ ಹೋದಾಗಲೂ ಅಲ್ಲಿ ಪುನೀತ್ ರಾಜ್‍ಕುಮಾರ್ ಅವರ ಜೊತೆಗೆ ತಮಗಿದ್ದ ಸ್ನೇಹ ಮತ್ತು ಒಡನಾಟವನ್ನು ಹಂಚಿಕೊಳ್ಳುತ್ತಾರೆ. ಇದೀಗ ತೆಲುಗಿನ ಸ್ಟಾರ್ ನಟ ರಾಣಾ ದಗ್ಗುಬಾಟಿ ಪುನೀತ್ ರಾಜ್‍ಕುಮಾರ್ ಅವರನ್ನು ಒಂದು ವಿಶೇಷವಾದ ರೀತಿಯಲ್ಲಿ, ವಿಶಿಷ್ಠವಾದ ಮಾದರಿಯಲ್ಲಿ ಸ್ಮರಿಸಿದ್ದಾರೆ.

ಹೌದು, ನಟ ರಾಣಾ ದಗ್ಗುಬಾಟಿ ಅವರು ಪುನೀತ್ ಅವರ ಸ್ಮರಣೆಗಾಗಿ ತಮ್ಮ ಕಛೇರಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿಯೊಂದನ್ನು ಇರಿಸಿದ್ದು ಈ ವಿಚಾರವನ್ನು ಬಹಳ ಹೆಮ್ಮೆಯಿಂದ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಸಹಿತ ಶೇರ್ ಮಾಡಿಕೊಂಡಿದ್ದಾರೆ. ರಾಣಾ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ, ಸುಂದರವಾದ ಸ್ಮರಣಿಕೆಯೊಂದು ನನ್ನ ಕಚೇರಿ ತಲುಪಿದೆ. ಮಿಸ್​ ಯೂ ಮೈ ಫ್ರೆಂಡ್ ಪುನೀತ್ ರಾಜ್​ ಕುಮಾರ್’ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

Leave a Reply

Your email address will not be published.