ಅಪ್ಪು ನಿಧನದಲ್ಲೂ ಲಾಭ ಮಾಡಲು ಹೊರಟ್ರಾ ರಜನಿಕಾಂತ್: ರಜನಿ ವಿರುದ್ಧ ನೆಟ್ಟಿಗರ ಸಿಟ್ಟು

Written by Soma Shekar

Updated on:

---Join Our Channel---

ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ ಹದಿಮೂರನೇ ದಿನ. ಆದರೂ ಜನ‌ ಮನದಲ್ಲಿ ಇನ್ನೂ ಆ ನೋವು ಮಾಸಿಲ್ಲ. ಪುನೀತ್ ಅವರ ನಿಧನಾನಂತರ ದಕ್ಷಿಣದ ಅನೇಕ ಸಿನಿಮಾ ಸೆಲೆಬ್ರಿಟಿಗಳು ಸಂತಾಪವನ್ನು ಸೂಚಿಸಿದ್ದಾರೆ. ಪುನೀತ್ ಅವರ ಸಮಾಧಿ ಸ್ಥಳಕ್ಕೆ ಕೂಡಾ ಅನೇಕ ಸೆಲೆಬ್ರಿಟಿಗಳು ಬಂದು ತಮ್ಮ ಅಂತಿಮ ನಮನವನ್ನು ಅರ್ಪಿಸುತ್ತಿದ್ದಾರೆ. ಅಂದು ಪುನೀತ್ ಅವರು ನಿಧನರಾದ ದಿನವೇ ಹಿರಿಯ ನಟ ರಜನೀಕಾಂತ್ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಶಸ್ತ್ರಚಿಕಿತ್ಸೆಗೆ ಸಹಾ ಒಳಗಾಗಿದ್ದರು.

ಅದೇ ಕಾರಣದಿಂದಲೇ ರಜನೀಕಾಂತ್ ಅವರು ಪುನೀತ್ ಅವರ ಅಂತಿಮ ದರ್ಶನವನ್ನು ಮಾಡಲು ಬರಲಿಲ್ಲ. ಕೆಲವೇ ದಿನಗಳ ಹಿಂದೆ ರಜನಿಕಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವೇಳೆ ರಜನಿಕಾಂತ್ ಅವರು ಅಪ್ಪು ಅವರನ್ನು ಸ್ಮರಿಸುತ್ತಾ, ಟ್ವೀಟ್ ಮಾಡಿ ಸಂತಾಪವನ್ನು ಸೂಚಿಸಿದ್ದಾರೆ. ರಜನೀಕಾಂತ್ ಅವರು ಸಂತಾಪ ಸೂಚಿಸಿದ್ದು ನೋಡಿದ ಕೆಲವು ನೆಟ್ಟಿಗರು ಹಾಗೂ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ರಜನೀಕಾಂತ್ ಅವರ ಮೇಲೆ ತಮ್ಮ ಸಿಟ್ಟನ್ನು ಜನರು ಹೊರ ಹಾಕಿದ್ದಾರೆ.

ರಜನೀಕಾಂತ್ ಟ್ವೀಟ್ ಮಾಡಿ, ಸಂತಾಪ ಸೂಚಿಸುತ್ತಲೇ ಪುನೀತ್ ಅವರ ಅಕಾಲಿಕ ಮರಣದಿಂದ ಬಹಳ ನೋವಾಗಿದೆ, ನನ್ನ ಕಣ್ಮುಂದೆ ಬೆಳೆದ ಪ್ರತಿಭಾವಂತ ಹುಡುಗ, ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ, ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿ ಹೋಗಿದ್ದಾರೆ. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಭರಿಸಲಾರದ ನಷ್ಟ ಎಂದಿದ್ದಾರೆ,‌ ಅವರ ಕುಟುಂಬಕ್ಕೆ ನಾನು ಸಾಂತ್ವನ ನೀಡಲು ಪದಗಳೇ ಬರುತ್ತಿಲ್ಲ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹೇಳಿದ್ದಾರೆ.

ರಜನೀಕಾಂತ್ ಅವರು ಟ್ವೀಟರ್ ನಲ್ಲಿ ಒಂದು ಸಾಲು ಬರೆದು, ಉಳಿತ ಮಾತುಗಳನ್ನು ಆಡಿರುವ ಹೂಟ್ ವಾಯ್ಸ್ ಆ್ಯಪ್ ನ ಲಿಂಕ್ ಶೇರ್ ಮಾಡಿದ್ದಾರೆ. ಇದು ಅವರ ಪುತ್ರಿಯ ಆ್ಯಪ್ ಆಗಿದ್ದು ರಜನೀಕಾಂತ್ ಅದರ ಲಿಂಕ್ ಹಾಕಿದ್ದರಿಂದ ಜನರು ಅಸಮಾಧಾನ ಹೊರ ಹಾಕುತ್ತಾ, ಮಗಳ ಆ್ಯಪ್ ಅನ್ನು ಪ್ರಮೋಷನ್ ಮಾಡಲು ಈ ದಾರಿ ಏಕೇ?? ಇಂತಹ ನೋವಿನಲ್ಲೂ ಹೂಟ್ ಆ್ಯಪ್ ನ ಪ್ರಮೋಷನ್ ಬೇಕಿತ್ತಾ?? ಎಂದು ಟ್ವೀಟ್ ಗಳನ್ನು ಮಾಡಿ ತಮ್ಮ ಪ್ರತಿಕ್ರಿಯೆ ಗಳನ್ನು ನೀಡಿದ್ದಾರೆ.

ಬಹಳಷ್ಟು ಜನರು ಒಬ್ಬ ವ್ಯಕ್ತಿಯ ಸಾವನ್ನು ಈ ರೀತಿ ಆ್ಯಪ್ ಒಂದರ ಪ್ರಮೋಷನ್ ಒಂದಕ್ಕೆ ಬಳಸಿರುವುದು ಸರಿಯಲ್ಲ ಎಂದಿದ್ದಾರೆ. ಆದರೆ ಕೆಲವರು ಇದರಲ್ಲಿ ಏನು ತಪ್ಪಿಲ್ಲ. ಅವರು ಎಲ್ಲಿ ಬೇಕಾದರೂ ಸಂತಾಪವನ್ನು ಸೂಚಿಸಬಹುದು, ‌ನಿಮ್ಮ‌ ಮೈಂಡ್ ಸೆಟ್ ಅನ್ನು ಮೊದಲು ಚೇಂಜ್ ಮಾಡಿಕೊಳ್ಳಿ ಎನ್ನುವ ಮಾತನ್ನು ಹೇಳಿ ರಜನೀಕಾಂತ್ ಅವರ ನಡೆಯನ್ನು ಸಮರ್ಥನೆ ಮಾಡಿದ್ದಾರೆ. ನೆಟ್ಟಿಗರ ನಡುವೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

Leave a Comment