ಅಪ್ಪು ಜಿಮ್ ಗೆ ಹೋಗಿರಲಿಲ್ಲ: ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ವಿವರಿಸಿದ ಅಪ್ಪು ಬಾಡಿಗಾರ್ಡ್

0 0

ಸ್ಯಾಂಡಲ್ವುಡ್ ನ ರಾಜಕುಮಾರ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ಮೃತಿಯಾಗಿರುವುದನ್ನು ಯಾರಿಂದಲೂ ಕೂಡಾ ಇನ್ನೂ ನಂಬಲು ಸಾಧ್ಯವೇ ಆಗುತ್ತಿಲ್ಲ ಎನ್ನುವಂತೆ ಪರಿಸ್ಥಿತಿಗಳು ಕಂಡು ಬರುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನಕ್ಕಾಗಿ ಸಾಗರೋಪಾದಿಯಲ್ಲಿ, ರಾಜ್ಯದ ನಾನಾ ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತದೆ. ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರ ನಾಳೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಂತಿಮ ದರ್ಶನದ ವೇಳೆ ಪುನೀತ್ ರಾಜಕುಮಾರ್ ಅವರ ಅಂಗರಕ್ಷಕ ಛಲಪತಿ ಅವರು ಮಾಧ್ಯಮವೊಂದರ ಮುಂದೆ ಮಾತನಾಡಿದ್ದಾರೆ, ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಪುನೀತ್ ರಾಜಕುಮಾರ್ ಅವರ ನಿನ್ನೆ ಜಿಮ್ ಗೆ ತೆರಳಿದ್ದರು. ಹೃದಯಾಘಾತ ಆಗುವುದಕ್ಕೆ ಮೊದಲು ಅವರು ಎರಡು ಗಂಟೆಗಳ ಕಾಲ ಜಿಮ್ ಮಾಡಿದ್ದರು ಎಂದು ಎಲ್ಲ ಕಡೆಗಳಲ್ಲೂ ವರದಿಗಳಾಗಿದ್ದವು. ಆದರೆ ಅಪ್ಪು ಅವರ ಅಂಗರಕ್ಷಕ ಛಲಪತಿಯವರು ನಿನ್ನೆ ಅವರು ವರ್ಕೌಟ್ ಗೆ ಹೋಗಿರಲಿಲ್ಲ, ಅಕ್ಕ (ಪುನೀತ್ ಅವರ ಪತ್ನಿ) ಮತ್ತು ಪುನೀತ್ ಅವರು ಹೊರಗಡೆ ಹೋಗುತ್ತಿದ್ದೇವೆ ಎಂದು ಹೇಳಿದರು. ನಾನು ಅವರನ್ನು ಕಾರು ಹತ್ತಿಸಿ ನಾನು ಕಾರು ಹತ್ತುವುದಕ್ಕೆ ಹೋದೆ. ಆಗ ಅವರು ನೀವು ಎಲ್ಲೇ ಇರಿ, ನಾನು ಬರುತ್ತೇನೆ ಎಂದು ನನಗೆ ಹೇಳಿದರು.

ಅವರು ಹಾಗೆ ಹೇಳಿದ ಕಾರಣ ನಾನು ಮನೆಯಲ್ಲೇ ಇದ್ದೆ. ನಂತರ ಅವರು ಬರಲಿಲ್ಲ ಎಂದು ಛಲಪತಿ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಅನಂತರ ವಿಕ್ರಂ ಆಸ್ಪತ್ರೆಗೆ ಬನ್ನಿ ಎಂದು ಕರೆ ಬಂದಿತ್ತು. ಪುನೀತ್ ಅವರ ಕುಟುಂಬದಲ್ಲಿ ಯಾರಿಗೋ ತೊಂದರೆ ಆಗಿದೆ ಎಂದು ನಾನು ಭಾವಿಸಿದ್ದೆ. ಆದರೆ ನಮ್ಮ ಬಾಸ್ ಗೆ ತೊಂದರೆಯಾಗಿದೆ ಎಂದು ಅನಂತರ ಗೊತ್ತಾಯ್ತು. ಅವರು ಸುಸ್ತಾಗಿದೆ ಎಂದು ಮೊದಲೇ ಹೇಳಿದ್ದರೆ ನಾನು ಅವರ ಜೊತೆ ಹೋಗುತ್ತಿದ್ದೆ. ಅವರಿಗೆ ಇಸಿಜಿ ಮಾಡಿದ್ದರು, ಅವರು ಅಲ್ಲೇ ಬಿಟ್ಟು ಬಿಟ್ಟಿದ್ದರು.

ಅವರು ಹೋಗಿ ಹತ್ತು ನಿಮಿಷ ಆಯಿತು ಎಂದು ಹೇಳಿದರು ಎಂದು ಛಲಪತಿ ಯವರು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಅವರು ನಮ್ಮನ್ನು ಹೇಗೆ ನೋಡಿಕೊಳ್ಳುತ್ತಿದ್ದರು ಎನ್ನುವುದನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ನಾನು ಇರೋವರೆಗೂ ನನ್ನ ಜೊತೆಯೇ ಇರಬೇಕು ಎನ್ನುವ ಮಾತುಗಳನ್ನು ಅವರು ಹೇಳಿದ್ದರು. ಬರ್ತೀನಿ ಇರು ಎಂದು ಹೇಳಿ ಹೋದವರು ಮತ್ತೆ ಬರಲೇ ಇಲ್ಲ ಎಂದು ಛಲಪತಿಯವರು ಅಪ್ಪು ಅವರ ಅಗಲಿಕೆಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.