ಅಪ್ಪು ಕನಸು ನನಸು ಮಾಡಲು ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್

Written by Soma Shekar

Published on:

---Join Our Channel---

ಪುನೀತ್ ರಾಜ್‍ಕುಮಾರ್ ಅವರು ಅದೆಷ್ಟೋ ಕನಸುಗಳನ್ನು ಕಂಡಿದ್ದವರು ಆದರೆ ವಿಧಿಯ ಆಟದಲ್ಲಿ ಅವರು ಕಂಡು ಕನಸುಗಳು ನನಸಾಗುವ ಮೊದಲೇ ಅವರು ನಮ್ಮನ್ನು ಅಗಲಿ, ಮರಳಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಈಗ ಪುನೀತ್ ಅವರು ಕಂಡ ಕನಸುಗಳನ್ನು ನನಸು ಮಾಡುವ ಗುರುತರ ಜವಾಬ್ದಾರಿಯು ಅವರ ಧರ್ಮಪತ್ನಿ ಶ್ರೀಮತಿ ಅಶ್ವಿನಿ ಅವರ ಹೆಗಲೇರಿದೆ. ಅಪ್ಪು ಅವರ ಪಿ ಆರ್ ಕೆ ಪ್ರೊಡಕ್ಷನ್ ನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಅಶ್ವಿನಿ ಅವರು, ಈಗ ಒಂದು ಬಹಳ ಮಹತ್ವಪೂರ್ಣ ಘೋಷಣೆಯನ್ನು ಮಾಡಿದ್ದು, ಅಭಿಮಾನಿಗಳಿಗೆ ಇದು ಖುಷಿಯನ್ನು ನೀಡಿದೆ.

ಪುನೀತ್ ರಾಜ್‍ಕುಮಾರ್ ಅವರು ನಮ್ಮ ಕರುನಾಡಿನ ಬಗ್ಗೆ ಅಮೋಘ ವರ್ಷ ಜೊತೆಯಲ್ಲಿ ಸೇರಿಕೊಂಡು ಒಂದು ಡಾಕ್ಯುಮೆಂಟರಿಯನ್ನು ಸಿದ್ಧಪಡಿಸಿದ್ದರು. ಇದಕ್ಕೆ ಗಂಧದ ಗುಡಿ ಎನ್ನುವ ಹೆಸರನ್ನು ಇಡಲಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಈ ಅದ್ಭುತ ಡಾಕ್ಯುಮೆಂಟರಿ ಯ ಟೀಸರ್ ಇದೇ ನವೆಂಬರ್ 1 ಅಂದರೆ ಕನ್ನಡ ರಾಜ್ಯೋತ್ಸವದ ದಿನವೇ ಬಿಡುಗಡೆ ಮಾಡಬೇಕು ಎಂದು ಪುನೀತ್ ಅವರು ಕನಸನ್ನು ಕಂಡಿದ್ದರು. ಆದರೆ ನವೆಂಬರ್ ಒಂದಕ್ಕೆ ಮುನ್ನವೇ ಪುನೀತ್ ಅವರು ಮೃತರಾದರು.

ಪುನೀತ್ ಅವರ ಹಠಾತ್ ನಿಧನದಿಂದ ಟೀಸರ್ ಬಿಡುಗಡೆ ಆಗಲಿಲ್ಲ. ಈಗ ಇದನ್ನು ಬಿಡುಗಡೆ ಮಾಡುವ ಆಲೋಚನೆಯನ್ನು ಅಶ್ವಿನಿಯವರು ಮಾಡಿದ್ದು, ಈ ಕುರಿತಾಗಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಅವರು ಟ್ವೀಟ್ ನಲ್ಲಿ, ಅಪ್ಪು ಅವರ ಕನಸೊಂದು ೦೧.೧೧.೨೦೨೧ ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ಅಲ್ಪವಿರಾಮವಷ್ಟೇ , ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು.

ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಈ ಹಿಂದೆ ಅಪ್ಪು ಅವರು ಸಹಾ ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪೋಸ್ಟ್ ಮಾಡಿ ನವೆಂಬರ್ ಒಂದಕ್ಕೆ ಕಾಯುವಂತೆ ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

Leave a Comment