ಟಾಲಿವುಡ್ ನ ಲೆಜೆಂಡರಿ ನಟರಲ್ಲಿ ನಂದಮೂರಿ ಬಾಲಕೃಷ್ಣ ಕೂಡಾ ಒಬ್ಬರು. ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹಾಗೂ ಅಭಿಮಾನಿಗಳನ್ನು ಸಹಾ ಹೊಂದಿದ್ದಾರೆ ಬಾಲಕೃಷ್ಣ. ನಟ ಬಾಲಕೃಷ್ಣ ಆಗಾಗ ತಾವು ನೀಡುವ ಹೇಳಿಕೆಗಳಿಂದ ಹಾಗೂ ಕೋಪದಿಂದ ನಡೆದುಕೊಳ್ಳುವ ರೀತಿಯಿಂದಾಗಿಯೇ ದೊಡ್ಡ ಮಟ್ಟದಲ್ಲಿ ಸದ್ದು, ಸುದ್ದಿಯಾಗಿ ಬಿಡುತ್ತಾರೆ. ಆದರೆ ಈಗ ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡುವಂತಹ ವಿಷಯವೊಂದು ಹೊರ ಬಂದಿದೆ. ಅಭಿಮಾನಿಗಳು ಅಭಿಮಾನದಿಂದ ಬಾಲಯ್ಯ ಬಾಬು ಎಂದು ಕರೆಯುವ ನಟ ಬಾಲಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಬಾಲಕೃಷ್ಣ ಅವರು ರಾಜ್ ಕುಟುಂಬಕ್ಕೆ ಸಾಂತ್ವನ ಹೇಳಿ ಹೈದ್ರಾಬಾದ್ ಗೆ ತೆರಳಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾದ್ರೆ ಅವರಿಗೆ ಅಂತದ್ದೇನಾಯ್ತು?? ಎನ್ನುವುದಾದರೆ, ಬಾಲಕೃಷ್ಣ ಅವರಿಗೆ ಕಳೆದ ಆರು ತಿಂಗಳಿಂದಲೂ ಸಹಾ ತೀವ್ರವಾದ ಭುಜದ ನೋವು ಕಾಡುತ್ತಿದ್ದು, ವೈದ್ಯರು ಅವರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ಹಾಗೂ ಸ್ವಲ್ಪ ದಿನಗಳ ಕಾಲ ವಿಶ್ರಾಂತಿಯನ್ನು ಪಡೆಯುವಂತೆ ಸಲಹೆ ನೀಡಿದ್ದರು.
ಆದರೆ ಬಾಲಕೃಷ್ಣ ಅವರು ತಾವು ಶಸ್ತ್ರ ಚಿಕಿತ್ಸೆಗೆ ಒಳಗಾದರೆ, ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆಯಲೇಬೇಕಾದದ್ದು ಅನಿವಾರ್ಯ, ಹಾಗೇನಾದರೂ ಆದರೆ ಸಿನಿಮಾ ಕೆಲಸಗಳಿಗೆ ಬ್ರೇಕ್ ಬೀಳುತ್ತದೆ ಎನ್ನುವ ಕಾರಣಕ್ಕೆ ಅವರು ಶಸ್ತ್ರಚಿಕಿತ್ಸೆ ಮುಂದೂಡುತ್ತಾ ಬಂದಿದ್ದರು. ಆದರೆ ನವೆಂಬರ್ 2 ರಂದು ಅವರಿಗೆ ಭುಜದ ನೋವು ತೀವ್ರವಾದ ಕಾರಣ ಅವರಿಗೆ ಕೈ ಎತ್ತಲೂ ಕೂಡಾ ಆಗದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಡಾ.ಬಿ.ಎನ್. ಪ್ರಸಾದ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ವೈದ್ಯರು ಆಪರೇಷನ್ ಯಶಸ್ವಿಯಾಗಿದ್ದು, ಬಾಲಕೃಷ್ಣ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ಅವರು ಆರೋಗ್ಯವಾಗಿದ್ದು, ಶೀಘ್ರದಲ್ಲೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎನ್ನುವ ಮಾತನ್ನು ಹೇಳಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ನಂತರ ಸಹಾ ಬಾಲಕೃಷ್ಣ ಅವರು ಕೆಲವು ದಿನಗಳ ಕಾಲ ವಿಶ್ರಾಂತಿಯನ್ನು ಪಡೆಯಬೇಕಾಗಿದೆ ಎನ್ನುವ ಮಾತನ್ನ ಸಹಾ ವೈದ್ಯರು ತಿಳಿಸಿದ್ದಾರೆ.