ಅಪ್ಪುಸಮಾಧಿ ಮುಂದೆ ಮದುವೆ ಆಗೋರಿಗೆ ರಾಜ್ ಕುಟುಂಬದ ಕಂಡೀಷನ್: ಮದುವೆ ಆಗಲು ಬಂದ ಜೋಡಿ, ಆದ್ರೆ ಆಗಿದ್ದೇ ಬೇರೆ

Written by Soma Shekar

Published on:

---Join Our Channel---

ಪುನೀತ್ ರಾಜ್‍ಕುಮಾರ್ ಅವರ ಸಮಾಧಿ ಸ್ಥಳಕ್ಕೆ ದಿನವೊಂದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ನಿನ್ನೆಯಂತೂ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಅಸಂಖ್ಯಾತ ಜನರು ಅಪ್ಪು ಅವರ ಸಮಾಧಿ ದರ್ಶನಕ್ಕೆ ಭೇಟಿ ನೀಡಿದ್ದರು. ಅಪ್ಪು ಅವರ ಸಮಾಧಿ ಮುಂದೆ ಅನೇಕರು ಭಾವುಕರಾಗುತ್ತಿದ್ದಾರೆ, ಕಣ್ಣೀರು ಹಾಕಿ ತಮ್ಮ ಮನಸ್ಸಿನ ವೇದನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಯುವ ಜೋಡಿಗಳು ತಾವು ಅಪ್ಪು ಸಮಾಧಿ ಮುಂದೆ ಮದುವೆ ಆಗಬೇಕೆಂದು ಮನವಿಯನ್ನು ಸಹಾ ಮಾಡುತ್ತಿದ್ದಾರೆ. ಇಂದು ಒಂದು ಜೋಡಿ ಅದಕ್ಕಾಗಿ ದೂರದ ಊರಿಂದ ಬಂದಿದೆ ಎನ್ನುವುದು ಸುದ್ದಿಯಾಗಿದೆ.

ಹೀಗೆ ಅಪ್ಪು ಸಮಾಧಿ ಮುಂದೆ ಮದುವೆ ಆಗಲು ಬಯಸುವವರಿಗೆ ರಾಜ್‍ಕುಮಾರ್ ಅವರ ಕುಟುಂಬದವರು ಒಂದು ಷರತ್ತನ್ನು ವಿಧಿಸಿದ್ದಾರೆ. ಈ ವಿಷಯವಾಗಿ ರಾಘವೇಂದ್ರ ರಾಜ್‍ಕುಮಾರ್ ಅವರು ಮಾದ್ಯಮಗಳ ಮುಂದೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಘಣ್ಣ ಅವರು ಮಾತನಾಡುತ್ತಾ ಪೋಲಿಸರದ್ದು ಕೆಲವು ನಿಯಮಗಳು ಇರುತ್ತವೆ, ಮದುವೆ ಆಗುವವರು ಕೆಲವೊಮ್ಮೆ ಅಪ್ರಾಪ್ತರಾಗಿರುತ್ತಾರೆ, ಆಗ ಅವರ ಮನೆಯವರು ಬಂದು ಗಲಾಟೆ ಮಾಡುತ್ತಾರೆ.

ಟಿವಿ ಯಲ್ಲಿ ಒಂದು ಮದುವೆ ಇಲ್ಲಿ ನಡೆಯುವುದನ್ನು ನೋಡಿದ ಮೇಲೆ ಅನೇಕರು ಇಲ್ಲಿಗೆ ಬರಲು ಪ್ರಾರಂಭಿಸುತ್ತಾರೆ. ಹಾಗೆ ಮದುವೆ ಆಗಲು ಬಯಸಿದರೆ ಜೋಡಿಗಳ ಜೊತೆಗೆ ಅವರ ತಂದೆ ತಾಯಿ, ಕುಟುಂಬದವರು ಬಂದರೆ ಅನುಮತಿ ನೀಡಬಹುದು ಎಂದಿದ್ದಾರೆ. ಇಂದು ಒಂದು ಜೋಡಿ ಬಂದು ಅನುಮತಿಯನ್ನು ಕೋರಿತು. ಆದರೆ ಅವರು ಒಂದೊಂದು ಸಲ ಒಂದೊಂದು ರೀತಿಯಲ್ಲಿ ಹೇಳಿದ್ದರಿಂದ ಅವರಿಗೆ ಅನುಮತಿ ನೀಡಲಿಲ್ಲ. ಅವರಿಗೆ ತಂದೆ ತಾಯಿ ಯನ್ನು ಕರೆತನ್ನಿ ಎಂದು ಹೇಳಿದ್ದೇವೆ ಎಂದಿದ್ದಾರೆ.

ಬಳ್ಳಾರಿಯಿಂದ ಬಂದಿರುವ ಗಂಗಾ ಮತ್ತು ಗುರುರಾಜ್ ಎನ್ನುವ ಪ್ರೇಮಿಗಳ ಜೋಡಿ ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಅಪ್ಪು ಅವರ ಅಭಿಮಾನಿಗಳಾಗಿರುವ ಅವರು ಅಪ್ಪು ಅವರ ಸಮಾಧಿ ಮುಂದೆ ಮದುವೆ ಆಗುವ ನಿರ್ಧಾರವನ್ನು ಮಾಡಿದ್ದಾರೆ. ರಾಜ್‍ಕುಮಾರ್ ಅವರ ಕುಟುಂಬದ ಅನುಮತಿಗಾಗಿ ಅವರು ಕಾದಿದ್ದಾರೆ. ಇನ್ನು ಗಂಗಾ ಅವರು ಜಾತಕ ನೋಡಿ, ದೇವಸ್ಥಾನದಲ್ಲಿ ಮದುವೆ ಆದವರೇ ಜೀವನ ಪೂರ್ತಿ ಜೊತೆಯಾಗಿ ಇರ್ತಾರೆ ಅಂತ ಹೇಳೋಕಾಗಲ್ಲ. ಆದರೆ ಪುನೀತ್ ಅವರು ಮಾಡಿರುವ ಸಮಾಜ ಸೇವೆ ನೋಡಿದಾಗ ಅವರಿಗಿಂತ ದೊಡ್ಡ ದೇವರಿಲ್ಲ ಎಂದಿದ್ದಾರೆ.

Leave a Comment