ಅಪ್ಪಿ ಮುದ್ದಾಡುತ್ತಿದ್ದ ಜೋಡಿಯ ಕಾಲುಗಳು ಉಲ್ಟಾ ಇರುವುದು ಕಂಡು ತಬ್ಬಿಬ್ಬಾದ ಜನ: ಕಾರಣ ತಿಳಿದರೆ ಅಚ್ಚರಿ ಆಗೋದು ಖಂಡಿತ

Entertainment Featured-Articles News

ಕೆಲವೊಮ್ಮೆ ನಮಗೆ ಕೆಲವೊಂದು ವಿಶೇಷ ಹಾಗೂ ವಿಸ್ಮಯ ಹುಟ್ಟಿಸುವಂತಹ ದೃಶ್ಯಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಅವುಗಳಲ್ಲಿ ಏನೋ ರಹಸ್ಯ ಅಡಗಿರುತ್ತದೆ. ಆದರೆ ಆ ಫೋಟೋಗಳನ್ನು ಬಹಳ ಸೂಕ್ಷ್ಮವಾಗಿ ನೋಡಿದಾಗ ಮಾತ್ರವೇ ಅದರಲ್ಲಿ ಅಡಗಿರುವ ರಹಸ್ಯ ಏನು ಎನ್ನುವುದು ನಮಗೆ ಅರಿವಾಗುತ್ತದೆ. ಇದರ ಹೊರತಾಗಿಯೂ ಕೆಲವೊಮ್ಮೆ ನಮಗೆ ಅದರಲ್ಲೇನಿದೆ ಎನ್ನುವುದು ಅರ್ಥವಾಗುವುದಿಲ್ಲ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಇಂತಹುದೇ ಫೋಟೋ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದೆ.

ಸಮುದ್ರದ ಬೀಚ್ ಬಳಿಯ ಫೋಟೋ‌ ಇದಾಗಿದೆ. ಇದರಲ್ಲಿ ಜೋಡಿಯೊಂದು ಅಪ್ಪಿಕೊಂಡು ಮುದ್ದಾಡುತ್ತಿರುವ ದೃಶ್ಯವು ನಮಗೆ ಕಾಣುತ್ತದೆ. ಈ ಜೋಡಿಯಲ್ಲಿ ಪುರುಷನು ಬಿಳಿಯ ವಸ್ತ್ರವನ್ನು ಹಾಗೂ ಮಹಿಳೆಯು ಕಪ್ಪು ವಸ್ತ್ರವನ್ನು ಧರಿಸಿರುವುದು ನಮಗೆ ಕಾಣುತ್ತದೆ. ಇವರಿಬ್ಬರು ಅಪ್ಪಿಕೊಂಡು ಮುದ್ದಾಡಿದ್ದರಲ್ಲಿ ಯಾವುದೇ ಸಮಸ್ಯೆ ಖಂಡಿತ ಇಲ್ಲ. ಆದರೆ ಆ ಫೋಟೋದಲ್ಲಿ ಅವರ ಕಾಲುಗಳ ಕಡೆ ನೋಡಿದಾಗಲೇ ನೆಟ್ಟಿಗರಿಗೆ ದೊಡ್ಡ ಗೊಂದಲವೊಂದು ಏರ್ಪಟ್ಟಿದೆ.

ಫೋಟೋ ವೈರಲ್ ಆದ ಮೇಲೆ ಅದನ್ನು ನೋಡಿದ ನೆಟ್ಟಿಗರಲ್ಲಿ ಫೋಟೋ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಆಗಲೇ ಕೆಲವರು ಇದೊಂದು ಭೂತದ ಚೇಷ್ಟೆ ಎಂದರೆ, ಇನ್ನೂ ಕೆಲವರು ಇದೆಲ್ಲಾ ಟ್ರಿಕ್ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.‌ ಆದರೆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಅಲ್ಲಿ ಯಾವುದೇ ಭೂತದ ಚೇಷ್ಟೆ ಅಥವಾ ಟ್ರಿಕ್ ಖಂಡಿತ ಇಲ್ಲ ಎನ್ನುವುದು ಅರ್ಥವಾಗುತ್ತದೆ.

ಹಾಗಾದರೆ ಫೋಟೋದಲ್ಲಿ ಇಬ್ಬರ ಪಾದಗಳು ಉಲ್ಟಾ ಆಗಿದ್ದು ಹೇಗೆ ? ಎನ್ನುವ ಪ್ರಶ್ನೆ ಮಾತ್ರ ಅನೇಕರ ಮೆದುಳಿನಲ್ಲಿ, ಆಲೋಚನೆಗಳಲ್ಲಿ ಸುತ್ತುತ್ತಿದೆ. ಒಬ್ಬ ಪತ್ತೇದಾರನಿಗೆ ಮಾತ್ರ ಈ ಫೋಟೋದಲ್ಲಿನ ರಹಸ್ಯ ಏನು ಎನ್ನುವುದು ಅರ್ಥವಾಗಿದೆ. ದಿ ಸನ್ ಪತ್ರಿಕೆಯ ವರದಿಯ ಪ್ರಕಾರ ಪತ್ತೇದಾರನು ಫೋಟೋವನ್ನು ಬಹಳ ಸೂಕ್ಷ್ಮವಾಗಿ ಅನಾಲಿಸಿಸ್ ಮಾಡಿದ್ದಾರೆ ಎನ್ನಲಾಗಿದೆ. ಫೋಟೋದಲ್ಲಿರುವ ಮಹಿಳೆ ಅಥವಾ ಪುರುಷ ಇಬ್ಬರಲ್ಲಿ ಯಾರೊಬ್ಬರೂ ಕೂಡಾ ಯಾವುದೇ ಟ್ರಿಕ್ ಅನ್ನು ಬಳಕೆ ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಆದರೆ ಇದೇ ವೇಳೆ ಈ ಜೋಡಿಯು ತಾವು ಧರಿಸಿರುವ ವಸ್ತ್ರದಲ್ಲಿ ಖಂಡಿತ ಒಂದು ಚಾಲಾಕಿತನ ತೋರಿಸಿದ್ದಾರೆ ಎನ್ನಲಾಗಿದೆ.‌ ವಾಸ್ತವವಾಗಿ ಆ ವ್ಯಕ್ತಿಯು ಬಿಳಿ ಬಣ್ಣದ ಟೀ ಶರ್ಟ್ ನೊಂದಿಗೆ ಕಪ್ಪು ಕ್ಯಾಪ್ರೀ ಧರಿಸಿದ್ದಾರೆ. ಆ ಕ್ಯಾಪ್ರಿಗೆ ಬಿಳಿ ಬಟ್ಟೆಯನ್ನು ಸೇರಿಸಿ, ಮಹಿಳೆಯೊಂದಿಗೆ ಬಿಳಿಯ ವಸ್ತ್ರ ಗಳಲ್ಲಿ ಒಂದು ವಿಚಿತ್ರ ಫೋಟೋ ಬರುವಂತೆ ಫೋಟೋ ತೊಡಗಿಸಿಕೊಂಡಿದ್ದಾರೆ. ಆದ್ದರಿಂದಾಗಿಯೇ ಫೋಟೋದಲ್ಲಿ ಯಾರ ಕಾಲು ಯಾವುದು ಎಂದು ತಿಳಿಯುತ್ತಿಲ್ಲ. ಇಲ್ಲಿ ಕೇವಲ ಧರಿಸಿರುವ ವಸ್ತ್ರಗಳಲ್ಲಿ ಅವರು ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ.

Leave a Reply

Your email address will not be published. Required fields are marked *