ಅಪ್ಪಿ ತಪ್ಪಿಯೂ ಈ ದಿನಗಳಂದು ತುಳಸಿಗೆ ನೀರು ಅರ್ಪಿಸಬೇಡಿ: ಕುಪಿತಳಾಗುವಳು ಮಾತೆ ಶ್ರೀಲಕ್ಷ್ಮಿ

Entertainment Featured-Articles News ಜೋತಿಷ್ಯ

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನ ಮಾನ ಇದೆ‌. ಅಲ್ಲದೇ ಪರಮ ಪವಿತ್ರ ಎನ್ನಲಾಗುವ ತುಳಸಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ಅಥವಾ ಮನೆಯ ಅಂಗಳದಲ್ಲಿ ತುಳಸಿ ಗಿಡ ಖಂಡಿತ ಇದ್ದೇ ಇರುತ್ತದೆ. ತುಳಸಿ ಇಲ್ಲದ ಮನೆಗಳು ಅಪರೂಪ ಎಂದೇ ಹೇಳಬಹುದು. ತುಳಸಿ ಗಿಡ ಇರುವ ಕಡೆ, ಅಂತಹ ಮನೆಗಳಲ್ಲಿ ಧನದ ಒಡತಿ ಮಾತೆ ಮಹಾಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಎಂದು ನಂಬಲಾಗಿದೆ. ಅಲ್ಲದೇ ತುಳಸಿ ಆರಾಧನೆಯಿಂದ ವಿಷ್ಣುವಿನ ಕೃಪೆಯೂ ದೊರೆಯುತ್ತದೆ ಎನ್ನಲಾಗಿದೆ.

ಇನ್ನು ನಮ್ಮ ವಾಸ್ತು ಶಾಸ್ತ್ರದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದ್ದು, ಈ ಸಸ್ಯದಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ ಎನ್ನುವುದು ಸಹಾ ವಾಸ್ತವವಾಗಿದೆ‌. ನಮ್ಮ ಶಾಸ್ತ್ರಗಳ ಪ್ರಕಾರ ನಿತ್ಯ ಮುಂಜಾನೆ ಮತ್ತು ಸಂಜೆ ತುಳಸಿ ಗಿಡವನ್ನು ಪೂಜಿಸುವುದು ಮತ್ತು ಅದಕ್ಕೆ ಪ್ರತಿದಿನ ನೀರನ್ನು ಅರ್ಪಿಸುವುದು ಮಂಗಳಕರವಾದ ಅಭ್ಯಾಸ ಎಂದೇ ಹೇಳಲಾಗಿದೆ. ಆದರೆ ಇಲ್ಲಿ ಒಂದಷ್ಟು ವಿಷಯಗಳನ್ನು ನಾವು ಪಾಲಿಸಬೇಕಾದ, ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು ಸಹಾ ಇವೆ.

ಕೆಲವು ನಿಯಮಗಳ ಪ್ರಕಾರ ಕೆಲವೊಂದು ದಿನಗಳಲ್ಲಿ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವುದು ಅಶುಭವೆಂದೇ ಹೇಳಲಾಗಿದೆ‌. ವಾಸ್ತು ಶಾಸ್ತ್ರದ ಪ್ರಕಾರ, ಈ ದಿನಗಳಂದು ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವುದರಿಂದ ಹಣದ ವಿಚಾರದಲ್ಲಿ ನಷ್ಟ ಎದುರಾಗುವ ಸಂಭವ ಇರುತ್ತದೆ ಹಾಗೂ ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಅಸ್ತಿತ್ವಕ್ಕೆ ಕಾರಣವಾಗುತ್ತದೆ. ಆದ್ದರಿಂದಲೇ ಯಾವ ದಿನಗಳಂದು ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬಾರದು ಎಂಬುದನ್ನು ತಿಳಿಯೋಣ ಬನ್ನಿ ‌

ಭಾನುವಾರದ ದಿನ ಮನೆಯ ಮುಂದೆ ಅಥವಾ ಮನೆಯ ಅಂಗಳದಲ್ಲಿ ಇರುವಂತಹ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಮತ್ತು ಈ ದಿನ ಯಾವುದೇ ಕಾರಣಕ್ಕೂ ಸಹಾ ತುಳಸಿ ಗಿಡದ ಎಲೆಗಳನ್ನು ಕೀಳಬಾರದು ಎಂದು ಹೇಳಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ ತುಳಸಿ ಗಿಡಕ್ಕೆ ಹೆಚ್ಚು ನೀರನ್ನು ಹಾಕಬಾರದು. ಅದರ ಬದಲಾಗಿ ತುಳಸಿ ಗಿಡಕ್ಕೆ ನಾವು ಸರಿಯಾದ ಪ್ರಮಾಣದಲ್ಲಿ ನೀರನ್ನು ಹಾಕಬೇಕು. ಇಲ್ಲದೇ ಹೋದರೆ ಸಸ್ಯವು ಒಣಗುತ್ತದೆ ಅಥವಾ ಅದು ಹಾಳಾಗುತ್ತದೆ. ಇದು ಶುಭ ಸೂಚಕವಲ್ಲ.

ಏಕಾದಶಿ ಮತ್ತು ಸೂರ್ಯ ಅಥವಾ ಚಂದ್ರ ಗ್ರಹಣಗಳ ದಿನದಂದು ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವುದು ಅಶುಭ ಎನ್ನಲಾಗಿದೆ. ಈ ದಿನ ತುಳಸಿ ಗಿಡಗಳಲ್ಲಿ ಎಲೆಗಳನ್ನು ಕೀಳಬಾರದು. ವಾಸ್ತು ಪ್ರಕಾರ ತುಳಸಿ ಗಿಡವನ್ನು ಮನೆಯಲ್ಲಿ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಮಾತ್ರವೇ ನೆಡಬೇಕು. ಅಲ್ಲದೇ ತುಳಸಿ ಗಿಡವನ್ನು ಪೂರ್ವ ದಿಕ್ಕಿನಲ್ಲಿ ನೆಡಬಾರದು ಏಕೆಂದರೆ ಇದು ಆರ್ಥಿಕ ಮುಗ್ಗಟ್ಟಿಗೆ ಕಾರಣ ಆಗಬಹುದು ಎನ್ನಲಾಗಿದೆ.

Leave a Reply

Your email address will not be published.