ಅಪ್ಪನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಉಡುಗೊರೆ ನೀಡಿದ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ
ಇಂದು ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಜನ್ಮದಿನ, ಕನ್ನಡ ಸಿನಿ ರಸಿಕರ ಮನಸ್ಸನ್ನು ತನ್ನ ಅದ್ಭುತ ನಟನೆ, ವೈವಿದ್ಯಮಯ ಮೂಲಕವೇ ಗೆದ್ದಿರುವ ಅಪರೂಪದ ನಟನಾಗಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿರುವ ನಟ ಸುದೀಪ್ ಅವರು ತಮ್ಮ 50 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕನ್ನಡ ಸಿನಿ ರಂಗದಲ್ಲಿ ತನ್ನದೇ ಆದ ವರ್ಚಸ್ಸು ಹಾಗೂ ಸ್ಥಾನವನ್ನು ಪಡೆದಿರುವ ಕಿಚ್ಚ ಸುದೀಪ್ ಅವರು ಬಹುಭಾಷಾ ನಟನಾಗಿಯೂ ತನ್ನ ನಟನಾ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದ್ದಾರೆ. ಸುದೀಪ್ ಅವರ ಜನ್ಮದಿನ ಎಂದರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ, ಆದರೆ ಕೊರೊನಾ ಎನ್ನುವ ಮಹಾಮಾರಿಯ ಆತಂಕದಲ್ಲಿ ಅಂತಹ ಸಂಭ್ರಮ ಬೇಡವೆಂದು ಸುದೀಪ್ ಅವರು ಅಭಿಮಾನಿಗಳಿಗೆ ಸಂದೇಶ ನೀಡಿ, ತಾವು ಇರುವ ಕಡೆಯಿಂದಲೇ ಶುಭವನ್ನು ಹಾರೈಸಿ ಎಂದು ಮನವಿಯನ್ನು ಮಾಡಿದ್ದರು.
ಕಿಚ್ಚ ಸುದೀಪ್ ಅವರ ಜನ್ಮದಿನ ಎಂದರೆ ಅಭಿಮಾನಿಗಳೇ ಸಂಭ್ರಮಿಸುವಾಗ ಅವರ ಮನೆಯಲ್ಲಿ ಈ ಸಂಭ್ರಮ ಹೇಗಿರಬೇಕು? ಖಂಡಿತ ಬಹಳ ಖುಷಿ ಮತ್ತು ಆನಂದವನ್ನು ನೀಡುವ ಸಂತಸದ ದಿನ ಇದು ಎಂದರೆ ತಪ್ಪಾಗಲಾರದು. ಹೌದು ನಟ ಕಿಚ್ಚ ಸುದೀಪ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಮಗಳು ಸಾನ್ವಿ ತಮ್ಮ ತಂದೆಯ ಜನ್ಮದಿನವನ್ನು ನಿನ್ನೆ ರಾತ್ರಿ ಖಾಸಗಿ ಹೋಟೇಲ್ ಒಂದರಲ್ಲಿ ಆಚರಿಸುವ ಮೂಲಕ ತಮ್ಮ ಅಪ್ಪನಿಗೊಂದು ಸರ್ಪ್ರೈಸ್ ನೀಡಿದ್ದಾರೆ. ಅಲ್ಲದೇ ಇಂದು ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸ್ಯಾಂಡಲ್ವುಡ್ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳ ಸಿನಿ ಸೆಲೆಬ್ರಿಟಿಗಳು ಕಿಚ್ಚನ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಕಿಚ್ಚ ಸುದೀಪ್ ಅವರ ಮಗಳು ಅಪ್ಪನಿಗೆ ಸರ್ಪ್ರೈಸ್ ಪಾರ್ಟಿ ನೀಡಿದ್ದು ಒಂದಾದರೆ, ಇನ್ನೊಂದು ಕಡೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಪನಿಗೆ ಜನ್ಮದಿನದ ಶುಭಾಶಯವನ್ನು ಕೋರುತ್ತಾ ಒಂದೆರಡು ಬಹಳ ಅರ್ಥಪೂರ್ಣವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಸಾನ್ವಿ ತಮ್ಮ ಪೋಸ್ಟ್ ನಲ್ಲಿ, “ಹ್ಯಾಪಿಯೆಸ್ಟ್ ಬರ್ತಡೇ ಅಪ್ಪಾ, ಇಂದು ನಾವು ಒಬ್ಬ ಮಗ, ಒಬ್ಬ ತಮ್ಮ, ಗಂಡ ಹಾಗೂ ಒಬ್ಬ ಅಪ್ಪ ಜೊತೆಗೆ ಒಬ್ಬ ಲೆಜೆಂಡ್ ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ” ಎಂದು ಬರೆದುಕೊಂಡು ಅಪ್ಪನಿಗೆ ಜನ್ಮದಿನದ ಶುಭಾಶಯವನ್ನು ಕೋರಿದ್ದಾರೆ. ಅದು ಮಾತ್ರವೇ ಅಲ್ಲದೇ ತಮ್ಮ ಅಪ್ಪನಲ್ಲಿನ ವಿಶೇಷ ಗುಣಗಳ ಬಗ್ಗೆ ಒಂದೊಂದು ಗುಣಕ್ಕೆ ಒಂದೊಂದು ವಿಶೇಷ ಫೋಟೋವನ್ನು ಹಂಚಿಕೊಂಡಿರುವ ಸಾನ್ವಿ ಅವರು, ನಾವಿಂದು ನಾಯಕತ್ವ, ಮುಗ್ಧತೆ, ನಿಷ್ಠೆ, ಪ್ರತಿಪಾದನೆ, ಕರುಣೆ, ಶಕ್ತಿ, ಶ್ರದ್ಧೆ, ಭಾವನಾತ್ಮಕ ಗುಣ, ಅಪರಿಮಿತ ಪ್ರೀತಿ, ಪರಿಶ್ರಮ ಎಲ್ಲವನ್ನೂ ನಾವು ಸೆಲೆಬ್ರೇಟ್ ಮಾಡುತ್ತಿದ್ದೇವೆ ಎಂದು ಬಹಳ ಹೆಮ್ಮೆಯಿಂದ, ಅಪ್ಪನ ಮೇಲಿನ ಅಪಾರವಾದ ಅಭಿಮಾನದಿಂದ ತಂದೆಗೆ ಜನ್ಮದಿನದ ವಿಶೇಷ ಶುಭಾಶಯಗಳನ್ನು ಸಾನ್ವಿ ಅವರು ಕೋರಿದ್ದಾರೆ.