ಅಪ್ಪನ ವಯಸ್ಸಿನ ಕಾರು ನೋಡಿ ಅಪ್ಪನೇ ನೆನಪಾಯ್ತು ಎಂದ ನವರಸನಾಯಕ ಜಗ್ಗೇಶ್

Entertainment Featured-Articles News
45 Views

ಸ್ಯಾಂಡಲ್ವುಡ್ ನಟ, ನವರಸನಾಯಕ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಲ್ಲದೇ ಅವರು ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಲು ಸೋಶಿಯಲ್ ಮೀಡಿಯಾಗಳು ಅವರಿಗೆ ದೊಡ್ಡ ನೆರವನ್ನು ನೀಡಿದೆ ಎನ್ನಬಹುದು. ಆಗಾಗ ಜಗ್ಗೇಶ್ ಅವರು ಒಂದಲ್ಲಾ ಒಂದು ವಿಶೇಷವಾದ ವಿಷಯವನ್ನು ಹಂಚಿಕೊಳ್ಳುತ್ತಾರೆ. ತಮ್ಮ ಜೀವನದ ಸಿಹಿ ಕಹಿ ಅನುಭವಗಳನ್ನು ವಿವರಿಸುತ್ತಾರೆ. ಸ್ಪೂರ್ತಿಯ ವಿಚಾರಧಾರೆಗಳನ್ನು ತಿಳಿಸುತ್ತಾರೆ. ಹೀಗೆ ಹತ್ತು ಹಲವು ವಿಚಾರಗಳನ್ನು ಜಗ್ಗೇಶ್ ಅವರು ಹಂಚಿಕೊಳ್ಳುತ್ತಾರೆ.

ಇದೀಗ ನಟ ಜಗ್ಗೇಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಒಂದು ಅಪರೂಪವಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು ಅವರು ಒಂದು ಅಪರೂಪದ ಕಾರಿನ ಫೋಟೋ ವನ್ನು ಶೇರ್ ಮಾಡಿಕೊಂಡಿದ್ದು, ಆ ಕಾರನ್ನು ನೋಡಿದ ಕೂಡಲೇ ತಮ್ಮ ತಂದೆಯ ನೆನಪಾಯಿತು ಎಂದು ಜಗ್ಗೇಶ್ ಅವರು ಹೇಳಿದ್ದಾರೆ. ಟ್ವಿಟರ್ ಮೂಲಕ ಈ ವಿಚಾರವನ್ನು ಅವರು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಅವರು ಕಾರಿನೊಡನೆ ಪೋಸ್ ನೀಡಿ ಹಂಚಿಕೊಂಡ ಆ ವಿಶೇಷ ಕಾರು ಆಸ್ಟಿನ್ ಆಫ್ ಇಂಗ್ಲೆಂಡ್ ಎನ್ನುವ ಹೆಸರಿನ ಕಾರಾಗಿದ್ದು, ಪುರಾತನ ಮಾದರಿಯ ಕಾರಾಗಿದೆ. ಸಹಜವಾಗಿಯೇ ಹಳೆಯ ಕಾರುಗಳು ಜನರ ಗಮನ ಸೆಳೆಯುತ್ತವೆ. ಒಂದು ವಿಶ್ವದ ಹಲವು ಭಾಗಗಳಲ್ಲಿ ಹಳೆಯ ಮಾದರಿಯ ಕಾರುಗಳನ್ನು ಪ್ರದರ್ಶನ ಮಾಡುವ ಮ್ಯೂಸಿಯಂ ಗಳು ಸಹಾ ಇವೆ. ಹಳೆಯ ಕಾರುಗಳನ್ನು ನೋಡುವುದೇ ಒಂದು ಸಂಭ್ರಮ ಎನಿಸುತ್ತದೆ.

ಜಗ್ಗೇಶ್ ಅವರು ಪಿತೃಪಕ್ಷ ಪೂಜೆಗೆಂದು ಮಾಯ ಸಂದ್ರಕ್ಕೆ ತೆರಳುತ್ತಿದ್ದ ವೇಳೆ ಅವರ ಕಣ್ಣಿಗೆ ಈ ಕಾರು ಬಿದ್ದಿದ್ದು, ಅದನ್ನು ನೋಡಿ ಜಗ್ಗೇಶ್ ಅವರು ಬಹಳ ಖುಷಿಯಾಗಿದ್ದಾರೆ. ಅಪ್ಪನ ವಯಸ್ಸಿನ ಕಾರನ್ನು ನೋಡಿ, ತಮ್ಮ ಅಪ್ಪನನ್ನು ನೋಡಿದಷ್ಟೇ ಖುಷಿಯಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಮ್ಮ ಖುಷಿಗೆ ಅವರು ಅಕ್ಷರಗಳ ರೂಪ ನೀಡಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಅವರು ತಮ್ಮ ಪೋಸ್ಟ್ ನಲ್ಲಿ, “1930 ಆಸ್ಟಿನ್ ಇಂಗ್ಲೆಂಡ್ ಕಾರು.ಇದು ಅಪ್ಪ ಹುಟ್ಟಿದ ವರ್ಷದ ಕಾರು.. ಇಂದು ನಮ್ಮ ಅಪ್ಪನಿಗೆ ಪಿತೃಪಕ್ಷ ಪೂಜೆ ಮಾಡಲು ಮಾಯಸಂದ್ರಕ್ಕೆ ತೆರಳುವಾಗ ಸಿಕ್ಕಿತು..ಅಪ್ಪನ ವಯಸ್ಸಿನ ಕಾರು ಕಂಡು ಅಪ್ಪನ ಕಂಡಷ್ಟೆ ಸಂತೋಷವಾಯಿತು…Appa I love you” ಎಂದು ಬರೆದುಕೊಂಡು ಅಪ್ಪನನ್ನು ಸ್ಮರಿಸಿದ್ದಾರೆ ನಟ ಜಗ್ಗೇಶ್ ಅವರು.

Leave a Reply

Your email address will not be published. Required fields are marked *