ಅಪ್ಪನಿಗಾಗಿ ಪ್ರೀತಿಸಿದ ಹುಡುಗಿಯನ್ನು ಬಿಟ್ಟೆ: ಕ್ರೇಜಿ ಸ್ಟಾರ್ ಹೇಳಿದ ಅಪರೂಪದ ವಿಷಯ ಕೇಳಿದ್ರೆ ಅವರ ಮೇಲೆ ಗೌರವ ಹೆಚ್ಚಾಗುತ್ತೆ.

Written by Soma Shekar

Published on:

---Join Our Channel---

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್, ಕನಸುಗಾರ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಅದೊಂದು ಕನಸಿನ ಲೋಕ, ಅದ್ದೂರಿ ಮೇಕಿಂಗ್, ಕಣ್ಮನ ಸೆಳೆಯುವ ಸೆಟ್ಟಿಂಗ್, ಬಣ್ಣದ ಲೋಕವನ್ನೇ ತೆರೆದಿಡುವ ಹಾಡುಗಳು, ಮನಸ್ಸನ್ನು ಕುಣಿಸುವ ಸಂಗೀತ ಹೀಗೆ ಒಂದು ಅಪರೂಪದ ದೃಶ್ಯ ವೈಭವ ನಮ್ಮ‌ ಕಣ್ಮುಂದೆ ಬರುತ್ತದೆ ಎನ್ನುವುದು ಅವರ ಸಿನಿಮಾಗಳನ್ನು ನೋಡಿದ ಪ್ರತಿಯೊಬ್ಬರಿಗೂ ಸಹಾ ತಿಳಿದಿರುವ ವಿಚಾರವಾಗಿದೆ. ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುವುದು ಒಂದು ಅದ್ಭುತ ಅನುಭವ ಎಂದು ಹಾಡಿ ಹೊಗಳುವ ಅಸಂಖ್ಯಾತ ಅಭಿಮಾನಿಗಳು ನಾಡಿನ ಮೂಲೆ ಮೂಲೆಯಲ್ಲಿ ಸಹಾ ಇದ್ದಾರೆ. ಹೀಗೆ ಸಿನಿಮಾಗಳ ಮೂಲಕ ಕಲರ್ಫುಲ್ ಲೋಕವನ್ನು ಆವಿಷ್ಕಾರ ಮಾಡುವ ರವಿಚಂದ್ರನ್ ಅವರು ತಮ್ಮ ಜೀವನದಲ್ಲಿನ ಒಂದು ಬಹುಮುಖ್ಯವಾದ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿದ್ದು, ಇದೊಂದು ಆಶ್ಚರ್ಯ ಹಾಗೂ ಶಾ ಕಿಂಗ್ ವಾಸ್ತವ ಎನ್ನಬಹುದು.

ಹೌದು ನಟ ರವಿಚಂದ್ರನ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಮ್ಮ ಸಿನಿ ಪಯಣ, ತಮ್ಮ ವೈಯಕ್ತಿಕ ಜೀವನ, ಕುಟುಂಬ ಹೀಗೆ ನಾನಾ ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡು, ಸುಖ, ದುಃಖ, ಏಳು ಬೀಳು, ಜೀವನ ಸಾಧನೆ ಹೀಗೆ ಹತ್ತು ಹಲವು ಪ್ರಮುಖವಾದ ವಿಚಾರಗಳನ್ನು ಮಾತನಾಡುತ್ತಾ, ತಾವು ತಮ್ಮ ತಂದೆಯ ಮಾತಿಗಾಗಿ ತಮ್ಮ ಪ್ರೀತಿಯನ್ನು ಸಹಾ ಮರೆತ ವಿಚಾರವನ್ನು ಹೇಳುವ ಮೂಲಕ ಎಲ್ಲರಿಗೂ ಒಂದು ಆಶ್ಚರ್ಯ ವನ್ನು ಉಂಟು ಮಾಡಿದ್ದಾರೆ. ರವಿಚಂದ್ರನ್ ಅವರು ಒಬ್ಬರನ್ನು ಇಷ್ಟ ಪಟ್ಟಿದ್ದರು ಎನ್ನುವ ವಿಚಾರ ಕೇಳಿದಾಗ ಪ್ರತಿಯೊಬ್ಬರಿಗೂ ಸಹಾ ಈ ವಿಚಾರ ಕುತೂಹಲವನ್ನು ಮೂಡಿಸುವುದು ಖಚಿತ.

ಹೌದು ಕ್ರೇಜಿ ಸ್ಟಾರ್ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದರಂತೆ. ಆದರೆ ಅವರು ತಮ್ಮ ತಂದೆಗಾಗಿ ಆ ಪ್ರೀತಿಯನ್ನು ತ್ಯಾಗ ಮಾಡಿದ್ದಾರೆ. ಅವರು ಮಾತನಾಡುತ್ತಾ ನನ್ನ ತಂದೆಯ ಪ್ರೀತಿಯ ಮುಂದೆ ನನ್ನ ಪ್ರೀತಿ ನಿಜಕ್ಕೂ ವೇಸ್ಟ್ ಎನಿಸಿತು. ಅವರ ಆ ಪ್ರೀತಿಯ ಮುಂದೆ ನನ್ನ ಪ್ರೀತಿ ದೊಡ್ಡದಲ್ಲ ಎನಿಸಿತ್ತು. ಅಲ್ಲದೇ ಈಗ ಕುಟುಂಬದಲ್ಲಿ ಕೂಡಾ ನಾನು ಅಪಾರವಾದ ಪ್ರೀತಿಯನ್ನು ಕಾಣುತ್ತಿದ್ದೇನೆ ಎಂದು ತಮ್ಮ ಜೀವನದಲ್ಲಿ ತಮ್ಮ ತಂದೆ, ಪತ್ನಿ, ಮಕ್ಕಳಿಂದ ಸಿಕ್ಕ ಅಪಾರವಾದ ಪ್ರೀತಿಯ ಬಗ್ಗೆ ಬಹಳ ಮೆಚ್ಚುಗೆಯಿಂದ ಮನಃಪೂರ್ವಕವಾಗಿ ಮಾತುಗಳನ್ನು ಆಡಿದ್ದಾರೆ. ಆದರೆ ತಂದೆಗಾಗಿ ಪ್ರೀತಿಯನ್ನು ಸಹಾ ಮರೆತ ರವಿಚಂದ್ರನ್ ಅವರ ಬಗ್ಗೆ ತಿಳಿದಾಗ ಅವರಿಗೆ ತಂದೆಯ ಮೇಲೆ ಎಷ್ಟು ಪ್ರೀತಿಯಿತ್ತು ಎನ್ನುವುದು ನಮಗೆ ತಿಳಿಯುತ್ತದೆ.

Leave a Comment