ಅಪೂರ್ವ ಸಂಗಮ,ನನ್ನ ತಮ್ಮ ಸಿಕ್ಬಿಟ್ಟ: ಡ್ರೋಣ್ ಪ್ರತಾಪ್ ನನ್ನು ಭೇಟಿ ಮಾಡಿದ ಒಳ್ಳೆ ಹುಡುಗ ಪ್ರಥಮ್

0 3

ಬಿಗ್ ಬಾಸ್ ನ ವಿನ್ನರ್, ಒಳ್ಳೆ ಹುಡುಗ ಪ್ರಥಮ್ ನಮ್ಮ ನಾಡಿನಲ್ಲಿ ಒಬ್ಬ ಬಹಳ ಜನಪ್ರಿಯ ಸೆಲೆಬ್ರಿಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಅವರು ಸದಾ ಒಂದಿಲ್ಲೊಂದು ವಿಷಯವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳು, ನೆಟ್ಟಿಗರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತಾರೆ. ತಾವು ಮಾಡುವ ಉತ್ತಮ ಕೆಲಸಗಳ ಕುರಿತಾಗಿ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ. ಕೆಲವು ಸಾಮಾಜಿಕ ಸಮಸ್ಯೆಗಳ ಕುರಿತಾಗಿ, ವೈವಿದ್ಯಮಯ ವಿಚಾರಗಳ ಕುರಿತಾಗಿ ಚರ್ಚೆಗಳನ್ನು ಹುಟ್ಟು ಹಾಕುತ್ತಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಪ್ರಥಮ್ ಅವರ ಒಂದು ಪೋಸ್ಟ್ ಇದೀಗ ಎಲ್ಲರ ಗಮನ ಸೆಳೆದಿರುವುದು ಮಾತ್ರವೇ ಅಲ್ಲದೇ ಅನೇಕರ ಅಚ್ಚರಿಗೆ ಸಹಾ ಇದು ಕಾರಣವಾಗಿದೆ.‌

ಈಗ ಪ್ರಥಮ್ ಅವರ ಪೋಸ್ಟ್ ಬಗ್ಗೆ ಇಷ್ಟೊಂದು ಅಚ್ಚರಿ ಮೂಡಿದ್ದಾದ್ರೂ ಏಕೆ? ಎನ್ನೋದಾದ್ರೆ ಅದಕ್ಕೆ ಖಂಡಿತ ಆಸಕ್ತಿಕರ ಕಾರಣ ಆಗಿದ್ದು ಪ್ರಥಮ್ ಅವರು ಡ್ರೋಣ್ ಪ್ರತಾಪನನ್ನು ಭೇಟಿ ಮಾಡಿ, ಆತನ ಜೊತೆಗೆ ಮಾತುಕತೆ ನಡೆಸಿರುವುದು. ಅಲ್ಲದೇ ಈ ಮಾತುಕತೆಯ ನಂತರ ಪ್ರಥಮ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಗಳನ್ನಹ ಬಹಳ ಖುಷಿಯಿಂದ ಹಂಚಿಕೊಂಡಿರುವುದು ಮಾತ್ರವೇ ಅಲ್ಲದೇ ಕೆಲವೊಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದು, ನನ್ನ ತಮ್ಮ ಸಿಕ್ಕಿ ಬಿಟ್ಟ ಎಂದು ಅವರು ಬರೆದುಕೊಂಡಿರುವುದು ನೋಡಿ ಜನ ಆಶ್ಚರ್ಯ ಪಟ್ಟಿದ್ದಾರೆ. ಅಲ್ಲದೇ ಜನರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆಗಳನ್ನು ಸಹಾ ನೀಡುತ್ತಿದ್ದಾರೆ.

ಪ್ರಥಮ್ ಅವರು ತಮ್ಮ ಪೋಸ್ಟ್ ನಲ್ಲಿ, “ಪಿಕ್ ಆಫ್ ದಿ ಇಯರ್, ಡ್ರೋಣ್ ಪ್ರತಾಪ್ ಮೀಟ್ಸ್ ಅಟ್ ಡ್ರೋಣ್ ಪ್ರತಾಪ್. ಇನ್ಮೇಲೆ ಇವ್ನು ನನ್ನ ತಮ್ಮ, ಅಪೂರ್ವ ಸಂಗಮ, ನನ್ನ ತಮ್ಮ ಸಿಕ್ಬಿಟ್ಟ, ಡ್ರೋಣ್ ಪ್ರತಾಪ್ ಶೂಟ್ ಮುಂದಿನ ವಾರದಿಂದ ಪ್ರಾರಂಭವಾಗಲಿದೆ” ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ತಮ್ಮ ಹೊಸ ಸಿನಿಮಾದ ಬಗ್ಗೆ ಹೇಳಿದ್ದಾರೆ. ಇನ್ನು ಪ್ರಥಮ್ ಅವರ ಪೋಸ್ಟ್ ಗೆ ಕಾಮೆಂಟ್ ಗಳನ್ನು ಮಾಡಿದವರು ಎಂದಿನಂತೆ ಡ್ರೋಣ್ ಪ್ರತಾಪ್ ನನ್ನು ಕಾಗೆ ಪ್ರತಾಪ್, ಹುಷಾರಾಗಿರಿ, ನೀವು ತಮಾಷೆಗೆ ಕಾಗೆ ಹಾರಿಸಿದರೆ ನಿಮ್ಮ ತಮ್ಮ ರಿಯಲ್ ಆಗೇ ಕಾಗೆ ಹಾರಿಸ್ತಾನೆ ಎಂದೆಲ್ಲಾ ವ್ಯಂಗ್ಯ ಮಾಡುತ್ತಿದ್ದಾರೆ.

Leave A Reply

Your email address will not be published.