ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್ ನೋಡಿ, ಫಿದಾ ಆದ ಅಭಿಮಾನಿಗಳು!!
ಧಾರಾವಾಹಿ ಗಳ ಮೂಲಕ ನಟನೆಯ ಲೋಕಕ್ಕೆ ಅಡಿಯಿಡುವ ನಟಿಯರಲ್ಲಿ ಹಲವರು ಸಿನಿಮಾ ರಂಗಕ್ಕೂ ಪಾದಾರ್ಪಣೆ ಮಾಡುತ್ತಾರೆ. ಅದರಲ್ಲಿ ಬೆರಳೆಣಿಕೆಯಷ್ಟು ನಟಿಯರು ಮಾತ್ರವೇ ದೊಡ್ಡ ಹೆಸರು ಮಾಡಿದರೆ, ಕೆಲವು ನಟಿಯರು ಸ್ಟಾರ್ ನಟಿಯರಾಗಿ ಸಿನಿಮಾ ರಂಗದಲ್ಲಿ ಮಿಂಚುತ್ತಾರೆ. ಇದೀಗ ಅಂತಹುದೇ ಒಂದು ಸಿನಿ ಯಾತ್ರೆಗೆ ಸಿದ್ಧವಾಗಿರುವ ನಟಿ ಮೇಘಾ ಶೆಟ್ಟಿ. ನಟಿ ಮೇಘಾ ಶೆಟ್ಟಿ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಾಯಕಿಯ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದರು.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದ ಈ ನಟಿ ಪಡೆದ ಜನಪ್ರಿಯತೆ ಬಹಳ ದೊಡ್ಡದು. ಅವರ ಈ ಜನಪ್ರಿಯತೆಯ ಫಲ ಎಂಬಂತೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ಮೇಘಾ ಅವರಿಗೆ ಅವಕಾಶ ದೊರೆಯಿತು. ಅದಾದ ನಂತರ ಲವ್ ಮ್ಯಾಕ್ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ನಲ್ಲೂ ಕೂಡಾ ನಾಯಕಿಯಾಗಿರುವ ವಿಷಯ ಸುದ್ದಿಗಳಾಗಿ ಎಲ್ಲರ ಗಮನವನ್ನು ಸೆಳೆದಿತ್ತು.
ಮೇಘಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಗವಾಗಿರುವ ನಟಿಯಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ತಮ್ಮ ಅಂದವಾದ ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ. ಇತ್ತೀಚಿಗೆ ಸಖತ್ ಗ್ಲಾಮರಸ್ ಆಗಿ ಮೇಘಾ ಶೆಟ್ಟಿ ಫೋಟೋ ಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೇಘಾ ಶೆಟ್ಟಿ ಅವರ ಹೊಸ ಫೋಟೋ ಶೂಟ್ ನ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ನಟಿಯ ಅಂದ ಹಾಗೂ ಸ್ಟೈಲ್ ಗೆ ಫಿದಾ ಆಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬಂದಿವೆ. ನೂರಾರು ಮಂದಿ ಫೋಟೋಗೆ ಕಾಮೆಂಟ್ ಗಳನ್ನು ಮಾಡುವ ಮೂಲಕ ಮೇಘಾ ಅವರ ಸ್ಟೈಲ್ ಅನ್ನು ಹೊಗಳಿದ್ದಾರೆ. ಬಾಲಿವುಡ್ ನಟಿಯರಿಗಿಂತ ನೀವೇ ಅಂದವಾಗಿದ್ದೀರಿ ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕ ಮಂದಿ ನೀವು ಬಹಳ ಸುಂದರವಾಗಿ ಇದ್ದೀರಿ ಎಂದು ಹೊಗಳಿಕೆ ನೀಡಿದ್ದಾರೆ.