ಅನು ಮುಂದೆ ಬರೋನು ಆರ್ಯನಾಗಿ ಬರ್ತಾನೋ ಅಥವಾ ವಿಶ್ವಾಸ್ ಆಗಿಯೋ? ಜೊತೆ ಜೊತೆಯಲಿ ಟ್ವಿಸ್ಟ್ ಗಳಲ್ಲಿ ಸಿಲುಕಿದ ಪ್ರೇಕ್ಷಕರು??
ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಜೊತೆ ಜೊತೆಯಲಿ ಇತ್ತೀಚಿನ ದಿನಗಳಲ್ಲಿ ತನ್ನ ಹೊಸ ಹೊಸ ತಿರುವುಗಳ ಕಾರಣದಿಂದಾಗಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಸೀರಿಯಲ್ ನಲ್ಲಿ ನಾಯಕನ ಪಾತ್ರವಾದ ಆರ್ಯವರ್ಧನ್ ಆಗಿ, ಆ ಪಾತ್ರಕ್ಕೊಂದು ಗತ್ತನ್ನು ನೀಡಿದ್ದ ನಟ ಅನಿರುದ್ಧ್ ಅವರು ಆ ಪಾತ್ರದಿಂದ ಹೊರ ಬಂದ ಮೇಲೆ ಅಂದರೆ ಸೀರಿಯಲ್ ನಿಂದ ಅವರು ಹೊರ ಬಂದ ಮೇಲೆ ಆ ಪಾತ್ರ ಏನಾಗಲಿದೆ? ಎನ್ನುವ ವಿಚಾರವಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ಸಾಕಷ್ಟು ಚರ್ಚೆಗಳು ವಿಮರ್ಶೆಗಳು ನಡೆದಿದೆ. ಎಲ್ಲದಕ್ಕೂ ಉತ್ತರ ಸಹಾ ಇತ್ತೀಚಿನ ಎಪಿಸೋಡ್ ಗಳಲ್ಲಿ ಗೊತ್ತಾಗಿದೆ ಕೂಡಾ. ಆರ್ಯವರ್ಧನ್ ಸಹೋದರನ ಪಾತ್ರಕ್ಕೆ ಬಂದ ಹರೀಶ್ ರಾಜ್ ಅವರೇ ಇನ್ಮುಂದೆ ಆರ್ಯವರ್ಧನ್ ಅನ್ನೋದು ಪಕ್ಕಾ ಆಗಿದೆ.
ಸೀರಿಯಲ್ ನಲ್ಲಿ ಆರ್ಯವರ್ಧನ್ ಪಾತ್ರ ಸತ್ತಿಲ್ಲ, ಸತ್ತಿರುವುದು ವಿಶ್ವಾಸ್ ದೇಸಾಯಿ ಪಾತ್ರ. ಫೇಸ್ ಟ್ರಾನ್ಸ್ ಪ್ಲಾಂಟ್ ಎನ್ನುವ ತಂತ್ರಜ್ಞಾನದ ಮೂಲಕ ವಿಶ್ವಾಸ್ ದೇಸಾಯಿ ಮುಖವನ್ನು ಆರ್ಯವರ್ಧನ್ ಗೆ ನೀಡಲಾಗುವುದು ಎನ್ನುವುದು ವೈದ್ಯರ ಮಾತಿನಿಂದ ತಿಳಿದಿದೆ. ಆದರೆ ಇವೆಲ್ಲವುಗಳ ನಡುವೆ ಕಥೆಯಲ್ಲಿ ಹೊಸ ಟ್ವಿಸ್ಟ್ ಒಂದು ಕಂಡಿದೆ. ಹೊರ ಜಗತ್ತಿನಲ್ಲಿ ಉದ್ಯಮಿ ಆರ್ಯವರ್ಧನ್ ರಸ್ತೆ ಅ ಪ ಘಾ ತದಲ್ಲಿ ಸಾವಿಗೀಡಾಗಿದ್ದಾರೆ ಎನ್ನುವ ಸುದ್ದಿಗಳು ಹರಡಿವೆ. ನಾಯಕಿ ಅನು ಅವರ ತಂದೆ ತಾಯಿ ಕೂಡಾ ಆರ್ಯ ಇನ್ನಿಲ್ಲ ಎಂದೇ ತಿಳಿದಿದ್ದಾರೆ. ಗರ್ಭಿಣಿಯಾದ ಮಗಳಿಂದ ಆ ವಿಚಾರವನ್ನು ಮುಚ್ಚಿಡುವ ಪ್ರಯತ್ನ ಸಹಾ ಮಾಡಿದ್ದಾರೆ.
ಈಗ ಇದೆಲ್ಲವನ್ನು ನೋಡಿದ ಮೇಲೆ ಹೊಸ ಅನುಮಾನಗಳು ಹುಟ್ಟಿಕೊಂಡಿದೆ.. ಆಸ್ಪತ್ರೆಯಲ್ಲಿ ಇನ್ನೂ ಬದುಕಿರುವ ಆರ್ಯನ ಬಗ್ಗೆ ಆತ ಸತ್ತೇ ಹೋದ ಎನ್ನುವ ಸುಳ್ಳು ಮಾಹಿತಿಯನ್ನು ನೀಡಿದ್ದು ಯಾರು? ಅಸಲಿಗೆ ಆರ್ಯನ ಅ ಪ ಘಾ ತ ದ ಹಿಂದೆ ತಂತ್ರ ಹೂಡಿದ ಆ ಕಾಣದ ಕೈ ಯಾವುದು? ಎನ್ನುವುದು ಹೊಸ ಪ್ರಶ್ನೆಯಾಗಿದೆ. ಅಲ್ಲದೇ ಹೊರ ಜಗತ್ತಿಗೆ ಗೊತ್ತಾಗಿರುವ ಸತ್ಯ ಅನುಳಿಂದ ಎಷ್ಟು ಹೊತ್ತು ತಾನೇ ಮುಚ್ಚಿಡಲು ಸಾಧ್ಯ? ಅನುಗೆ ಗೊತ್ತಾದರೆ ಆಕೆಯ ಪ್ರತಿಕ್ರಿಯೆ ಹೇಗೆ ಇರಲಿದೆ ಎನ್ನುವುದು ಸಹಾ ಈಗ ನೋಡಬೇಕಾಗಿದೆ. ಇಷ್ಟೆಲ್ಲಾ ವಿಚಾರಗಳ ನಡುವೆ ಮತ್ತೆ ಒಂದು ಮುಖ್ಯ ಪ್ರಶ್ನೆ ಹಾಗೇ ಉಳಿಯುತ್ತದೆ.
ಆಸ್ಪತ್ರೆಯಲ್ಲಿ ಪ್ರಿಯದರ್ಶಿನಿ ವಿಶ್ವಾಸ್ ಸಾವು, ಆರ್ಯನ ಪ್ಲಾಸ್ಟಿಕ್ ಸರ್ಜರಿ ವಿಚಾರ ಹೊರಗೆ ಬರೋದು ಬೇಡ ಎಂದು ಹೇಳಿದ್ದಾರೆ. ಅದು ನಮ್ಮ ನಡುವೆಯೇ ಇರಬೇಕು ಎಂದಿದ್ದಾರೆ. ಹಾಗಾದರೆ ಚಿಕಿತ್ಸೆಯ ನಂತರ ಹೊರ ಬರುವ ವ್ಯಕ್ತಿ ಸಮಾಜದ ಮುಂದೆ ಆರ್ಯವರ್ಧನ್ ಆಗಿ ಬರ್ತಾನೋ ಅಥವಾ ತನ್ನ ಆ ಸ್ಥಿತಿಗೆ ಕಾರಣರಾದವರು ಯಾರು ಎಂದು ತಿಳಿಯೋದಕ್ಕೆ ತನ್ನ ಆರ್ಯವರ್ಧನ್ ಎನ್ನುವ ಅಸ್ತಿತ್ವವನ್ನು ಬಚ್ಚಿಟ್ಟು ವಿಶ್ವಾಸ್ ದೇಸಾಯಿ ಆಗಿ ಸಮಾಜದ ಮುಂದೆ ಬರ್ತಾನೋ? ಎನ್ನುವುದು ಸಹಾ ಸದ್ಯಕ್ಕಂತೂ ಉತ್ತರ ಸಿಗದ ಪ್ರಶ್ನೆಯಾಗಿದೆ. ಒಟ್ಟಾರೆ ಜೊತೆ ಜೊತೆಯಲಿ ಸೀರಿಯಲ್ ಪ್ರೇಕ್ಷಕರ ಮುಂದೆ ಪ್ರಶ್ನೆಗಳ ದೊಡ್ಡ ಸಾಲನ್ನೇ ಇರಿಸಿದೆ.