ಅನುಷ್ಕಾ ಶೆಟ್ಟಿ ನಂತ್ರ ಮತ್ತೊಬ್ಬ ಸ್ಟಾರ್ ನಟಿಯಿಂದ ಕಾಸ್ಟಿಂಗ್ ಕೌಚ್ ಬಗ್ಗೆ ಸಂಚಲನ ಹೇಳಿಕೆ!! ಏಕಾಂತ ಕ್ಕೆ ಕರೆದಿದ್ದ ಆ ನಟ??

Entertainment Featured-Articles News

ಕೆಲವೇ ದಿನಗಳ ಹಿಂದೆಯಷ್ಟೇ ದಕ್ಷಿಣ ಸಿನಿ ರಂಗದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು, ಈ ವಿಷಯ ತೆಲುಗು ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಅನುಷ್ಕಾ ಅವರು ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಎನ್ನುವ ಮೂಲಕ ಆ ವಿಷಯವು ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತ್ತು.ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ನಟಿ ಅನುಷ್ಕಾ ಶೆಟ್ಟಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು. ದಶಕಗಳ ಸಿನಿಮಾರಂಗದ ಅನುಭವದ ನಂತರ ನಟಿ ಹಂಚಿಕೊಂಡ ಮಾತುಗಳು ಸಹಜವಾಗಿಯೇ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿತ್ತು.

ಈಗ ಇದೇ ವಿಚಾರವಾಗಿ ಮತ್ತೊಬ್ಬ ಹಿರಿಯ ನಟಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ, ತನ್ನನ್ನು ತಾನು ಗುರುತಿಸಿಕೊಂಡಿದ್ದ ನಟಿ ಇಷಾ ಕೊಪ್ಪಿಕರ್ ಸಹಾ ಈಗ ಮಾತನಾಡಿದ್ದಾರೆ. ನಟಿ ಇಶಾ ಕೊಪ್ಪಿಕರ್ ಹೆಸರು ಕೇಳಿದ ತಕ್ಷಣ ಅವರು ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ನಟಿಸಿದ್ದ ಸೂರ್ಯವಂಶ ಸಿನಿಮಾ ನೆನಪಾಗುತ್ತದೆ. ಇದಲ್ಲದೇ ನಟಿ ಈಶಾ ಅವರು ಮತ್ತೊಬ್ಬ ಸ್ವಾರ್ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಓ ನನ್ನ ನಲ್ಲೆ ಸಿನಿಮಾದಲ್ಲಿ ಕೂಡ ನಟಿಸಿದ್ದರು.

90 ರ ದಶಕದಲ್ಲಿ ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಈಶಾ ಕೊಪ್ಪಿಕರ್ ಕೂಡ ಒಬ್ಬರಾಗಿದ್ದರು. ಆದರೆ ಮದುವೆಯ ನಂತರ ನಟಿ ಈಶಾ ಕೊಪ್ಪಿಕರ್ ಅವರು ಚಿತ್ರರಂಗದಿಂದ ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಮದುವೆಯ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ತೊಡಗಿಕೊಂಡಿಲ್ಲ. ನಟಿ ಈಶಾ ಸಿನಿ ರಂಗಕ್ಕೆ ಮಾಡೆಲಿಂಗ್ ಕ್ಷೇತ್ರದಿಂದ ಅಡಿಯಿಟ್ಟವರು. ಇಶಾ ಕೊಪ್ಪಿಕರ್ ಆರಂಭದಲ್ಲಿ ತನಗೆ ಆದಂತಹ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಬಂದ ನನಗೆ, ವಿದ್ಯಾಭ್ಯಾಸಕ್ಕಾಗಿ ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಮಾಡೆಲಿಂಗ್ ಮಾಡುತ್ತಿದ್ದೆ. ಆನಂತರ ಸಿನಿಮಾರಂಗದಿಂದ ಕರೆ ಬಂದಿತ್ತು. ಒಮ್ಮೆ ಒಬ್ಬ ನಿರ್ಮಾಪಕರು ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿದಾಗ ನಾನು ಒಪ್ಪಿಕೊಂಡೆ. ಆಗ ಅವರು ನೀವು ನನ್ನ ಸಿನಿಮಾದ ನಾಯಕನನ್ನು ಭೇಟಿ ಮಾಡಬೇಕು ಎನ್ನುವ ಮಾತನ್ನು ಹೇಳಿದರು. ನಾನು ಆಗ ಅವರಿಗೆ ಕರೆ ಮಾಡಿದೆ. ಆಗ ಅವರು ಹೇಳಿದ ಮಾತು ನಿಜಕ್ಕೂ ಊಹೆಗೆ ಮೀರಿದ್ದಾಗಿತ್ತು.

ಆ ನಟ ಜೊತೆಯಲ್ಲಿ ಯಾರನ್ನೂ ಕರೆದುಕೊಂಡು ಬರಬೇಡ. ಒಂಟಿಯಾಗಿ ಬಾ, ನಾವು ಏಕಾಂತದಲ್ಲಿ ಸಮಯವನ್ನು ಕಳೆಯಬೇಕು ಎನ್ನುವ ಮಾತನ್ನು ಹೇಳಿದರು. ಅವರು ಆ ರೀತಿ ಹೇಳಿದ್ದು ಯಾವ ಉದ್ದೇಶದಿಂದ ಎಂದು ನನಗೆ ಅರ್ಥವಾಗಿತ್ತು. ನಂತರ ನಾನು ನಿರ್ಮಾಪಕರಿಗೆ ಕರೆ ಮಾಡಿ ನನ್ನ ಪ್ರತಿಭೆಯ ಮೇಲೆ ನಂಬಿಕೆ ಇದ್ದರೆ ಅವಕಾಶ ಕೊಡಿ, ಇಲ್ಲವಾದರೆ ಬೇಡ ಎಂದು ಹೇಳಿದೆ. ಇದಾದ ನಂತರ ಆ ಸಿನಿಮಾದಲ್ಲಿ ಅವಕಾಶ ಸಿಗಲಿಲ್ಲ ಎನ್ನುವ ಮಾತನ್ನು ಹೇಳುತ್ತಾ ತನ್ನ ಅನುಭವವನ್ನು ನಟಿ ಈಶಾ ಕೊಪ್ಪಿಕರ್ ಹಂಚಿಕೊಂಡಿದ್ದಾರೆ.

ಈ ಮೂಲಕ ಕಳೆದ ಕೆಲವು ದಿನಗಳಿಂದ ಜನಪ್ರಿಯ ನಟಿಯರು ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವುದು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ ಎನ್ನುವುದಕ್ಕೆ ಒಂದು ರೀತಿಯಲ್ಲಿ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆ. ಈಗಾಗಲೇ ಹಲವು ಭಾಷೆಯ ನಟಿಯರು ಸಿನಿಮಾ ರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. ಅವರ ಅನುಭವಗಳಿಗೆ ಮಿಶ್ರ ಪ್ರತಿಕ್ರಿಯೆಗಳು ಕೂಡ ಇವೆ ವ್ಯಕ್ತವಾಗಿದೆ.

Leave a Reply

Your email address will not be published.