ಅನುಷ್ಕಾ ಶೆಟ್ಟಿಯ ಮದುವೆ ಯಾವಾಗ? ಅಭಿಮಾನಿಗಳಿಗೆ ಹೊಸ ಅಪ್ಡೇಟ್ ನೀಡಿದ ಹೊಸ ವಿಷಯ!

Entertainment Featured-Articles Movies News

ಸಿನಿಮಾ ಇಂಡಸ್ಟ್ರಿ ಯಾವುದೇ ಭಾಷೆಯದ್ದೇ ಆಗಲೀ ಇಲ್ಲಿಗೆ ವರ್ಷಕ್ಕೆ ಸಾಕಷ್ಟು ಜನ ಹೊಸ ಹೊಸ ಹೀರೋಯಿನ್ ಗಳು ಎಂಟ್ರಿ ನೀಡುತ್ತಲೇ ಇರುತ್ತಾರೆ. ಆದರೆ ಎಷ್ಟೇ ಹೊಸ ಮುಖಗಳು ಬಂದರೂ ಸಹಾ ಕೆಲವು ಹೀರೋಯಿನ್ ಗಳ ಕ್ರೇಜ್ ಮಾತ್ರ ಕಡಿಮೆಯಾಗುವುದಿಲ್ಲ. ಅವರು ಸಿನಿಮಾದಲ್ಲಿ ನಟಿಸುತ್ತಿರಲಿ ಅಥವಾ ಸಿನಿಮಾಗಳಿಂದ ಬ್ರೇಕ್ ಪಡೆದಿರಲಿ ಅವರನ್ನು ಅಭಿಮಾನಿಸುವ ಅಭಿಮಾನಿಗಳ ಬಳಗ ಮಾತ್ರ ತಮ್ಮ ಅಭಿಮಾನವನ್ನು ಕಡಿಮೆ ಮಾಡುವುದಿಲ್ಲ. ಅಂತಹ ನಟಿಯರಲ್ಲಿ ಒಬ್ಬರು ದಕ್ಷಿಣದ ಸ್ಟಾರ್ ನಟಿ ಎನಿಸಿಕೊಂಡಿರುವ ಅನುಷ್ಕಾ ಶೆಟ್ಟಿ. ಈ ನಟಿಗೆ ಇರುವ ಕ್ರೇಜ್ ಕುರಿತಾಗಿ ನಾವು ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ. ಮೂರು ಹತ್ತುಗಳ ವಯಸ್ಸು ದಾಟಿದರೂ ಸಹಾ ನಟಿಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

ಟಾಲಿವುಡ್ ನ ಸ್ಟಾರ್ ನಟ ನಾಗಾರ್ಜುನ ಜೊತೆಗೆ ಸೂಪರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ಅನುಷ್ಕಾ ಅನಂತರ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಾಯಕಿಯಾಗಿ ತೆರೆಯನ್ನು ಹಂಚಿಕೊಂಡಿದ್ದಾರೆ. ಕೇವಲ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ಮಾತ್ರವೇ ಅಲ್ಲದೇ ನಾಯಕಿ ಪ್ರಧಾನ ಸಿನಿಮಾಗಳಲದಲ್ಲಿ ಸಹಾ ನಟಿಸಿ ದೊಡ್ಡ ಯಶಸ್ಸನ್ನು ಪಡೆದ ನಟಿ ಅನುಷ್ಕಾ ಎಂದರೆ ಒಂದು ಬ್ರಾಂಡ್ ಎನ್ನುವಂತೆ ಆಗಿದ್ದಾರೆ. ಕೆಲವೊಂದು ಪಾತ್ರಗಳನ್ನು ಅನುಷ್ಕಾ ಶೆಟ್ಟಿಯವರೇ ಮಾಡಬೇಕು ಎನ್ನುವುದು ಕೆಲವು ನಿರ್ದೇಶಕರ ಅಭಿಪ್ರಾಯ ಕೂಡಾ ಹೌದು ಎನ್ನುವುದು ವಾಸ್ತವದ ವಿಷಯವಾಗಿದೆ.

ಆಲ್ ಇಂಡಿಯಾ ಮಟ್ಟದಲ್ಲಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಟಿಯು ಬಾಹುಬಲಿ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಗಳಿಸಿದ್ದಾರೆ. ಬಾಹುಬಲಿ ನಂತರ ನಟಿ ಮಾಡಿದ ಭಾಗಮತಿ ಸಿನಿಮಾ ಸಹಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿದೆ. ಆದರೆ ನಿಶ್ಯಬ್ದಂ ಸಿನಿಮಾ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಪಡೆದಿಲ್ಲ. ಅಲ್ಲದೇ ನಟಿ ಅನುಷ್ಕಾ ಕೂಡಾ ಅದಾದ ನಂತರ ಯಾವುದೇ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೇ ನಟಿಯ ಹೊಸ ಸಿನಿಮಾ ಕೂಡಾ ಇನ್ನೂ ಅಧಿಕೃತವಾಗಿ ಘೋಷಣೆ ಸಹಾ ಆಗಿಲ್ಲ. ನಟಿಯ ಅಭಿಮಾನಿಗಳು ನಟಿಯ ಕಮ್ ಬ್ಯಾಕ್ ಗಾಗಿ ಕಾಯುತ್ತಿದ್ದಾರೆ.

ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯರು ಒಬ್ಬೊಬ್ಬರಾಗಿ ವೈವಾಹಿಕ ಜೀವನಕ್ಕೆ ಅಡಿಯಿಡುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ನಟಿ ಅನುಷ್ಕಾ ಮದುವೆ ಯಾವಾಗ? ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ತಕ್ಕಂತೆ ಕಳೆದ ಒಂದೆರಡು ವರ್ಷಗಳಿಂದಲೂ ಅನುಷ್ಕಾ ಅವರ ಮದುವೆಗೆ ಸಂಬಂಧಿಸಿದಂತೆ ಕೆಲವೊಂದು ಸುದ್ದಿಗಳು ಹರಿದಾಡಿದೆ. ನಟಿಯು ದುಬೈ ಮೂಲದ ತನಗಿಂತ ಮೂರು ವರ್ಷ ಕಿರಿಯವರಾದ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದೆ. ಆದರೆ ಅಧಿಕೃತವಾಗಿ ಮಾತ್ರ ಯಾವುದೇ ವಿಷಯ ಹೊರ ಬಂದಿಲ್ಲ. ಅಲ್ಲದೇ ಆಪ್ತ ಮೂಲಗಳ ಪ್ರಕಾರ ಶೀಘ್ರದಲ್ಲೇ ಮದುವೆಯ ವಿಚಾರ ಅಧಿಕೃತವಾಗಿ ಹೊರ ಬೀಳಲಿದೆ ಎನ್ನಲಾಗಿದೆ.

Leave a Reply

Your email address will not be published.