HomeEntertainmentಈ ಡ್ರೆಸ್ ನಿಮ್ದಾ? ನಿಮ್ಮ ಮಗಳದ್ದಾ? ಫೋಟೋ ಶೇರ್ ಮಾಡಿ ಭರ್ಜರಿ ಟ್ರೋಲಾದ ಅನುಷ್ಕಾ...

ಈ ಡ್ರೆಸ್ ನಿಮ್ದಾ? ನಿಮ್ಮ ಮಗಳದ್ದಾ? ಫೋಟೋ ಶೇರ್ ಮಾಡಿ ಭರ್ಜರಿ ಟ್ರೋಲಾದ ಅನುಷ್ಕಾ ಶರ್ಮಾ

Anushka Sharma : ಸಿನಿಮಾ ಸೆಲೆಬ್ರಿಟಿಗಳು(cinema celebrities) ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಸಿನಿಮಾ ಸ್ಟಾರ್ ಗಳು ಸೋಶಿಯಲ್ ಮೀಡಿಯಾಗಳಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಆದರೆ ಸೋಶಿಯಲ್ ಮೀಡಿಯಾಗಳಲ್ಲೇ ಆಗಲೀ ಅಥವಾ ಹೊರಗಿನ ಜಗತ್ತಿನಲ್ಲೇ ಆಗಲಿ ಸಿನಿಮಾ ಸೆಲೆಬ್ರಿಟಿಗಳು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾದುದು ಅನಿವಾರ್ಯವಾಗಿದೆ. ಏಕೆಂದರೆ ಅವರು ಧರಿಸುವ ವಸ್ತ್ರದಿಂದ ಹಿಡಿದು ಆಡುವ ಮಾತಿನ ವರೆಗೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ.

ಈಗ ಬಾಲಿವುಡ್ ನ ಸ್ಟಾರ್ ನಟಿ ಅನುಷ್ಕಾ ಶರ್ಮಾ (Anushka Sharma) ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಟ್ರೋಲ್ ಆಗಿದ್ದಾರೆ. ಅನುಷ್ಕಾ ಶರ್ಮಾ ಅವರು ಈಗ ಟ್ರೋಲ್ ಆಗುತ್ತಿರುವುದಕ್ಕೆ ಪ್ರಮುಖ ಕಾರಣ ನಟಿಯು ತೊಟ್ಟ ಡ್ರೆಸ್(Anushka Sharma troll ) ಎನ್ನುವುದು ಸತ್ಯವಾದ ವಿಚಾರವಾಗಿದೆ. ಆದರೆ ನಟಿ ಮಾತ್ರ ಟ್ರೋಲ್ ಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡುವ ತಂಟೆಗೆ ಮಾತ್ರ ಹೋಗಿಲ್ಲ ಎನ್ನುವುದು ಕೂಡಾ ನಿಜವಾಗಿದೆ. ಇಷ್ಟಕ್ಕೂ ಆಗಿದ್ದೇನು? ತಿಳಿಯೋಣ ಬನ್ನಿ.

ಜನವರಿ 24 ರಂದು ನಟಿ ಅನುಷ್ಕಾ ಶರ್ಮಾ (Anushka Sharma) ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದರು. ಹಳದಿ ಬಣ್ಣದ ಟಾಪ್ ಮತ್ತು ಜೀನ್ಸ್ ಧರಿಸಿದ ನಟಿ ಆಕರ್ಷಕ ಪೋಸ್ ಗಳನ್ನು ನೀಡಿದ್ದಾರೆ. ಆದರೆ ನಟಿ ಧರಿಸಿದ್ದ ಹಳದಿ ಬಣ್ಣದ ಟಾಪ್ ಟೈಟ್ ಆಗಿದ್ದು, ಅವರು ಅವರ ದೇಹವನ್ನು ಪೂರ್ತಿಯಾಗಿ ಮುಚ್ಚಿಲ್ಲ. ಅದೊಂದು ಫ್ಯಾಷನ್ ಇದ್ದರೂ ಇರಬಹುದು. ಆದರೆ ನೆಟ್ಟಿಗರಿಗೆ ವಿಶೇಷವಾಗಿ ಟ್ರೋಲ್(Anushka Troll) ಮಾಡುವವರಿಗೆ ನಟಿಯ ಈ ಡ್ರೆಸ್ ಭರ್ಜರಿ ಟ್ರೋಲ್ ಮಾಡಲು ಅವಕಾಶವನ್ನು ಒದಗಿಸಿಕೊಟ್ಟಿದೆ.

ಫೋಟೋ ವೈರಲ್ ಆದ್ಮೇಲೆ ನೆಟ್ಟಿಗರು ವೈವಾಹಿಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ನಟಿಯನ್ನು, ಇದು ನಿಮ್ಮ ಡ್ರೆಸ್ಸಾ ಅಥವಾ ನಿಮ್ಮ‌ ಮಗಳದ್ದಾ? ಎಂದು ಪ್ರಶ್ನೆ ಮಾಡಿದ್ದಾರೆ. ಆತುರ ದಲ್ಲಿ ನಟಿ ಮಗಳ ಬಟ್ಟೆಯನ್ನು ಹಾಕ್ಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಅಲ್ಲದೇ ಮದುವೆಯಾಗಿ, ಮಗು ಆದರೂ ಕೂಡಾ ಯಾವ ರೀತಿ ಬಟ್ಟೆ ಹಾಕಿಕೊಳ್ಳಬೇಕು ಅನ್ನೋದು ನಿಮಗೆ ಗೊತ್ತಿಲ್ವ ಎಂದು ಪ್ರಶ್ನೆ ಮಾಡಿ, ಟೀಕಿಸಿದ್ದಾರೆ. ಆದರೆ ನಟಿಯ ಅಭಿಮಾನಿಗಳು ಮಾತ್ರ ನಟಿಯ ಪರ ಬ್ಯಾಟಿಂಗ್ ಮಾಡುತ್ತಾ, ಬಟ್ಟೆ ಯಾವ ತರದ್ದು ಹಾಕಬೇಕು ಎನ್ನುವುದು ಅವರ ಆಯ್ಕೆ ಎಂದಿದ್ದಾರೆ.

- Advertisment -