ಆ ಅವಕಾಶ ಅನುಷ್ಕಾಗಿಂತ ಮೊದಲು ಬಂದಿದ್ದು ನನಗೆ: ಶಾಕಿಂಗ್ ಸತ್ಯ ಬಿಚ್ಚಿಟ್ಟ ದಕ್ಷಿಣದ ಜನಪ್ರಿಯ ನಟಿ

Entertainment Featured-Articles Movies News
55 Views

ದಕ್ಷಿಣ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯರ ಸಾಲಿನಲ್ಲಿ ತನ್ನದೇ ಆದ ಹೆಸರನ್ನು ಮಾಡಿರುವ ನಟಿ ಅನುಷ್ಕಾ ಶೆಟ್ಟಿ(Anushka Shetty). ತೆಲುಗು ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮತ್ತು ಅಭಿಮಾನಿಗಳನ್ನು ಪಡೆದಿರುವ ನಟಿ. ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಅಪಾರ ಜನಪ್ರಿಯತೆ ಪಡೆದ ಈ ನಟಿ ನಟನೆ, ಗ್ಲಾಮರ್, ಡ್ಯಾನ್ಸ್ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡು ಮಿಂಚಿದವರು. ಪ್ರಸ್ತುತ ನಟಿ ಅನುಷ್ಕಾ ಮೊದಲಿನಷ್ಟು ಸಿನಿಮಾಗಳಲ್ಲಿ ಸಕ್ರಿಯವಾಗಿ ಇಲ್ಲವಾದರೂ ಕೆಲವೇ ದಿನಗಳ ಹಿಂದೆಯಷ್ಟೇ ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಅವರ ಹೊಸ ಸಿನಿಮಾ ಘೋಷಣೆ ಆಗಿದೆ.

ನಟಿ ಅನುಷ್ಕಾ ಶೆಟ್ಟಿ ಅವರ ಸಿನಿಮಾ ಜರ್ನಿಯಲ್ಲಿ ಮೈಲಿಗಲ್ಲು ಎನಿಸಿರುವ ಸಿನಿಮಾ ಅರುಂಧತಿ(Arundhati). ಈ ಸಿನಿಮಾದಲ್ಲಿ ನಟಿಯ ಅಭಿನಯ ಕಂಡು ಅಚ್ಚರಿ ಪಟ್ಟಿದ್ದರು ಸಿನಿಮಾ ಪ್ರೇಮಿಗಳು. ಅರುಂಧತಿ ಸಿನಿಮಾ ಕಂಡ ದೊಡ್ಡ ಯಶಸ್ಸಿನ ನಂತರ ಅನುಷ್ಕಾ ಶೆಟ್ಟಿ(Anushka Stardom) ಅವರ ಸ್ಟಾರ್ ಡಂ ಇನ್ನೊಂದು ಹಂತವನ್ನು ತಲುಪಿತ್ತು. ಹೀಗೆ ನಟಿಗೆ ದೊಡ್ಡ ಹೆಸರನ್ನು ತಂದು ಕೊಟ್ಟ ಈ ಸಿನಿಮಾ ಆಫರ್ ಅನ್ನು ಅನುಷ್ಕಾ ಶೆಟ್ಟಿಗಿಂತ ಮೊದಲು ಬೇರೊಬ್ಬ ನಟಿಗೆ ನೀಡಲಾಗಿತ್ತು ಎಂದು ನಿಮಗೆ ಗೊತ್ತಾ?

ಹೌದು, ಈ ವಿಚಾರವನ್ನು ಮಾದ್ಯಮಗಳ ಮುಂದೆ ನಟಿಯೊಬ್ಬರು ಶೇರ್ ಮಾಡಿಕೊಂಡು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ. ದಕ್ಷಿಣ ಸಿನಿಮಾ ರಂಗದಲ್ಲಿ ಜನಪ್ರಿಯ ನಟಿಯಾಗಿ ಹೆಸರನ್ನು ಪಡೆದಿರುವ ನಟಿ ಮಮತಾ ಮೋಹನ್ ದಾಸ್ (Mamata Mohandas) ಅವರು ಸಂದರ್ಶನವೊಂದರಲ್ಲಿ ಈ ಅಚ್ಚರಿಯ ವಿಷಯವನ್ನು ಹಂಚಿಕೊಂಡಿದ್ದು, ಅನುಷ್ಕಾ ಗಿಂತ ಮೊದಲು ಅರುಂಧತಿ ಸಿನಿಮಾ ಆಫರ್ ತನಗೆ ಬಂದಿತ್ತು ಎಂದು ತಿಳಿಸಿದ್ದಾರೆ.

ನಟಿ ಮಮತಾ ಮೋಹನ್ ದಾಸ್ ಅವರು, ಅರುಂಧತಿ ಸಿನಿಮಾದಲ್ಲಿ ನಟಿಸುವ ಅವಕಾಶ ನನಗೆ ದಕ್ಕಿತ್ತು. ಆದರೆ ನಾನು ಆಗ ತಾನೇ ತೆಲುಗು ಸಿನಿಮಾ ಇಂಡಸ್ಟ್ರಿ ಗೆ ಕಾಲಿಟ್ಟಿದ್ದ ಕಾರಣ ಆ ಪಾತ್ರವನ್ನು ಮಾಡಲು ಭಯಪಟ್ಟೆ, ಅವಕಾಶವನ್ನು ತಿರಸ್ಕಾರ ಮಾಡಿದೆ. ಆದರೆ ಅದು ನಾನು ಮಾಡಿದ ಬಹಳ ದೊಡ್ಡ ತಪ್ಪೆಂದು ನನಗೆ ಅನಂತರ ಅರ್ಥವಾಯಿತು ಎನ್ನುವ ಮಾತನ್ನು ಹೇಳುವ ಮೂಲಕ ಅರುಂಧತಿ ಪಾತ್ರಕ್ಕೆ ಮೊದಲ ಅವಕಾಶ ತನಗೆ ಬಂದಿತ್ತು ಎನ್ನುವ ವಿಷಯ ಬಹಿರಂಗಪಡಿಸಿದ್ದಾರೆ.

Leave a Reply

Your email address will not be published. Required fields are marked *