ಅನುಷ್ಕಾನಾ ಅಥವಾ ಸಮಂತಾನಾ!! ಯಾರಾಗಲಿದ್ದಾರೆ ಈ ಪ್ರತಿಷ್ಠಿತ ಸಿನಿಮಾದ ನಾಯಕಿ?? ನಡೆದಿದೆ ಜೋರು ಚರ್ಚೆ

Entertainment Featured-Articles News

ದಕ್ಷಿಣ ಸಿನಿರಂಗದ ಅದರಲ್ಲೂ ವಿಶೇಷವಾಗಿ ಟಾಲಿವುಡ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಅನುಷ್ಕಾ ಕಳೆದ ಕೆಲವು ಸಮಯದಿಂದಲೂ ಸಹಾ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಅನುಷ್ಕಾ ಶೆಟ್ಟಿ ಅವರ ಅಭಿಮಾನಿಗಳು ತಮ್ಮ ಅಭಿಮಾನ ನಟಿಯನ್ನು ತೆರೆಯ ಮೇಲೆ ನೋಡಲು ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ನಟಿ ಅನುಷ್ಕಾ ನಟನೆಯ ಯಾವುದೇ ಹೊಸ ಸಿನಿಮಾ ಗಳ ಘೋಷಣೆಯಾಗಿಲ್ಲ. ಆಗಾಗ ನಟಿ ಅನುಷ್ಕಾ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಆಗುತ್ತವೆಯಾದರೂ ಅಧಿಕೃತ ಘೋಷಣೆ ಮಾತ್ರ ಆಗಿಲ್ಲ ಎನ್ನುವುದು ಸತ್ಯ. ಈಗ ಇವೆಲ್ಲವುಗಳ ನಡುವೆ ಹೊಸ ಸುದ್ದಿ ಸದ್ದು ಮಾಡಿದೆ‌.

ಟಾಲಿವುಡ್ ನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ನಟಿ ಅನುಷ್ಕಾ ಶೆಟ್ಟಿ ಹಿಂದಿನಂತೆ ಮಹಿಳಾ ಪ್ರಧಾನ ಕಥೆಯೊಂದರ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎನ್ನಲಾಗಿದೆ. ಸುದ್ದಿಗಳು ನಿಜವೇ ಆದರೆ ಹೊಸದೊಂದು ಬಯೋಪಿಕ್ ಗಾಗಿ ಅನುಷ್ಕಾ ಬಣ್ಣ ಹಚ್ಚಲಿದ್ದಾರೆ. ಆದರೆ ಇದೇ ವೇಳೆ ಇದೇ ಸಿನಿಮಾಕ್ಕಾಗಿ ಜನಪ್ರಿಯ ನಟಿ ಸಮಂತಾ ಹೆಸರು ಸಹಾ ಹರಿದಾಡಿದೆ. ಈ ಇಬ್ಬರಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ತೀವ್ರವಾದ ಕುತೂಹಲವನ್ನು ಕೆರಳಿಸಿದೆ.

ಆದರೆ ಈಗ ಬಹುತೇಕ ಈ ಸಿನಿಮಾದಲ್ಲಿ ಅನುಷ್ಕಾ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹರಡಿದೆ. ಏಕೆಂದರೆ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಹೊಸ ಬಯೋಪಿಕ್ ನಲ್ಲಿ ಅನುಷ್ಕಾ ನಟಿಸುವುದು ಪಕ್ಕಾ ಎನ್ನಲಾಗುತ್ತಿದೆ. ಈ ಸಿನಿಮಾ ಮೂಲಕ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಮತ್ತೊಮ್ಮೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಇಲ್ಲಿ ಮತ್ತೊಂದು ವಿಶೇಷ ಹೇಳಲೇಬೇಕಾಗಿದೆ.

ಈ ಬಯೋಪಿಕ್ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ್ತಿಯಾಗಿದ್ದ ಗಾಯಕಿ ಬೆಂಗಳೂರು ನಾಗರತ್ಮಮ್ಮ ಅವರ ಜೀವನವನ್ನು ಆಧರಿಸಿದೆ ಎನ್ನಲಾಗಿದೆ. ನಾಗ ರತ್ನಮ್ಮ ಶಾಸ್ತ್ರೀಯ ಸಂಗೀತ ಗಾಯಕಿಯಾಗಿದ್ದರಿಂದ ಈ ಸಿನಿಮಾ ಸಂಗೀತಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತದೆ. ಪ್ರಸ್ತುತ ಸಿನಿಮಾ ಸ್ಕ್ರಿಪ್ಟ್ ಅನುಷ್ಕಾ ಅವರ ಕೈ ಸೇರಿದ್ದು, ಇನ್ನು ಅನುಷ್ಕಾ ಈ ಸಿನಿಮಾ ಒಪ್ಪುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published.