ಅನುಶ್ರೀ, ವೈಷ್ಣವಿ, ದೀಪಿಕಾ ನಂತರ ಈಗ ಮೇಘಾ ಶೆಟ್ಟಿ: ಜೊತೆ ಜೊತೆಯಲಿ ಖ್ಯಾತಿಯ ನಟಿಯ ಹೊಸ ಮೈಲಿಗಲ್ಲು

Entertainment Featured-Articles News

ಕನ್ನಡ ಕಿರುತೆರೆ ಹಿಂದಿನಂತಿಲ್ಲ. ಇಂದು ಕಿರುತೆರೆಯು ಕೂಡಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಕಿರುತೆರೆಯಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಪ್ರೇಕ್ಷಕರ ಸಂಖ್ಯೆ ಬಹಳ ದೊಡ್ಡದಾಗಿದೆ. ಕಿರುತೆರೆಯಲ್ಲಿ ಪ್ರಸಾರವಾಗುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಪ್ರತ್ಯೇಕವಾದ ವೀಕ್ಷಕರ ಬಳಗವೇ ಇದೆ. ಆದ್ದರಿಂದಲೇ ದಿನಕಳೆದಂತೆ ಕಿರುತೆರೆಯ ಪ್ರಭಾವ ಹೆಚ್ಚಾಗುತ್ತಿದೆ. ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಪ್ರವೇಶ ನೀಡಿದ ಬಹಳಷ್ಟು ಜನ ಕಲಾವಿದರು ಸಿನಿಮಾ ತಾರೆಯರಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಹೀಗೆ ಕಿರುತೆರೆಯ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಮೇಘಾ ಶೆಟ್ಟಿ. ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ನಾಯಕಿ ಅನು ಸಿರಿಮನೆ ಪಾತ್ರಧಾರಿ ಎಂದೊಡನೆ ತಟ್ಟನೆ ಜನರಿಗೆ ಈ ನಟಿಯ ನೆನಪಾಗುತ್ತದೆ. ಏಕೆಂದರೆ ಈ ಧಾರಾವಾಹಿಯ ತನ್ನ ಪಾತ್ರದ ಮೂಲಕ ಮೇಘಾ ಶೆಟ್ಟಿಯವರು ಇಂದು ನಾಡಿನ ಮನೆ ಮನೆ ಮಾತಾಗಿದ್ದಾರೆ. ಜನರ ಅಪಾರವಾದ ಪ್ರೀತಿಯನ್ನು ಗಳಿಸಿದ್ದಾರೆ. ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಜೊತೆ ಜೊತೆಯಲಿ ಮೂಲಕ ನಟನಾ ತನ್ನ ವೃತ್ತಿಜೀವನವನ್ನು ಆರಂಭಿಸಿದ ಮೇಘಾ ಶೆಟ್ಟಿಯವರು ತಮ್ಮ ಅಪಾರ ಜನಪ್ರಿಯತೆಯ ಮೂಲಕ ಸ್ಯಾಂಡಲ್ವುಡ್ ನಲ್ಲಿ ಸಹ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಮೇಘಾ ಶೆಟ್ಟಿಯವರು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಬೇಕಿದೆ. ಇದಲ್ಲದೇ ಹೊಸ ಸಿನಿಮಾಗಳಲ್ಲಿಯೂ ತೊಡಗಿಕೊಂಡಿರುವ ಮೇಘ ಶೆಟ್ಟಿಯವರು ಒಂದು ಸೀರಿಯಲ್ ನ ನಿರ್ಮಾಪಕಿ ಕೂಡಾ ಆಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ಮೇಘಾ ಶೆಟ್ಟಿ ಅವರು ಅಲ್ಲಿಯೂ ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಅಂದವಾದ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ. ಮೇಘ ಶೆಟ್ಟಿ ಅವರು ಇದೀಗ ಕನ್ನಡದ ಕಿರುತೆರೆಯ ಪ್ರಖ್ಯಾತ ನಟಿಯರಾದ ವೈಷ್ಣವಿ ಗೌಡ ಮತ್ತು ದೀಪಿಕಾ ದಾಸ್ ಅವರ ನಂತರ ಒಂದು ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡ ಖ್ಯಾತಿಗೆ ಪಾತ್ರರಾಗಿದ್ದಾರೆ.

ಒಂದು ಮಿಲಿಯನ್ ಹಿಂಬಾಲಕರನ್ನು ಪಡೆದ ಸಂಭ್ರಮವನ್ನು ನಟಿ ಮೇಘಾ ಶೆಟ್ಟಿ ಬಹಳ ಖುಷಿಯಿಂದ ಆಚರಿಸಿದ್ದಾರೆ. ಈ ಮೂಲಕ ಕನ್ನಡ ಕಿರುತೆರೆ ಸೆಲೆಬ್ರಿಟಿ ಗಳಲ್ಲಿ ಒನ್ ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡ ನಾಲ್ಕನೇ ನಟಿಯಾಗಿ ಹೊರಹೊಮ್ಮಿದ್ದಾರೆ. ಈ ಮೊದಲು ನಿರೂಪಕಿ ಅನುಶ್ರೀ, ವೈಷ್ಣವಿ ಗೌಡ ಮತ್ತು ದೀಪಿಕಾ ದಾಸ್ ಒಂದು ಸಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡಿದ್ದರು. ಈಗ ಅವರ ನಂತರ ಮೇಘ ಶೆಟ್ಟಿ ಇಂತಹದೊಂದು ಮೈಲಿಗಲ್ಲನ್ನು ತಲುಪಿದ್ದಾರೆ.

Leave a Reply

Your email address will not be published.