ಸ್ಯಾಂಡಲ್ವುಡ್ ನ ಡ್ರ ಗ್ಸ್ ಪ್ರಕರಣ ಕುರಿತಾಗಿ ಸಿಸಿಬಿ ತಯಾರಿಸಿರುವ ಚಾರ್ಜ್ ಶೀಟ್ ನ ಮಾಹಿತಿಗಳು ಇಂದು ಮಾದ್ಯಮಗಳ ಮೂಲಕ ಎಲ್ಲೆಡೆ ವೈರಲ್ ಆಗಿ, ದೊಡ್ಡ ಸುದ್ದಿಯಾಗಿದೆ. ಈ ಚಾರ್ಜ್ ಶೀಟ್ ನಲ್ಲಿ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ಅವರ ಹೆಸರು ಸೇರ್ಪಡೆಯಾಗಿರುವ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ಈ ಸುದ್ದಿಯ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿದ್ದು,ಸಾಕಷ್ಟು ಸ್ಪೋ ಟ ಕ ಎನಿಸುವ ಮಾಹಿತಿಗಳನ್ನು ಹೊರ ಹಾಕುವ ಮೂಲಕ ಈ ಪ್ರಕರಣದ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಶಾಂತ್ ಸಂಬರ್ಗಿ ಅವರು ಅನುಶ್ರೀ ಮುಖವಾಡ ಕಳಚಿದೆ, ನಾನು 2020 ರಲ್ಲೇ ಶುಗರ್ ಡ್ಯಾಡಿ ಎಂದು ಹೇಳಿದ್ದೆ. ಆಗ ಮಾಜಿ ಸಿಎಂ ಒಬ್ಬರು ಎಲ್ಲಾ ಊಹಾ ಪೋಹಗಳಿಗೆ ನಾಂದಿ ಯನ್ನು ಹಾಡಿದ್ದರು ಎಂದಿದ್ದಾರೆ. ಅಲ್ಲದೇ ಅವರು ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಒಂದನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ. ಈ ಪ್ರಕರಣದಲ್ಲಿ ಅನುಶ್ರೀ ಯನ್ನು ಬಿಟ್ಟು ಕಳುಹಿಸಲಾಗಿತ್ತು. ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ಎತ್ತಂಗಡಿ ಮಾಡಲಾಗಿದೆ.
ಈ ಪ್ರಕರಣದ ತನಿಖೆಯಲ್ಲಿ ಮಂಗಳೂರು ಪೋಲಿಸರು ದು ರ್ಬಲರಾಗಿದ್ದಾರೆ. ಇಡೀ ಪ್ರಕರಣದ ಮರು ತನಿಖೆಯಾಗಬೇಕು ಎಂದು ಪ್ರಶಾಂತ್ ಸಂಬರ್ಗಿ ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ ಕಿಶೋರ್ ಶೆಟ್ಟಿ ಮತ್ತು ತರುಣ್ ಬಂ ಧ ನವಾದಾಗಲೇ ಅವರು ಅನುಶ್ರೀ ಡ್ರ ಗ್ಸ್ ಸೇವನೆ ಮತ್ತು ಪೆ ಡ್ಲಿಂ ಗ್ ಕುರಿತಾಗಿ ತಮ್ಮ ಬಾಯಿ ಬಿಟ್ಟಿದ್ದರು. ಆದರೆ ಅನುಶ್ರೀ ನ ಬಚಾವ್ ಮಾಡಲು ತರುಣ್ ನನ್ನು ಹೊರಗೆ ಬಿಡಲಾಗಿದೆ.
ಅನುಶ್ರೀ ಮೊದಲು ಪೋಲಿಸ್ ವಿಚಾರಣೆಗೆ ಹಾಜರಾಗಲು ನಾಟಕ ಆಡಿದ್ರು, ಅನಂತರ ಫೇಸ್ ಬುಕ್ ಲೈವ್ ಗೆ ಬಂದು ನಾಟಕ ಮಾಡಿದ್ರು,ನನ್ನನ್ನು ಸ್ತ್ರೀ ವಿ ರೋ ಧಿ ಎನ್ನುವ ಹಾಗೆ ಬಿಂಬಿಸಿದ್ದಾರೆ. ಅವರು ಮಂಗಳೂರಿನಲ್ಲಿ 12 ಕೋಟಿ , ಬೆಂಗಳೂರಿನಲ್ಲಿ ನಾಲ್ಕು ಕೋಟಿ ಮನೆ ನಿರ್ಮಾಣ ಮಾಡಿದ್ದಾರೆ. ಇದಕ್ಕೆಲ್ಲಾ ಟಿವಿ ಶೋ ದಿಂದ ಹಣ ಬಂದಿದ್ದರೆ ಒಳ್ಳೆಯದು. ಆದರೆ ಅನುಶ್ರೀ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇಂದು ಮಾದ್ಯಮಗಳು ಬಿಡುಗಡೆ ಮಾಡಿರುವ ಚಾರ್ಜ ಶೀಟ್ ನ ಮಾಹಿತಿ ಗಳಲ್ಲಿ ಆ ರೋ ಪಿ ಕಿಶೋರ್ ಅನುಶ್ರೀ ಡ್ರ ಗ್ಸ್ ಸೇವನೆ ಮಾತ್ರವೇ ಅಲ್ಲದೇ ಅವುಗಳನ್ನು ಸಾಗಣೆ ಮಾಡುತ್ತಿದ್ದರು, ಅವರಿಗೆ ಪೆ ಡ್ಲ ರ್ ಗಳ ಪರಿಚಯವಿತ್ತು, ಎಲ್ಲಿ ಅದು ಸಿಗುತ್ತಿತ್ತು ಎನ್ನುವ ಮಾಹಿತಿ ಇತ್ತು, ಡಾನ್ಸ್ ಪ್ರಾಕ್ಟೀಸ್ ಗೆ ಬರುವಾಗ ಅವರು ಡ್ರ ಗ್ಸ್ ತರುತ್ತಿದ್ದರು ಎಂದು ಹೇಳಿಕೆ ನೀಡಿದ್ದಾನೆಂದು ಉಲ್ಲೇಖಿಸಲಾಗಿದೆ.