ಅನುಮಾನಗಳಿಗೆ ತೆರೆ ಎಳೆದು ಕೊನೆಗೂ ತನ್ನ ಹೆಸರಿನ ಬದಲಾವಣೆಗೆ ಮುಂದಾದ ಆಲಿಯಾ ಭಟ್: ಇನ್ಮುಂದೆ ಅವರು ಆಲಿಯಾ ಭಟ್ ಅಲ್ಲ!!

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚಿಗೆ ಬಹಳ ಸುದ್ದಿಯಾಗುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ನೆಪೋಟಿಸಂ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ನಾನು ಇಷ್ಟು ಇಲ್ಲ ಅನ್ನೋದಾದ್ರೆ ನನ್ನ ಸಿನಿಮಾ ನೋಡಬೇಡಿ ಎಂದು ಜನರಿಗೆ ಸವಾಲು ಹಾಕಿದ್ದರು. ಇದನ್ನು ನೋಡಿ ನೆಟ್ಟಿಗರು ಸಹಾ ಹಾಗಾದರೆ ಆಲಿಯಾ ಭಟ್ ಅಭಿನಯದ ಮುಂದಿನ ಸಿನಿಮಾ ಬ್ರಹ್ಮಾಸ್ತ್ರ ವನ್ನು ಬಹಿಷ್ಕರಿಸುವ ಮೂಲಕ ನಟಿಯ ಸವಾಲನ್ನು ಸ್ವೀಕರಿಸೋಣ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಕರೆ ನೀಡಿದ್ದರು. ಈಗ ಆ ವಿಷಯದ ಬೆನ್ನಲ್ಲೇ ಮತ್ತೊಂದು ಹೊಸ ವಿಚಾರವಾಗಿ ಆಲಿಯಾ ಭಟ್ ಮತ್ತೊಮ್ಮೆ ಸುದ್ದಿಯಾಗಿ ಗಮನ ಸೆಳೆದಿದ್ದು, ನಟಿಯು ತಮ್ಮ ಹೆಸರಿನ ಬದಲಾವಣೆ ವಿಚಾರವನ್ನು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮದುವೆಯ ನಂತರ ಹೆಣ್ಣಿನ ಸರ್ ನೇಮ್ ಬದಲಾಗುತ್ತದೆ. ಆದರೆ ಕೆಲವು ನಟಿಯರು ಮದುವೆಯ ನಂತರ ತಮ್ಮ ಅಪ್ಪನ ಮನೆಯ ಸರ್ ನೇಮ್ ಅನ್ನು ತೆಗೆದಿಲ್ಲ, ಬದಲಾಗಿ ಅದರ ಜೊತೆಗೆ ಗಂಡನ ಮನೆಯ ಸರ್ ನೇಮ್ ಅನ್ನು ಸಹಾ ಸೇರಿಸಿಕೊಂಡಿದ್ದಾರೆ. ಉದಾಹರಣೆಗೆ ಐಶ್ವರ್ಯ ರೈ ಬಚ್ಚನ್, ಕರೀನಾ ಕಪೂರ್ ಖಾನ್ ಹೀಗೆ ಕುಟುಂಬದ ಹೆಸರಿನ ಜೊತೆಗೆ ಗಂಡನ ಮನೆಯ ಹೆಸರನ್ನು ಸಹಾ ಸೇರಿಸಿಕೊಂಡಿದ್ದಾರೆ. ಆದರೆ ನಟಿ ಆಲಿಯಾ ಭಟ್ ಮದುವೆಯ ನಂತರವೂ ಭಟ್ ಆಗಿಯೇ ಇನ್ನೂ ಉಳಿದಿದ್ದಾರೆ. ಅವರ ಹೆಸರನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ನಟಿ ಆಲಿಯಾ ಭಟ್ ಮದುವೆಯಾದ ಎರಡೂವರೆ ತಿಂಗಳಿಗೆ ತಾನು ಗರ್ಭಿಣಿ ಎನ್ನುವ ವಿಚಾರವನ್ನು ಶೇರ್ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದ್ದು ಮಾತ್ರವೇ ಅಲ್ಲದೇ ಈ ವಿಚಾರವಾಗಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಸಹಾ ಮಾಡಲಾಗಿತ್ತು. ಆದರೆ ಅದೇ ವೇಳೆ ಅನೇಕರು ನಟಿಯು ಮದುವೆಯಾಗಿ ದಿನಗಳೇ ಉರುಳುತ್ತಿದ್ದರೂ ಅವರ ಹೆಸರಿನಲ್ಲಿ ಗಂಡನ ಸರ್ ನೇಮ್ ಸೇರದೇ ಇರುವುದನ್ನು ನೋಡಿ ಅನೇಕರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಇಂತಹ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ ನಟಿ ನಟಿ ಆಲಿಯಾ ಭಟ್.

ಹೌದು, ತನ್ನ ಹೆಸರಿನ ವಿಚಾರವಾಗಿ ಮಾತನಾಡಿರುವ ನಟಿ ಆಲಿಯಾ ಭಟ್ ಇದೀಗ, ಅತಿ ಶೀಘ್ರದಲ್ಲೇ ತಾನು ಆಲಿಯಾ ಭಟ್ ನಿಂದ ಆಲಿಯಾ ಕಪೂರ್ ಆಗುವುದಾಗಿ ಹೇಳಿದ್ದಾರೆ. ಪತಿಯ ಹೆಸರಿನ ಜೊತೆಯೇ ನನ್ನ ಹೆಸರು ಇರಬೇಕು. ಆದರೆ‌ ಸಿನಿಮಾ‌ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಕಾರಣದಿಂದಾಗಿ ಹೆಸರಿನ ಬದಲಾವಣೆಯ ಕೆಲಸವನ್ನು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಶೀಘ್ರದಲ್ಲೇ ಆಲಿಯಾ ಭಟ್ ಎನ್ನುವುದು ದಾಖಲೆಗಳಲ್ಲಿ ಆಲಿಯಾ ಕಪೂರ್ ಆಗಲಿದೆ ಎಂದು ಸ್ಪಷ್ಟನೆ ಯನ್ನು ನೀಡಿರುವ ನಟಿ, ಶೀಘ್ರದಲ್ಲೇ ತನ್ನ ಸರ್ ನೇಮ್ ಕಪೂರ್ ಅಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.‌

Leave a Comment