ಅನಕ್ಷರಸ್ಥ ಗಂಡ ನನಗೆ ಬೇಕಿಲ್ಲ, ಮಂಟಪದಲ್ಲೇ ಮದುವೆ ನಿಲ್ಲಿಸಿದ ವಧು: ವೈರಲ್ ವೀಡಿಯೋ!!

Entertainment Featured-Articles News Viral Video

ಮದುವೆ ಅಥವಾ ವಿವಾಹ ಬಂಧನ ಎನ್ನುವುದಕ್ಕೆ ಹಿಂದೂ ಧರ್ಮದಲ್ಲಿ ಬಹಳ ವಿಶೇಷವಾದ ಸ್ಥಾನ ಮಾನ ಹಾಗೂ ಗೌರವವಿದೆ. ಗಂಡು, ಹೆಣ್ಣು ಈ ಪವಿತ್ರ ಬಂಧನದ ಮೂಲಕ ಜೊತೆಯಾದ ಮೂಲಕ ಕಷ್ಟ, ಸುಖಗಳಲ್ಲಿ ಜೊತೆಯಾಗಿ ಬದುಕಿನ ಬಂಡಿಯನ್ನು ನಡೆಸಿಕೊಂಡು ಹೋಗುತ್ತಾರೆ. ತಮ್ಮ ಸಂಸಾರ, ಕುಟುಂಬ ಎಂದು ಹೊಸ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಮಂಟಪದವರೆಗೂ ಬಂದ ಮದುವೆಗಳು ಸಹಾ ನಿಂತು ಹೋಗಿರುವ ಘಟನೆಗಳನ್ನು ನಡೆದಿವೆ, ನಡೆಯುತ್ತಲಿವೆ ಎನ್ನುವುದು ಸಹಾ ವಾಸ್ತವವಾದ ವಿಷಯವಾಗಿದೆ.

ಹೌದು, ಕೆಲವು ಸಂದರ್ಭಗಳಲ್ಲಿ ಮದುವೆಯ ವೇಳೆಗೆ ವರನು ನಾಪತ್ತೆಯಾಗುವುದೋ, ಇನ್ನೂ ಕೆಲವೊಮ್ಮೆ ವಧು ನಾಪತ್ತೆಯಾಗುವುದೋ ಅಥವಾ ಮದುವೆ ಸಂದರ್ಭದಲ್ಲಿ ನಡೆಯುವ ಸಣ್ಣ ಸಣ್ಣ ವಿಚಾರಗಳ ಜಗಳಗಳು ದೊಡ್ಡದಾಗಿ ಮದುವೆಗಳು ನಿಂತು ಹೋಗಿರುವುದು ನಡೆದಿದೆ. ಆದರೆ ಈಗ ನಡೆದಿರುವ ಹೊಸದೊಂದು ಘಟನೆಯಲ್ಲಿ ಮಂಟಪದಲ್ಲಿ ಮದುವೆ ನಿಂತಿದೆ. ಇಲ್ಲಿ ವಧು ಅಥವಾ ವರ ನಾಪತ್ತೆಯಾಗಿಲ್ಲ. ಬದಲಾಗಿ ವಧುವೇ ತನಗೆ ಮದುವೆ ಬೇಡ ಎಂದಿದ್ದಾಳೆ.

ಈ ಘಟನೆಯಲ್ಲಿ ಮದುವೆ ಮಂಟಪದಲ್ಲಿ ವಧು ಹಾಗೂ ವರ ಪರಸ್ಪರ ಹೂ ಮಾಲೆಯನ್ನು ಬದಲಿಸಿಕೊಳ್ಳುವ ಸಂದರ್ಭದಲ್ಲಿ, ವಧು ಏಕಾಏಕೀ ತನಗೆ ಈ ಮದುವೆ ಬೇಡ ಎಂದು ಹೇಳಿದ್ದಾಳೆ. ಆಕೆಯ ಮಾತು ಕೇಳಿ ಸಹಜವಾಗಿಯೇ ಅಲ್ಲಿ ನೆರೆದಿದ್ದವರು ಶಾ ಕ್ ಆಗಿದ್ದಾರೆ. ಇನ್ನು ವಧು ಈ ರೀತಿ ಮದುವೆ ಬೇಡ ಎನ್ನಲು ಕಾರಣವೇನು ಎಂದು ಕೇಳಿದಾಗ ಆಕೆ ಅದಕ್ಕೆ ಕಾರಣವನ್ನು ಸಹಾ ನೀಡಿದ್ದು, ಆಕೆ ನೀಡಿದ ಕಾರಣ ಕೇಳಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ವಧು ತಾನು ಬಿಇಡಿ ಮಾಡುತ್ತಿದ್ದೇನೆ, ಆದರೆ ವರನು ಓದಿಲ್ಲ, ಅವನು ಅನಕ್ಷರಸ್ಥ ನಾನು ಆತನನ್ನು ಮದುವೆಯಾಗೋದಿಲ್ಲ ಎಂದಿದ್ದಾಳೆ. ಆಗ ಕೆಲವರು ಮೊದಲೇ ಇದನ್ನು ಹೇಳಬಹುದಿತ್ತಲ್ಲವೇ ಎಂದಿದ್ದಕ್ಕೆ, ತನಗೆ ಇಷ್ಟವಿಲ್ಲ, ಆದರೆ ತನ್ನ ತಂದೆ ಹಣ, ಆಸ್ತಿ ಎಂದು ಹೇಳಿ ಒತ್ತಾಯ ಮಾಡಿ ಅವನೊಂದಿಗೆ ಮದುವೆ ಮಾಡಿಸುತ್ತಿದ್ದಾರೆ. ಆದರೆ ನಾನು ಮದುವೆ ಆಗೋದಿಲ್ಲ. ನನಗೆ ಓದಿರುವ ಹುಡುಗ ಬೇಕು, ಅನಕ್ಷರಸ್ಥನ ಜೊತೆ ಜೀವನ ನಡೆಸೋದು ಹೇಗೆ ಎಂದಿದ್ದಾಳೆ.

ಮದುವೆಯಲ್ಲಿ ನೆರೆದಿದ್ದು ಕೆಲವರು ವಧುವನ್ನು ಪ್ರಶ್ನೆಗಳು ಕೇಳಿದ್ದು, ಆಕೆ ಎಲ್ಲರಿಗೂ ನೀಡಿರುವ ಉತ್ತರ ಒಂದೇ, ವರನು ಅನಕ್ಷರಸ್ಥ , ತಾನು ಆತನೊಂದಿಗೆ ಮದುವೆ ಆಗೋದಿಲ್ಲ ಎಂದು. ವಧು ವರನಿಗೆ ಹಾಕಬೇಕಿದ್ದ ಹಾರವನ್ನು ಕೂಡಾ ನೆಲದ ಮೇಲೆ ಎಸೆದಿರುವುದನ್ನು ವೀಡಿಯೋದಲ್ಲಿ ನಾವು ನೋಡಬಹುದಾಗಿದೆ. ಈ ವೀಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published.