ಅಧಿಕಾರಿಗಳ ಬಳಿ ಮಗನ ಆರೋಗ್ಯ ವಿಚಾರಿಸಿ, ಇಡೀ ರಾತ್ರಿ ನಿದ್ದೆಗೆಟ್ಟ ಶಾರೂಖ್ ದಂಪತಿ

Written by Soma Shekar

Published on:

---Join Our Channel---

ಡ್ರ ಗ್ಸ್ ಪ್ರಕರಣದಲ್ಲಿ ಜೈಲು ವಾಸಿಯಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ‌ ಆರ್ಯನ್ ಖಾನ್ ಗೆ ಇನ್ನೂ ಸಹಾ ಜಾಮೀನು ದೊರೆತಿಲ್ಲ. ಜೈಲು ಸೇರಿರುವ ಮಗನನ್ನು ಹೊರಗೆ ತರುವ ಯಾವ ಪ್ರಯತ್ನಗಳು ಸಹಾ ಇನ್ನೂ ಫಲಿಸದ ಕಾರಣ ಶಾರೂಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಇಬ್ಬರೂ ಸಹಾ ಮಗನ ವಿಚಾರದಲ್ಲಿ ತಳಮಳ ಪಡುವಂತಾಗಿದೆ‌. ಮಗ ಜೈಲಿನಲ್ಲಿ ಹೇಗೆ ದಿನಗಳನ್ನು ಕಳೆಯುತ್ತಿದ್ದಾನೆ ಎನ್ನುವ ಚಿಂತೆ ಸಹಜವಾಗಿಯೇ ತಂದೆ ತಾಯಿಯನ್ನು ಕಾಡುತ್ತಿದ್ದು, ಮಗನ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಮಗನ ಬಗ್ಗೆ ಸಿಕ್ಕಾಪಟ್ಟೆ ಆಲೋಚನೆ ಮಾಡುತ್ತಿದ್ದಾರೆ.‌

ಇದೇ ಹಿನ್ನೆಲೆಯಲ್ಲಿ ಶಾರೂಖ್ ಖಾನ್ ಮತ್ತು ಗೌರಿ ಖಾನ್ ಇಬ್ಬರೂ ಸಹಾ ಮಗನ ಕುರಿತು ಆಲೋಚನೆ ಮಾಡುತ್ತಾ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಸರಿಯಾದ ಊಟ ತಿಂಡಿಗಳನ್ನು ಸಹಾ ಮಾಡದೇ ದಂಪತಿ, ಆಗಾಗ ಎನ್ ಸಿ ಬಿ ಅಧಿಕಾರಿಗಳಿಗೆ ಕರೆ ಮಾಡಿ ಮಗನ ಯೋಗ ಕ್ಷೇಮವನ್ನು ಅವರು ವಿಚಾರಿಸುತ್ತಲೇ ಇರುತ್ತಾರೆ ಎನ್ನಲಾಗಿದೆ. ಶಾರೂಖ್ ತಮ್ಮ ಎಲ್ಲಾ ಶೆಡ್ಯೂಲ್ ಗಳನ್ನು ಕ್ಯಾನ್ಸಲ್ ಮಾಡಿಕೊಂಡು ಮಗನ ಕುರಿತು ಆಲೋಚನೆ ಮಾಡುತ್ತಾ ಆರೋಗ್ಯವನ್ನು ಕಡೆಗಣಿಸಿದ್ದಾರೆನ್ನಲಾಗಿದೆ.

ಶಾರೂಖ್ ಹಾಗೂ ಗೌರಿ ಖಾನ್ ಇಬ್ಬರೂ ಮಗನ ಆರೋಗ್ಯದ ಬಗ್ಗೆ ಎನ್ ಸಿ ಬಿ ಅಧಿಕಾರಿಗಳ ಬಳಿ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟು ಕುಳಿತಿದ್ದರು ಎನ್ನಲಾಗಿದೆ. ಡ್ರ ಗ್ಸ್ ಪ್ರಕರಣದಲ್ಲಿ ಮಗನನ್ನು ಎನ್ ಸಿ ಬಿ ವಶಕ್ಕೆ ಪಡೆದಾಗ ಈ ವಿಚಾರ ಇಷ್ಟೊಂದು ದೊಡ್ಡದಾಗುತ್ತದೆ ಎಂದು ಅವರು ಊಹೆ ಸಹಾ ಮಾಡಿರಲಿಲ್ಲ ಎನ್ನಲಾಗಿದೆ. ಹೇಗಾದರೂ ಮಾಡಿ ಮಗನನ್ನು ಹೊರಗೆ ಕರೆ ತರಬೇಕು ಎನ್ನುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ.

ನಿನ್ನೆ ಆರ್ಯನ್ ಮತ್ತು ಇತರರ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಮುಂಬೈ ಸೆಷನ್ ಕೋರ್ಟ್ ತಿಳಿಸಿದೆ. ಬುಧವಾರ ಮಧ್ಯಾಹ್ನದ ನಂತರ ಸುದೀರ್ಘವಾದ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ನಂತರ ಸೆಷನ್ಸ್ ಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿದೆ.‌ ನಾಳೆ ಜಾಮೀನು ಸಿಗುತ್ತದೆಯೋ ಇಲ್ಲವೋ ಕಾದು ನೋಡಬೇಕಾಗಿದೆ.

Leave a Comment