ಅದ್ಭುತ ಗಾಯಕ ಸೂರ್ಯಕಾಂತ್ ಗೆ ವಾಹಿನಿ ಕಡೆಯಿಂದ ವಾರವೊಂದಕ್ಕೆ ಸಿಗುವ ಸಂಭಾವನೆ ಎಷ್ಟು??

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಹಲವು ರಿಯಾಲಿಟ ಶೋ ಗಳು ಈಗಾಗಲೇ ಸಾಕಷ್ಟು ಸುದ್ದಿಯನ್ನು ಮಾಡಿವೆ ಹಾಗೂ ಮಾಡುತ್ತಿವೆ. ಅಲ್ಲದೇ ಕೆಲವು ವಿಶೇಷವಾದ ಶೋ ಗಳ ಮೂಲಕ ನಾಡಿನ ಮೂಲೆ ಮೂಲೆಯಿಂದ ಪ್ರತಿಭಾವಂತರು ವಾಹಿನಿಗಳ ಮೂಲಕ ಜನರ ಮುಂದೆ ಬಂದು ತಮ್ಮ ಪ್ರತಿಭೆಯನ್ನು ಮೆರೆಯಲು ಸಾಧ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಹಾಡುಗಾರಿಕೆಯ ರಿಯಾಲಿಟಿ ಶೋ ಗಳ ಮೂಲಕ ಗ್ರಾಮೀಣ ಪ್ರತಿಭೆಗಳು, ಸಿರಿ ಕಂಠದ ಗಾಯಕರು ತಮ್ಮ ಇಂಪಾದ ಹಾಡುಗಳ ಮೂಲಕ ಪ್ರೇಕ್ಷಕರ ಹಾಗೂ ಗಾಯನ ಪ್ರಿಯರ ಮನಸ್ಸುಗಳನ್ನು ಸೂರೆಗೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಬರೋಬ್ಬರಿ ಆರು ವರ್ಷಗಳ ನಂತರ ಎದೆ ತುಂಬಿ ಹಾಡುವೆನು ಸಿಂಗಿಂಗ್ ಶೋ ಮತ್ತೆ ಕಿರುತೆರೆಗೆ ಬಂದಿದೆ. ಅಲ್ಲದೇ ಈ ಶೋ ಮೂಲಕ ಈಗ ಮನೆ ಮನೆ ಮಾತಾಗಿದ್ದಾರೆ ಸೂರ್ಯಕಾಂತ್. ಇವರು ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿ ಲಿಂಗನಹಳ್ಳಿಯವರಾಗಿದ್ದಾರೆ.

ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಆಡಿಷನ್ ಸುತ್ತಿನಲ್ಲೇ ಸೂರ್ಯಕಾಂತ್ ಅವರ ವಿಶೇಷ ಸಾಮರ್ಥ್ಯವನ್ನು ನೋಡಿ ಕಾರ್ಯಕ್ರಮದ ಜಡ್ಜ್ ಗಳು ಮಾತ್ರವೇ ಅಲ್ಲದೇ ಪ್ರೇಕ್ಷಕರು ಕೂಡಾ ಮಾರು ಹೋಗಿದ್ದು ನಿಜ. ಮಾತನಾಡಲು ಅವರ ತೊದಲಿನ ಸಮಸ್ಯೆ ತೊಡಕಾಗಿತ್ತು. ಆದರೆ ಸಂಗೀತ ಪ್ರಾರಂಭವಾದ ಮೇಲೆ ಸೂರ್ಯಕಾಂತ್ ಅವರ ಅದ್ಭುತ ಗಾನ ಪ್ರತಿಭೆಯು ಎಲ್ಲರ ಮುಂದೆ ಅನಾವರಣ ಆಯಿತು. ಮಾತನಾಡುವಾಗ ಅವರಿಗಿದ್ದ ಸಮಸ್ಯೆ ಅವರ ಗಾಯನದಲ್ಲಿ ಕಾಣಲಿಲ್ಲ. ಎಲ್ಲರೂ ಆ ವಿಶೇಷ ಪ್ರತಿಭೆ ನೋಡಿ ಮೂಕವಿಸ್ಮಿತರಾದರು. ಇಂತಹ ಅದ್ಭುತ ಗಾಯಕನ ಗಾಯನವನ್ನು ಈಗಾಗಲೇ ಲಕ್ಷ ಲಕ್ಷ ಜನರು ನೋಡಿ ಆನಂದಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸೂರ್ಯಕಾಂತ್ ಅವರ ಈ ಪ್ರತಿಭೆಯನ್ನು ಮೆಚ್ಚಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇಷ್ಟೆಲ್ಲಾ ಜನಪ್ರಿಯತೆ ಪಡೆದುಕೊಂಡಿರುವ ಸೂರ್ಯಕಾಂತ್ ಅವರಿಗೆ ಈ ಶೋ ನಲ್ಲಿ ಹಾಡುವುದಕ್ಕೆ ವಾರವೊಂದಕ್ಕೆ ಎಷ್ಟು ಸಂಭಾವನೆ ನೀಡಲಾಗುತ್ತದೆ ಎನ್ನುವ ಕುತೂಹಲದ ವಿಷಯದ ಬಗ್ಗೆ ತಿಳಿಯುವ ಆಸಕ್ತಿ ನಿಮ್ಮದಾದರೆ ಅದಕ್ಕೆ ಇಲ್ಲಿದೆ ಉತ್ತರ. ಸೂರ್ಯಕಾಂತ್ ಅವರಿಗೆ ವಾರವೊಂದಕ್ಕೆ 10 ರಿಂದು 15 ಸಾವಿರ ರೂಪಾಯಿಗಳ ಸಂಭಾವನೆಯನ್ನು ನೀಡಲಾಗುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಸಂಭಾವನೆ ಎಷ್ಟೇ ಆದರೂ ಸೂರ್ಯಕಾಂತ್ ಅವರ ಪ್ರತಿಭೆ ಮಾತ್ರ ಅದ್ಭುತ ಎನ್ನುವುದರಲ್ಲಿ ಖಂಡಿತ ಎರಡು ಮಾತಿಲ್ಲ ಎಂದು ನಾವು ಹೇಳಬಹುದಾಗಿದೆ.

Leave a Comment