ಅದ್ಭುತ ಅಂದ್ರೆ ಇದೇನಾ? ಈ ಟ್ರೆಡ್ ಮಿಲ್ ಗೆ ವಿದ್ಯುತ್ ಬೇಕಿಲ್ಲ: ನಮ್ಮ ಗ್ರಾಮೀಣ ಪ್ರತಿಭೆಗಳು ಯಾರಿಗಿಂತ ಕಮ್ಮಿ ಇಲ್ಲ

Entertainment Featured-Articles News Viral Video

ಜಿಮ್ ಗೆ ಪ್ರತಿ ನಿತ್ಯ ಚಾಚೂ ತಪ್ಪದೇ ಹೋಗುವವರಿಗೆ ಟ್ರೆಡ್ ಮಿಲ್ ನ ಬಗ್ಗೆ ಪ್ರತ್ಯೇಕವಾದ ಪರಿಚಯ ನೀಡುವ ಅಗತ್ಯ ಇಲ್ಲ‌. ಏಕೆಂದರೆ ಅದು ಅವರಿಗೆ ಅಷ್ಟೊಂದು ಚಿರಪರಿಚಿತವಾದ ವ್ಯಾಯಾಮದ ಒಂದು ಪರಿಕರವಾಗಿದೆ. ರನ್ನಿಂಗ್ ವರ್ಕೌಟ್ ಮಾಡುವುದಕ್ಕೆ ಬಳಸುವ ಬಹಳ ಪ್ರಮುಖವಾದ ವ್ಯಾಯಾಮ ಪರಿಕರವಾಗಿದೆ ಈ ಟ್ರೆಡ್ ಮಿಲ್. ಆದರೆ ಜಿಮ್ ಗೆ ಹೋಗಲು ಸಾಧ್ಯ ಇಲ್ಲದ ಅನೇಕರು ತಮ್ಮ ತಮ್ಮ ಮನೆಗಳಲ್ಲೇ ಟ್ರೆಡ್ ಮಿಲ್ ನ ವ್ಯವಸ್ಥೆ ಮಾಡಿಕೊಂಡು, ಅದರ ಮೇಲೆ ರನ್ನಿಂಗ್ ವರ್ಕೌಟ್ ಅನ್ನು ಮಾಡುವುದನ್ನು ಸಹಾ ನಾವು ಗಮನಿಸಿರುತ್ತೇವೆ.

ಸಾಮಾನ್ಯವಾಗಿ ಟ್ರೆಡ್ ಮಿಲ್ ನ ಬಳಕೆಗೆ ವಿದ್ಯುತ್ ಅವಶ್ಯಕತೆ ಇರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಯು ವಿದ್ಯುತ್ ಅವಶ್ಯಕತೆ ಇಲ್ಲದೇ, ವಿದ್ಯುತ್ ನ ಪರಿಕರಗಳನ್ನು ಬಳಸದೇ ಒಂದು ವಿಶಿಷ್ಟವಾದ ಟ್ರೆಡ್ ಮಿಲ್ ಅನ್ನು ಸಿದ್ಧಪಡಿಸುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ.‌ ವಿದ್ಯುತ್ ಟ್ರೆಡ್ ಮಿಲ್ ಅನ್ನು ಸಹಾ ನಾಚಿಸುವಂತೆ ಕೆಲಸ ಮಾಡುವ ಈ ಹೊಸ ಟ್ರೆಡ್ ಮಿಲ್ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು, ಎಲ್ಲರ ಗಮನವನ್ನು ತನ್ನ ಕಡೆಗೆ ಸೆಳೆಯುತ್ತಿದೆ.

ಟ್ರೆಡ್ ಮಿಲ್ ಆವಿಷ್ಕಾರದ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರಿಗೆ ಶಾ ಕ್ ನೀಡುತ್ತಿದೆ. ಒಬ್ಬ ಸಾಮಾನ್ಯ ಗ್ರಾಮೀಣ ಆದರೆ ಬಹು ಪ್ರತಿಭಾವಂತ ವ್ಯಕ್ತಿಯ ಆಲೋಚನೆಯಿಂದ ಹುಟ್ಟಿರುವ ಈ ಹೊಸ ವಿದ್ಯುತ್ ರಹಿತ ಟ್ರೆಡ್ ಮಿಲ್ ಜನರ ಕಣ್ಣಿಗೆ ಅದ್ಬುತ ಎನ್ನುವಂತೆ ಕಂಡಿದೆ. ವೀಡಿಯೋದಲ್ಲಿ ನೋಡಿದಾಗ, ಒಬ್ಬ ವ್ಯಕ್ತಿಯು ವುಡ್ ನ ಸಣ್ಣ ಸಣ್ಣ ತುಂಡುಗಳನ್ನು ಬಳಸಿಕೊಂಡು, ಹಲಗೆಗಳನ್ನು ಬಳಸಿಕೊಂಡು ಟ್ರೆಡ್ ಮಿಲ್ ತಯಾರಿಸುವುದನ್ನು ನಾವು ನೋಡಬಹುದಾಗಿದೆ.

ವಿದ್ಯುತ್ ಇಲ್ಲದೇ ಕಾರ್ಯ ನಿರ್ವಹಿಸುವ ಟ್ರೆಡ್ ಮಿಲ್ ಸಿದ್ಧಪಡಿಸಿರುವ ವ್ಯಕ್ತಿಗೆ ನೆಟ್ಟಿಗರು ಶಹಬ್ಬಾಶ್ ಅಂತಿದ್ದಾರೆ. ಈ ವ್ಯಕ್ತಿ ಟ್ರೆಡ್ ಮಿಲ್ ಅನ್ನು ಮಾಡಲು ಕೇವಲ ಹಲಗೆಗಳನ್ನು ಹಾಗೂ ಮರದ ತುಂಡುಗಳನ್ನು ಮಾತ್ರವೇ ಬಳಸಿರುವುದು ವಿಶೇಷವಾಗಿದೆ.‌ ಅವರು ವುಡ್ ಬಳಸಿ ಟ್ರೆಡ್ ಮಿಲ್ ಸಿದ್ಧಪಡಿಸುತ್ತಿರುವ ಕೌಶಲ್ಯದ ಪ್ರಕ್ರಿಯೆಯನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಒಟ್ಟಾರೆ ವಿದ್ಯುತ್ ಇಲ್ಲದೇ ನಡೆಸುವ ಟ್ರೆಡ್ ಮಿಲ್ ಸಿದ್ಧಪಡಿಸಿದ ಗ್ರಾಮೀಣ ಪ್ರತಿಭೆಗೆ ಮೆಚ್ಚುಗೆಗಳು ಹರಿದು ಬರುತ್ತಿವೆ. ಲಕ್ಷಕ್ಕಿಂತಲೂ ಅಧಿಕ ಮಂದಿ ವೀಡಿಯೋ ವೀಕ್ಷಣೆಯನ್ನು ಮಾಡಿದ್ದಾರೆ.

Leave a Reply

Your email address will not be published.