ಅದೊಂದು ಘಟನೆ ನಂತರ ಅದೃಷ್ಟ ಇವರ ಜೀವನದಲ್ಲಿ ಏನೆಲ್ಲಾ ಆಟ ಆಡಿದೆ ನೋಡಿ: ಕಂಗಾಲಾದ ಅಭಿಮಾನಿಗಳು

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದಲ್ಲಿ ಹಾಟ್ ಟಾಪಿಕ್ ಎಂದರೆ ಸಮಂತಾ. ಹೌದು ನಟಿ ಸಮಂತಾಗೆ ಕಳೆದ ಕೆಲವು ತಿಂಗಳುಗಳಿಂದಲೂ ಸೃಷ್ಟಿಯಾಗಿರುವ ಕ್ರೇಜ್ ಅವರ ಇಷ್ಟು ವರ್ಷದ ವೃತ್ತಿ ಜೀವನದಲ್ಲಿ ಹಿಂದೆಂದೂ ಕಾಣದಂತ ಕ್ರೇಜ್ ಆಗಿದೆ. ನಾಯಕಿಯಾಗಿ ದಕ್ಷಿಣದ ಹಲವು ಸ್ಟಾರ್ ಗಳ ಜೊತೆ ತೆರೆಯನ್ನು ಹಂಚಿಕೊಂಡು, ಸ್ಟಾರ್ ನಟಿಯಾಗಿ ಹೆಗ್ಗಳಿಕೆಯನ್ನು ಪಡೆದಿದ್ದ ಸಮಂತಾ ಈಗ ಕೆಲವು ತಿಂಗಳುಗಳಿಂದಲೂ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಸದ್ದು ಮಾಡುತ್ತಲೇ ಇದ್ದಾರೆ. ದಕ್ಷಿಣದ ಬೇರೆ ಯಾವ ನಟಿಯೂ ಪ್ರಸ್ತುತ ದಿನಗಳಲ್ಲಿ ಸಮಂತಾ ರಷ್ಟು ಸುದ್ದಿಯಾದ ಉದಾಹರಣೆ ಖಂಡಿತ ಇಲ್ಲ.

ನಟಿ ಸಮಂತಾ ಕಳೆದ ವರ್ಷ ಪತಿ ನಾಗಚೈತನ್ಯ ಜೊತೆ ವಿಚ್ಛೇದನ ಪಡೆದ ಮೇಲೆ ಅವರ ಜೀವನದ ದಿಕ್ಕೇ ಬದಲಾಗಿ ಹೋಗಿದೆ. ಕೆಲವರು ವಿಚ್ಛೇದನ ಸಮಂತಾ ಅದೃಷ್ಟವನ್ನೇ ಬದಲಾಯಿಸಿದೆ ಎಂದು ಹೇಳುತ್ತಿದ್ದಾರೆ. ಒಂದರ್ಥದಲ್ಲಿ ಅದು ನಿಜ ಕೂಡಾ ಹೌದು ಎನ್ನುವಂತೆ, ವಿಚ್ಚೇದನದ ನಂತರ ಸಮಂತಾ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಮಂತಾ ನಟನೆಯ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಪುಷ್ಪ ಸಿನಿಮಾದಲ್ಲಿನ ಐಟಂ ಹಾಡು ಸಂಚಲನ ಸೃಷ್ಟಿಸಿ, ಸಮಂತಾ ಕ್ರೇಜ್ ಅನ್ನು ದುಪ್ಪಟ್ಟು ಮಾಡಿದೆ.

ಇವೆಲ್ಲವುಗಳ ನಡುವೆಯೇ ಸಮಂತಾ ಬಾಲಿವುಡ್ ನಲ್ಲಿ ಸಹಾ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿವೆ‌‌. ಆದರೆ ಅಧಿಕೃತವಾಗಿ ಯಾವುದೇ ಸಿನಿಮಾ ಘೋಷಣೆ ಆಗಿಲ್ಲ. ಅಲ್ಲದೇ ಹಿಂದಿ ಕಿರುತೆರೆಯ ಬಹಳ ಜನಪ್ರಿಯ ಶೋ ಕಾಫಿ ವಿತ್ ಕರಣ್ ನಲ್ಲಿ ಭಾಗಿಯಾಗಿದ್ದ ಸಂಮತಾ ತಮ್ಮ ಬಿಂದಾಸ್ ಹಾಗೂ ಬೋಲ್ಡ್ ಮಾತುಗಳಿಂದ ಇನ್ನಷ್ಟು ಸುದ್ದಿಯಾಗಿದ್ದಾರೆ. ಸಿನಿಮಾಗಳು ಮಾತ್ರವೇ ಅಲ್ಲದೇ ಜಾಹೀರಾತುಗಳಲ್ಲಿ ಸಹಾ ಮಿಂಚುತ್ತಿರುವ ನಟಿ ಸೋಶಿಯಲ್ ಮೀಡಿಯಾದಲ್ಲಿ ಸಹಾ ಆ್ಯಕ್ಟೀವ್ ಆಗಿದ್ದಾರೆ.

ಒಟ್ಟಾರೆ ವಿಚ್ಚೇದನದ ನಂತರ ಸಮಂತಾ ಮೊದಲಿನ ಹಾಗೆ ಉಳಿದಿಲ್ಲ. ಆದರೆ ಇನ್ನೊಂದು ಕಡೆ ಸಮಂತಾ ಇಂದ ಬೇರೆಯಾದ ಮೇಲೆ ನಾಗಚೈತನ್ಯ ಅವರಿಗೆ ಅದೃಷ್ಟ ಕೈಕೊಟ್ಟ ಹಾಗೆ ಇದೆ. ನಾಗಚೈತನ್ಯ ಅಭಿನಯದ ಸಿನಿಮಾಗಳು ಸೋಲಿನ ಹಾದಿ ಹಿಡಿದಿದೆ. ಲವ್ ಸ್ಟೋರಿ ನಿರೀಕ್ಷಿತ ಮಟ್ಟದ ಗೆಲುವನ್ನು ಪಡೆಯಲಿಲ್ಲ, ಬಂಗಾರ್ರಾಜು ಸಿನಿಮಾ ಬಂದು ಹೋಯಿತು, ಇನ್ನು ಬಹು ನಿರೀಕ್ಷೆ ಇಟ್ಟು ಕೊಂಡಿದ್ದ ಥ್ಯಾಂಕ್ಯೂ ಸಿನಿಮಾ ಸಹಾ ಕೈ ಕೊಟ್ಟಿತು. ಇನ್ನು ಅಮೀರ್ ಖಾನ್ ಜೊತೆ ನಟಿಸಿರುವ ಲಾಲ್ ಸಿಂಗ್ ಚಡ್ಡಾ ನಟನ ಕೈ ಹಿಡಿಯಬಹುದು ಎನ್ನುವ ನಿರೀಕ್ಷೆ ಇದೆ.

Leave a Comment