ಅದೊಂದು ಕಾರಣಕ್ಕೆ ಇಡೀ ಜೀವನ ಮದುವೆಯಾಗದೇ ಉಳಿದಿದ್ದರು ಸ್ವರಗಳ ರಾಣಿ ಲತಾ ಮಂಗೇಶ್ಕರ್

Entertainment Featured-Articles News
57 Views

ತಮ್ಮ ಜೀವನದ ಬಹಳಷ್ಟು ವರ್ಷಗಳನ್ನು ಹಾಡುಗಳನ್ನು ಹಾಡುವುದರಲ್ಲಿಯೇ ಕಳೆದ, ಸಂಗೀತದ ಜಗತ್ತನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದ ಸ್ವರಗಳ ರಾಣಿ ಲತಾ ಮಂಗೇಶ್ಕರ್ ಅವರು ಇನ್ನಿಲ್ಲ ಎನ್ನುವುದನ್ನು ಸಂಗೀತ ಪ್ರಿಯರಿಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಲತಾ ಮಂಗೇಶ್ಕರ್ ಅವರ ಧ್ವನಿಯು ಒಂದಲ್ಲಾ ಒಂದು ಹಾಡಿನ ಮೂಲಕ ಸಂಗೀತಪ್ರಿಯರು ಮಾತ್ರವೇ ಅಲ್ಲದೇ ಬಹಳಷ್ಟು ಜನರ ಮನಸ್ಸನ್ನು ಮುಟ್ಟಿದೆ. ಇಂಪಾದ ಸ್ವರ ಗಳ ಮೂಲಕ ಜನರ ಮನಸ್ಸನ್ನು ಗೆದ್ದ ಈ ದಿಗ್ಗಜ ಗಾಯಕಿಯು ತಮ್ಮ ಇಡೀ ಜೀವನವನ್ನು ಕ ಒಂಟಿಯಾಗಿಯೇ ಕಳೆದರು.

ಲತಾ ಮಂಗೇಶ್ಕರ್ ಅವರು ಇಡೀ ಜೀವನ ಅವಿವಾಹಿತರಾಗಿ ಉಳಿದಿದ್ದರು. ಜನರ ಮನಸ್ಸನ್ನು ಗೆದ್ದ ಇವರ ಮನಸ್ಸನ್ನು ಯಾರು ಗೆಲ್ಲಲೇ ಇಲ್ಲವೇ ಎನ್ನುವ ಪ್ರಶ್ನೆ ಖಂಡಿತ ಮೂಡುತ್ತದೆ. ಅಲ್ಲದೇ ಅನೇಕರ ಮನಸ್ಸಿನಲ್ಲಿ ಲತಾ ಮಂಗೇಶ್ಕರ್ ಅವರ ಜೀವನದಲ್ಲಿ ಪ್ರೀತಿ-ಪ್ರೇಮ ಎನ್ನುವುದು ಸುಳಿಯಲೇ ಇಲ್ಲವೇ ? ಎನ್ನುವ ಪ್ರಶ್ನೆಯೊಂದು ಮೂಡುತ್ತದೆ ಅವರು ವಿವಾಹವಾಗದೆ ಇರಲು ಕಾರಣವೇನು? ಎಂದು ಆಲೋಚನೆ ಬರುತ್ತದೆ. ಅಲ್ಲದೇ ಇದಕ್ಕೆ ಉತ್ತರವನ್ನು ಸಹಾ ತಿಳಿಯಲು ಬಯಸುತ್ತಾರೆ. ಹಾಗಿದ್ದರೆ ನಿಜ ಏನು ಎನ್ನುವುದಾದರೆ, ಲತಾ ಮಂಗೇಶ್ಕರ್ ಅವರ ಜೀವನದಲ್ಲಿ ಸಹ ಪ್ರೇಮಾಂಕುರವಾಗಿತ್ತು.

ಆದರೆ ಕೆಲವು ಕೌಟುಂಬಿಕ ಕಾರಣಗಳಿಂದ ಅದು ಮದುವೆಯ ಹಂತದವರೆಗೂ ಹೋಗಲಿಲ್ಲ ಎನ್ನಲಾಗುತ್ತದೆ. ಡೂಂಗರ್ ಪುರದ ಮಹಾರಾಜ, ದಿವಂಗತ ಕ್ರಿಕೆಟರ್ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷರೂ ಆಗಿದ್ದ ರಾಜಸಿಂಗ್ ಅವರು ಲತಾ ಮಂಗೇಶ್ಕರ್ ಅವರಿಗೆ ಮನಸೋತಿದ್ದರು. ತಮ್ಮ ಹೃದಯವನ್ನು ಸ್ವರಗಳ ರಾಣಿಗೆ ಅರ್ಪಿಸಿದ್ದರು. ಇದು ಯಾವ ಹಂತಕ್ಕೆ ಹೋಗಿತ್ತು ಎಂದರೆ, ಒಂದು ಸಲ ಲತಾ ಮಂಗೇಶ್ಕರ್ ಅವರು ಕೂಡಾ ಕ್ರಿಕೆಟ್ ಪಂದ್ಯವನ್ನು ನೋಡಲು ಸ್ಟೇಡಿಯಂಗೆ ಬಂದಿದ್ದರು.

ಲತಾ ಮಂಗೇಶ್ಕರ್ ಅವರಿಗೂ ರಾಜಸಿಂಹ ಅವರ ಬಗ್ಗೆ ಪ್ರೀತಿ ಇತ್ತು ಎಂದು ಹೇಳಲಾಗುತ್ತದೆ. ಆದರೆ ಅದರ ನಡುವಿನ ಪ್ರೀತಿ ಮದುವೆಯವರೆಗೂ ತಲುಪಲಿಲ್ಲ, ಇದಕ್ಕೆ ಕೆಲವು ಕೌಟುಂಬಿಕ ಕಾರಣಗಳು ಇದೆ ಎಂದು ಹೇಳಲಾಗುತ್ತದೆ. ಅದಾದ ನಂತರ ಲತಾ ಅವರು ವಿವಾಹವಾಗಲಿಲ್ಲ, ಅವರ ಜೀವನದಲ್ಲಿ ಮತ್ತೊಬ್ಬರಿಗೆ ಸ್ಥಾನವು ಸಿಗಲಿಲ್ಲ ಎನ್ನಲಾಗಿದೆ. ಇನ್ನು ಮಾಧ್ಯಮ ವರದಿಗಳ ಪ್ರಕಾರ ಬಾಲಿವುಡ್ ನಟ, ಗಾಯಕ ಆದರೂ ಕೂಡ ಲತಾ ಮಂಗೇಶ್ಕರ್ ಅವರನ್ನು ಇಷ್ಟಪಡುತ್ತಿದ್ದರಂತೆ.

ಕಿಶೋರ್ ಕುಮಾರ್ ಅವರು ಲತಾ‌ ಮಂಗೇಶ್ಕರ್ ಅವರನ್ನು ಹುಡುಕಿಕೊಂಡು ಸ್ಟಡಿಯೋಗಳಿಗೆ ಹೋಗುತ್ತಿದ್ದರು. ಆಗೆಲ್ಲ ಲತಾಮಂಗೇಶ್ಕರ್ ಅವರು ಅದನ್ನು ಇಷ್ಟಪಡುತ್ತಿರಲಿಲ್ಲ, ಅಲ್ಲದೇ ಅವರಿಗೆ ತನ್ನ ಹಿಂದೆ ಬರುತ್ತಿರುವುದು ಕಿಶೋರ್ ಕುಮಾರ್ ಎನ್ನುವುದು ಕೂಡಾ ತಿಳಿದಿರಲಿಲ್ಲವಂತೆ. ಸಂದರ್ಶನವೊಂದರಲ್ಲಿ ಲತಾಮಂಗೇಶ್ಕರ್ ಅವರು ನಾನು ಕಿಶೋರ್ ಕುಮಾರ್ ಅವರ ಜೊತೆಯಲ್ಲಿ ರೆಕಾರ್ಡಿಂಗ್ ಮಾಡಲು ಒಪ್ಪಿಕೊಳ್ಳುತ್ತಿರಲಿಲ್ಲ. ಕಾರಣ ಅವರು ನನ್ನನ್ನು ಬಹಳಷ್ಟು ನಗಿಸುತ್ತಿದ್ದರು, ಇದರಿಂದ ಹಾಡುಗಳನ್ನು ಹಾಡುವಾಗ ನನ್ನ ಧ್ವನಿ ಸರಿಯಾಗಿ ಬರುತ್ತಿರಲಿಲ್ಲ ಎಂದು ಹೇಳಿದ್ದನ್ನು ಸ್ಮರಿಸಬಹುದು.

Leave a Reply

Your email address will not be published. Required fields are marked *